ಪ.ಗೋ ಸಂಸ್ಮರಣಾ ಗ್ರಾಮೀಣ, ಮಾನವೀಯ ಹಾಗೂ ಅಭಿವೃದ್ಧಿಪರ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿತರ ಪರ್ತಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ (ಪದ್ಯಾಣ ಗೋಪಾಲಕೃಷ್ಣ ಭಟ್) ಸಂಸ್ಮರಣಾ ಗ್ರಾಮೀಣ, ಮಾನವೀಯ ಹಾಗೂ ಅಭಿವೃದ್ಧಿಪರ ವರದಿಗಾರಿಕೆ ಪ್ರಶಸ್ತಿ (ಪ.ಗೋ.ಪ್ರಶಸ್ತಿ)ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಗಳ ಕನ್ನಡ ಯುವ ಪತ್ರಕರ್ತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಸಲ್ಲಿಸುವವರ ವಯಸ್ಸು 45ಕ್ಕೆ ಮೀರಿರಬಾರದು. ಗ್ರಾಮೀಣ, ಮಾನವೀಯ ಮತ್ತು ಅಭಿವೃದ್ಧಿಪರ ವರದಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿ 10 ಸಾವಿರ ರೂ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. 2015ನೇ ಸಾಲಿನ ಪ್ರಶಸ್ತಿಗೆ 2015ರ ಜನವರಿ 1 ರಿಂದ ಡಿಸೆಂಬರ್ 31ರವರೆಗಿನ ವರದಿಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ವರದಿಯ ನಾಲ್ಕುಪ್ರತಿಗಳನ್ನು (ಒಂದು ಮೂಲ ಪ್ರತಿ ಕಡ್ಡಾಯ) ಸಲ್ಲಿಸಬೇಕು. ವರದಿ ಪ್ರಕಟವಾದ ದಿನಾಂಕದ ಕುರಿತಂತೆ ಸೂಕ್ತ ದಾಖಲೆ ಅಗತ್ಯ. ಅರ್ಜಿಗಳನ್ನು ಕಳುಹಿಸಲು ಜ.31 ಕೊನೆಯ ದಿನಾಂಕ.

ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಉರ್ವ ಮಾರ್ಕೆಟ್ ಮಂಗಳೂರು-6 ಇಲ್ಲಿಗೆ ಕಳುಹಿಸುವಂತೆ ಪರ್ತಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.