Breaking News

ಪುಣ್ಚತ್ತಾರು ಪೈಕ -ಕರಿಮಜಲಿನಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ ಮಂಗಳ ಕಾರ್ಯಗಳ ಸಂದರ್ಭದಲ್ಲಿ ಮಧ್ಯ, ಮಾಂಸ ಭೋಜನದ ವ್ಯವಸ್ಥೆಯಿಂದಾಗಿ ಭಾರತೀಯ ಸಂಸ್ಕೃತಿ ನಾಶ- ಮಾಣಿಲ ಶ್ರೀ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಊರಿನ ದೇವಸ್ಥಾನ ಮತ್ತು ದೈವಸ್ಥಾನ ಜೀರ್ಣೋದ್ಧಾರವಾಗಿ ಬ್ರಹ್ಮಕಲಶೋತ್ಸವ ನಡೆಯುವುದರಿಂದ ಊರಿನ ಜನರನ್ನು ಒಗ್ಗೂಡಿಸುವ ಕೆಲಸವಾಗುತ್ತದೆ ಜೊತೆಗೆ ದೀನದಲಿತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ಅವರ ಸೇವೆ ಮಾಡುವುದು ಕೂಡ  ದೇವರ ಸೇವೆ ಮಾಡಿದಂತಾಗುತ್ತದೆ. ದೇವಸ್ಥಾನ ಮತ್ತು ದೈವಸ್ಥಾನಗಳ ಬ್ರಹ್ಮಕಲಶೋತ್ಸದಲ್ಲಿ ಜಾತಿ ಧರ್ಮವನ್ನು ಬಿಟ್ಟು ಊರಿನ ಜನರನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತದೆ. ಅದಕ್ಕೆ ಅಂತಹ ಶಕ್ತಿಯಿದೆ. ನಾವು ನಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ನಮ್ಮ ಗುರುಹಿರಿಯನ್ನು ಪೂಜ್ಯನೀಯ ಭಾವದಿಂದ ಗೌರವಿಸಿ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಶ್ರೀ ದಾಮ ಮಾಣಿಲ ಮೋಹನದಾಸ ಸ್ವಾಮೀಜಿಯವರು ಹೇಳಿದರು. ಅವರು ಜ ೧೪ರಂದು ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ- ಕರಿಮಜಲು ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ, ಶ್ರೀ ಚಾಮುಂಡಿ, ಪರಿವಾರ ದೈವಗಳ ಹಾಗೂ ಶ್ರೀ ಅಮ್ಮನವರ ಗ್ರಾಮ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ನಮ್ಮ ಹಿರಿಯರಿಂದ ಬಂದ ಸಂಸ್ಕೃತಿ ಮತ್ತು ಸಂಪ್ರಾದಾಯಗಳನ್ನು ಮೀರಿ ನಡೆಯುತ್ತಿದ್ದೇವೆ. ಮದುವೆ ಮುಂತಾದ ಮಂಗಳ ಸಮಾರಂಭಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮಧ್ಯ, ಮಾಂಸ ಸೇವನೆಯ ಭೋಜನದ ವ್ಯವಸ್ಥೆಯನ್ನು ಮಾಡುತ್ತೇವೆ. ತುಂಡು ಮತ್ತು ಗುಂಡುಗಳಿಂದಾಗಿ ನಮ್ಮ ಭಾರತೀಯ ಸಂಸ್ಕೃತಿ ನಾಶವಾಗುತ್ತಿದೆ. ಧಾರ್ಮಿಕವಾಗಿ ನಡೆಯಬೇಕಾದ ಕಾರ್ಯಕ್ರಮಗಳನ್ನು ಒಂದು ಪ್ಯಾಶನ್ ರೀತಿಯಲ್ಲಿ ನಡೆಯುತ್ತಿದೆ. ಇಂತಹ ಪ್ರಸಿದ್ಧ, ದೇವಸ್ಥಾನ ಮತ್ತು ದೈವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಪೂಜಾ ಪುರಸ್ಕಾರಗಳಲ್ಲಿ ಮನಸ ಅರ್ಪಣೆಯ ಮೂಲಕ ತಾವುಗಳು ತೊಡಗಿಸಿಕೊಳ್ಳಬೇಕಾಗಿದೆ. ನಮ್ಮಲ್ಲಿರುವ ದುಶ್ಚಟ, ದುಶ್ಕರ್ಮಗಳು ದೂರವಾಗಿ ಸತ್ಕರ್ಮಗಳಲ್ಲಿ ತೊಗಿಸಿಕೊಂಡು ಧರ್ಮದಲ್ಲಿ ನಡೆಯುವ ಮೂಲಕ ಹಿಂದು ಸಮಾಜದ ಬಾಂಧವ್ಯಗಳನ್ನು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದರು. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಮೋಹನ ಗೌಡ ಇಡ್ಯಡ್ಕರವರು ಮಾತನಾಡಿ.  ಸೇವೆಯು ಪ್ರಚಾರಕ್ಕೆ ಸೀಮಿತವಾಗದೆ ಪ್ರೇರಣೆಯನ್ನು ನೀಡಬೇಕು. ಇನ್ನೊಬ್ಬರಿಗೆ ಉಪಕಾರ ಮಾಡಿದರೆ ಭಗವಂತನ ಬೆಂಬಲವೂ ಸಿಗುತ್ತದೆ ಸ್ವಾತಿಕ ಚಿಂತನೆಯನ್ನು ಪ್ರತಿಯೊಬ್ಬರಲ್ಲಿ ಮೂಡಿಸುವುದು ಮುಖ್ಯವಾಗುತ್ತದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶೀನಪ್ಪ ಗೌಡ ಕಿನ್ನಿಕುಮೇರು ಶುಭಹಾರೈಸಿದರು. ಪೈಕ ಕರಿಮಜಲು ಗ್ರಾಮ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕೊರಗಪ್ಪ ರೈ ಮಾಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಠಲ ರೈ ಮಾಳ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರದೀಪ್ ಬೊಬ್ಬೆಕೇರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಪೈಕರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಪೈಕರವರು ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ಪ್ರವೀಣ್‌ಚಂದ್ರ ರೈ ಕುಮೇರು ಸ್ವಾಗತಿಸಿ, ದಿನೇಶ್ ಮಾಳ ವಂದಿಸಿದರು. ನವೀನ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲತ್ತಾಯ ಇವರ ನೇತೃತ್ವದಲ್ಲಿ  ಪುಣ್ಚತ್ತಾರು ಪೈಕ- ಕರಿಮಜಲು ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ, ಶ್ರೀ ಚಾಮುಂಡಿ, ಪರಿವಾರ ದೈವಗಳ ಹಾಗೂ ಶ್ರೀ ಅಮ್ಮನವರ ಗ್ರಾಮ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಸಂಜೆ ಪೈಕಮಾಲೈದಿಂದ ಕರಿಮಜಲು ದೈವಸ್ಥಾನದವರೆಗೆ ಭಂಡಾರ ಆಗಮಿಸಿ, ರಾತ್ರಿ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಬಿಂಬ ಪರಿಗ್ರಹ, ಪುಣ್ಯಾಹ ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಬಲಿ, ಅಸ್ತ್ರಕಲಶ ಬಿಂಬ ಜಲಾಧಿವಾಸ ನಡೆಯಿತು.

ಆಕರ್ಷಕ ಸುಡುಮದ್ದು ಪ್ರದರ್ಶ– ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುದ್ರೋಳಿ ಗಣೇಶ್ ಇವರಿಂದ ವಿಸ್ಮಯ್ಯ ಜಾದು ಪ್ರದರ್ಶನ ನಡೆಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮಗಳು: ಜ 16ರಂದು ಪೈಕಮ್ಯಾಲೆಯಲ್ಲಿ ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಸಾನ್ನಿಧ್ಯ ಕಲಶ ಪೂಜೆ, ಭಂಡಾರದ ಮನೆ ಪ್ರವೇಶ, ಸಾನ್ನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನಡೆಯಲಿವೆ.

 

20160114204436

ಚಿತ್ರ: ಸುಧಾಕರ್ ಕಾಣಿಯೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.