ಬೊಳುವಾರಿನಲ್ಲಿ “ಲಾಲಿತ್ಯ” ಉದ್ಘಾಟನೆ – ಸಾಂಸ್ಕೃತಿಕ ಸಂಸ್ಥೆಗಳು ಹೆಚ್ಚಾದಂತೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ- ಚಿದಾನಂದ ಕಾಮತ್

Puttur_Advt_NewsUnder_1
Puttur_Advt_NewsUnder_1

bolwara.jpg2

bolwara

ಪುತ್ತೂರು: ಬೊಳುವಾರು ಹಿರಣ್ಯ ಕಾಂಪ್ಲೆಕ್ಸ್‌ನಲ್ಲಿ ವಿವಿಧ ಸಂಗೀತ ಉಪಕರಣಗಳ ನುಡಿಸುವಿಕೆಯ ತರಬೇತಿಯ ತರಬೇತಿ ನೀಡುವ ’ಲಾಲಿತ್ಯ ’ದಿ ಮ್ಯೂಸಿಕಲ್ ಹಬ್ ಇನ್ಸ್ ಪ್ಯೂಷನ್ ಜ.14ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ಹಿರಿಯ ವಿಧ್ಯಾರ್ಥಿ ಕೀಬೋರ್ಡ್ ಕಲಾವಿದೆ ಪುಟಾಣಿ ಸಂಧ್ಯಾ ಪ್ರಭು ಪ್ರಾರಂಭದಲ್ಲಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿ  ಬೊಳುವಾರು ಸಾಂಸ್ಕೃತಿಕ ಕಲಾಖೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಮಾತನಾಡಿ’ ದುಶ್ಚಟಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಹವ್ಯಾಸಗಳು ಉತ್ತಮ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಸಂಸ್ಥೆಗಳು ಹೆಚ್ಚಾದಂತೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ. ಸಂಸ್ತೆ ಅಭಿವೃದ್ಧಿ ಪಥದಲ್ಲಿ ಸಾಗಲಿ” ಎಂದು ನುಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಷ್ಟ್ರ ಪ್ರಶಸ್ತಿ ಪರಸ್ಕೃತ ಸ್ಯಾಕ್ಸೊಫೋನ್ ಕಲಾವಿದ ಪಿ.ಕೆ.ಗಣೇಶ್, ಬೊಳುವಾರು ಪುನೀತ್ ಆಕೇಸ್ಟ್ರಾ ನಿರ್ದೇಶಕ, ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ, ಹಿರಿಯರಾದ ರಾಮಚಂದ್ರ ಶಾಸ್ತ್ರಿ, ಕೃಷ್ಣೋಜಿ ರಾವ್ ಸಕಲೇಶಪುರ ಶುಬಹಾರೈಸಿದರು.

ಈ ಸಂದರ್ಭದಲ್ಲಿ ಶಕಲೇಶಪುರದ ವಿಶ್ವನಾಥ್, ವಸಂತ್, ವಿನಯ್ ಕುಮಾರ್, ಸತೀಶ್, ಹಿರಿಯ ಗಾಯಕರುಗಳಾದ ಕಿರಣ್ ಕುಮಾರ್ ಗಾನಸಿರಿ, ಶಿವಾನಂದ ಶೆಣೈ ದರ್ಬೆ ಸಮೃದ್ಧಿ ಮ್ಯೂಸಿಕಲ್ಸ್, ಜಿ.ಎಸ್.ಬಿ. ಮಹಿಳಾ ವೃಂದದ ಅಧ್ಯಕ್ಷೆ ಸುಮನ ಪ್ರಭು, ಸದಸ್ಯೆ ರಜನಿ ಪ್ರಭು ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕೆ.ಜಿ. ಚಂದ್ರಶೇಖರ ಆಚಾರ್ಯ ಪ್ರಾಸ್ತಾವಿಕವಗಿ ಮಾತುಗಳನ್ನಾಡಿ ಸ್ವಾಗತಿಸಿದರು. ಸೀಮಿತ್ ಆಚಾರ್ಯ ವಂದಿಸಿದರು. ವಿನಯ್ ಕುಮಾರ್ ಬೊಳ್ಳಂದೂರು ನಿರೂಪಿಸಿದರು. ಚಂದ್ರಶೇಖರ ಶಕಲೇಶಪುರ ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.