ದಿ.ರಾಜಗೋಪಾಲ ನೋಂಡರ ಚತುರ್ಥ ವರ್ಷದ ಪುಣ್ಯಸ್ಮರಣಾರ್ಥ ಕಾಣಿಯೂರಿನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

106ಕಾಣಿಯೂರು: ಕೀರ್ತಿಶೇಷ ರಾಜಗೋಪಾಲ ನೋಂಡರು ಸಂಘ ಸಂಸ್ಥೆಗಳ ಮುಖಾಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಪ್ರಾಮಾಣಿಕವಾಗಿ ಸೇವೆಗೈದ ವ್ಯಕ್ತಿ. ಅವರ ನೆನಪು ಶಾಶ್ವತವಾಗಿ ಉಳಿಯಬೇಕಾದರೆ ಇಂತಹ ಶಿಬಿರದ ಮೂಲಕ ಮಾತ್ರ ಸಾಧ್ಯ. ಹಲವಾರು ರೋಗಿಗಳ ಕಣ್ಣೀರನ್ನು ಒರೆಸುವ ಕಾರ್ಯ ಈ ಶಿಬಿರದ ಮೂಲಕ ಆಗಲಿ. ಈ ಶಿಬಿರದ ಪ್ರಯೋಜನವನ್ನು ಪಡೆಯುವುದರ ಮೂಲಕ ರಾಜಗೋಪಾಲ ನೋಂಡರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ನಮ್ಮನ್ನಗಲಿ ಇಂದಿಗೆ ನಾಲ್ಕು ವರುಷಗಳು ಸಂದರೂ ಅವರ ನೆನಪು ನಮ್ಮ ಮನದಂಗಳದಲ್ಲಿ ಉಳಿದಿದೆ. ನಮ್ಮ ನೋವನ್ನು ಮರೆಯಬೇಕಾದರೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದು ಕಾಣಿಯೂರಿನ ಕುಮಾರ್ ಕ್ಲಿನಿಕ್‌ನ ಡಾ. ಉದಯ ಕುಮಾರ್‌ರವರು ಹೇಳಿದರು. ಅವರು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ ೧೫ ರಂದು ನಡೆದ ದಿ. ರಾಜಗೋಪಾಲ ನೋಂಡರವರ ಚತುರ್ಥ ವರ್ಷದ ಪುಣ್ಯಸ್ಮರಣಾರ್ಥವಾಗಿ ಕಾಣಿಯೂರಿನ ವಿನಾಯಕ ಮೆಡಿಕಲ್ಸ್ ಆಶ್ರಯದಲ್ಲಿ ದಿ. ರಾಜಗೋಪಾಲ ನೋಂಡ ಮಿತ್ರವೃಂದದವರ ಸಹಕಾರದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯರವರು ವಹಿಸಿ ಮಾತನಾಡಿ, ರಾಜಗೋಪಾಲ ನೋಂಡರ ನೆನಪು ಎಲ್ಲರ ಮನಸಿನಲ್ಲಿ ಅಚ್ಚಳಿಯದೆ ಉಳಿಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ಪುಣ್ಯದ ಕೆಲಸ. ರಾಜಗೋಪಾಲರವರ ಜೀವನ ಕ್ರಮವನ್ನು ಇಂತಹ ಶಿಬಿರದ ಮುಖಾಂತರ ಸ್ಮರಿಸುತ್ತಿರುವುದು ಶ್ಲಾಘನೀಯ ಎಂದರು. ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ವ್ಯವಸ್ಥಾಪಕ ಲವಿನ್‌ರವರು ಶಿಬಿರದ ಕುರಿತು ಮಾಹಿತಿ ನೀಡಿದರು. ಹಿರಿಯರಾದ ಶ್ರೀಧರ ರೈ ಮಾದೋಡಿ, ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಜಯಂತ ವೈ, ಕಾಣಿಯೂರು ಶಾಲಾ ಶಿಕ್ಷಕಿ ಮೋಹಿನಿರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಜಗೋಪಾಲ ನೋಂಡರವರ ಪತ್ನಿ ಶುಭಾ ಆರ್ ನೋಂಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಭಾ ಆರ್ ನೋಂಡ, ವಿಭಾ ಆರ್ ನೋಂಡ ಮತ್ತು ದಿಯಾರವರು ಅತಿಥಿಗಳನ್ನು ಗೌರವಿಸಿದರು. ಕಿಶಾನ್ ಆಳ್ವ, ಚಿದಾನಂದ ಅಬೀರ, ಉಮೇಶ್ ಬಂಡಾಜೆ, ವಸಂತ ರೈ ಕಾರ್ಕಳ, ರಜನಿ ರೈ ಮಾದೋಡಿ, ರಮೇಶ್ ಅಬೀರರವರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಕಾಣಿಯೂರು ಶಾಲಾ ವಿದ್ಯಾರ್ಥಿನಿಯರಾದ ಶ್ರೀದೇವಿ, ಭವ್ಯಶ್ರೀ, ಮಧುಶ್ರೀ, ದೀಕ್ಷಾರವರು ಪ್ರಾರ್ಥಿಸಿದರು. ಶೀನಪ್ಪ ಆಳ್ವರವರು ಸ್ವಾಗತಿಸಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳರವರು ವಂದಿಸಿದರು. ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ನಾರಾಯಣ ಭಟ್ ಕಾಣಿಯೂರು ಕಾರ್ಯಕ್ರಮ ನಿರೂಪಿಸಿದರು. ಕಣ್ಣು, ಎಲುಬು ಮತ್ತು ಕೀಲು, ಕಿವಿ, ಮೂಗು, ಗಂಟಲು, ಚರ್ಮರೋಗ, ಶಸ್ತ್ರಚಿಕಿತ್ಸೆ, ವೈದ್ಯಕೀಯ ತಪಾಸಣೆ, ಸಾಮಾನ್ಯ ರೋಗ, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು ಶಿಬಿರದಲ್ಲಿ ಭಾಗವಹಿಸಿದರು.
ಭಾವಚಿತ್ರಕ್ಕೆ ಪುಷ್ಪಾರ್ಚಣೆ: ಆಗಮಿಸಿದ ಕುಟುಂಬದವರು, ಹಿತೈಷಿಗಳು, ಅಭಿಮಾನಿಗಳು ರಾಜಗೋಪಾಲ ನೋಂಡರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಮರ್ಪಿಸಿದರು.

20160114213159

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.