ಅರಿಯಡ್ಕ : ವಿವಿಧ ಕಾಮಗಾರಿಗಳಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

33164283-1aaa-4f38-994f-986aadb1a873ಅರಿಯಡ್ಕ : ಅರಿಯಡ್ಕ ಗ್ರಾಮ ಪಂಚಾಯತು ವ್ಯಾಪ್ತಿಯ ಅರಿಯಡ್ಕ ಗ್ರಾಮದಲ್ಲಿ ತಾಲೂಕು ಪಂಚಾಯತು ಅನುದಾನ ಮತ್ತು ಗ್ರಾಮ ಪಂಚಾಯತು ಅನುದಾನಗಳ ಕೆಲಸ ಕಾರ‍್ಯಗಳಿಗೆ ಕೌಡಿಚ್ಚಾರು – ಅರಿಯಡ್ಕ ದೇರ್ಲ ರಸ್ತೆ ಕಾಮಗಾರಿಗೆ ಜ.14ರಂದು ಪಂಚಾಯತ್ ಅಧ್ಯಕ್ಷೆ ಸವಿತಾ.ಎಸ್. ಚಾಲನೆ ನೀಡಿದರು. ತಾಲೂಕು ಪಂಚಾಯತ್‌ನಿಂದ ಬಿಡುಗಡೆಯಾದ ಅನುದಾನದಲ್ಲಿ ಎರ್ಕ-ಶೇಖಮಲೆ ರಸ್ತೆ ಅಭಿವೃದ್ಧಿ ಮತ್ತು ಪಾಪೆಮಜಲು-ಕುರಿಂಜ ರಸ್ತೆ ಅಭಿವೃದ್ಧಿ. ಪಂಚಾಯತ್ ಅನುದಾನದ ಕಾಮಗಾರಿಗಳು- ಅರಿಯಡ್ಕ ಗ್ರಾಮದ ಶೇಖಮಲೆ ಪ.ಜಾತಿ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ಪ.ಪಂಗಡದ ಕುಟುಂಬಗಳ  ಸಂಪರ್ಕ ರಸ್ತೆ ಬದಿಗೆ ತಡೆಬೇಲಿ ನಿರ್ಮಾಣ, ಪೈಲಕಲ್ಲು ಪ.ಪಂಗಡ ಕಾಲನಿಯ ಕುಡಿಯುವ ನೀರು ಟ್ಯಾಂಕಿ ರಚನೆ, ಪಾಪೆಮಜಲು ಪ.ಪಂಗಡ ಕಾಲೋನಿಯ ಕುಟುಂಬಗಳಿಗೆ ಕುಡಿಯುವ ನೀರು ಉದ್ದೇಶಕ್ಕೆ ಪೈಪು ಲೈನು ವಿಸ್ತರಣೆ, ಪೈಲಕಲ್ಲು ರಸ್ತೆ ಕಾಮಗಾರಿ ಅಭಿವೃದ್ಧಿ, ಕೋಡಿಯಡ್ಕದಲ್ಲಿ ಕುಡಿಯುವ ನೀರಿನ ಟ್ಯಾಂಕಿ ದುರಸ್ತಿ, ಪಟ್ಲಕಾನ ಎಂಬಲ್ಲಿ ಹೊಸದಾಗಿ ನೀರಿನ ಪೈಪುಲೈನ್ ವಿಸ್ತರಣೆ, ತ್ಯಾಗರಾಜ ರಸ್ತೆಗೆ ಸೋಲಾರ್ ದೀಪ ಅಳವಡಿಕೆ, ಕೌಡಿಚ್ಚಾರು ಮುಖ್ಯರಸ್ತೆಯಲ್ಲಿ ಸೋಲಾರ್ ದೀಪ ಅಳವಡಿಕೆ, ಶೇಖಮಲೆ ಜಂಕ್ಷನ್ ಬಳಿ ಸೋಲಾರ್ ದೀಪ ಅಳವಡಿಕೆ, ಶೇಖಮಲೆ, ಜಾರತ್ತಾರು, ಮಜ್ಜಾರಡ್ಕ, ಕೌಡಿಚ್ಚಾರು ಮತ್ತು ಪಾಪೆಮಜಲು ಅಂಗನವಾಡಿ ಕೇಂದ್ರಗಳಿಗೆ ನೀರಿನ ಟ್ಯಾಂಕ್ ವಿತರಣೆ, ಜಾರತ್ತಾರು ರಸ್ತೆಗೆ ಮೋರಿ ರಚನೆ, ದಾರಿದೀಪ ದುರಸ್ತಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಪಂಚಾಯತ್ ಸದಸ್ಯರಾದ ತಿಲಕ್ ರೈ ಕುತ್ಯಾಡಿ, ಸಂತೋಷ್ ಕುಮಾರ್ ಕುತ್ಯಾಡಿ, ಸುಂದರ ಶೇಖಮಲೆ, ಪ್ರೇಮಲತಾ ರೈ ಮಡ್ಯಂಗಳ, ಅಮೃತಾ, ಮಾಜಿ ಪಂಚಾಯತ್ ಸದಸ್ಯರಾದ ಲೋಕೇಶ್ ರೈ ಅಮೈ, ಉಮೇಶ್ ಗೌಡ ಕನ್ನಯ, ಬಿ.ಜೆ.ಪಿ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ರೈ ಜಾರತ್ತಾರು. ಸ್ಥಳೀಯರಾದ ಐತ್ತಪ್ಪ ಮಣಿಯಾಣಿ, ದಾಮೋದರ ರೈ ಪನೆಕ್ಕಳ, ಲಕ್ಷ್ಮಣ ಗೌಡ ಮಡ್ಯಂಗಳ, ಪ್ರಮೋದ್ ರೈ, ಪಂಚಾಯತ್ ಲೆಕ್ಕ ಸಹಾಯಕ ರವೀಂದ್ರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ/ವರದಿ : ತಿಲಕ್ ರೈ ಕುತ್ಯಾಡಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.