ನರಿಮೊಗರು: ಯುವಜನ ಮೇಳ ಸಮಿತಿಯಿಂದ ಅಭಿನಂದನಾ ಸಭೆ, ಲೆಕ್ಕ ಪತ್ರ ಮಂಡನೆ

Puttur_Advt_NewsUnder_1
Puttur_Advt_NewsUnder_1

IMG_20160114_171832ಪುತ್ತೂರು: ಯುವಕ ಮಂಡಲ ನರಿಮೊಗರು ಪುರುಷರಕಟ್ಟೆ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಜಿ.ಪಂ., ತಾ.ಪಂ. ಗ್ರಾ.ಪಂ. ಸಹಕಾರದೊಂದಿಗೆ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆದ ಪುತ್ತೂರು ತಾಲೂಕು ಮಟ್ಟದ ಯುವಜನ ಮೇಳದ ಯಶಸ್ವಿಗೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸುವ ಮತ್ತು ಲೆಕ್ಕ ಪತ್ರ ಮಂಡನೆ ಸಭೆ ಜ.14ರಂದು ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.

ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಅವರು ಮಾತನಾಡಿ, ಸಾಮೂಹಿಕ ಕಾರ‍್ಯಕ್ರಮಗಳಿಗೆ ಎಲ್ಲರೂ ಪಕ್ಷ ಬೇಧ ಮರೆತು ದುಡಿದಾಗ ಕಾರ‍್ಯಕ್ರಮ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎನ್ನುವುದಕ್ಕೆ ಇಲ್ಲಿ ನಡೆದ ಯುವಜನ ಮೇಳ ಸಾಕ್ಷಿಯಾಗಿದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಯುವಜನ ಮೇಳ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಯುವಜನ ಮೇಳ ಯಾವುದೇ ಲೋಪ ದೋಷವಿಲ್ಲದೆ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿ ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ.ಅವರು ಮಾತನಾಡಿ, ಯಾವುದೇ ಕಿರಿ ಕಿರಿ ಇಲ್ಲದೆ ಈ ಸಾಲಿನ ಯುವಜನ ಮೇಳ ಅದ್ದೂರಿಯಾಗಿ ನಡೆದಿದೆ. ಸ್ಪರ್ಧಾಳುಗಳ ಸಂಖ್ಯೆಯೂ ಹಿಂದಿನ ಮೇಳಗಳಿಗಿಂತ ಹೆಚ್ಚಾಗಿದ್ದರು ಎಂದರು. ಸಹಕರಿಸಿದ ಸಾಂದೀಪನಿ ವಿದ್ಯಾ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳಿಗೆ, ಯುವಕ, ಯುವತಿ ಮಂಡಲಗಳಿಗೆ, ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರು ಮಾತನಾಡಿ, ಯುವ ಜನ ಮೇಳವನ್ನು ಯಶಸ್ವಿಯಾಗಿ ನಡೆಸಬೇಕೆಂಬ ನಿಟ್ಟಿನಲ್ಲಿ ಸ್ಪರ್ಧಾಳುಗಳ ಸಂಖ್ಯೆಯನ್ನು ಹೆಚ್ಚಿಸಲು ಯುವಜನ ಒಕ್ಕೂಟ ಅತ್ಯಂತ ಶ್ರಮವಹಿಸಿದೆ. ಕೆಲವು ಯುವಕ, ಯುವತಿ ಮಂಡಲಗಳ ಕೆಲವೊಂದು ಖರ್ಚನ್ನು ಒಕ್ಕೂಟದ ವತಿಯಿಂದ ಭರಿಸಲಾಗಿದೆ ಎಂದರು.

ಸ್ವಾಗತ ಸಮಿತಿ ಸಂಚಾಲಕಿ, ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಮುಕ್ವೆ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಸಾಂದೀಪನಿ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ.ಎನ್. ಉಪಸ್ಥಿತರಿದ್ದರು.

 ಯುವಜನ ಮೇಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ಕುಲಾಲ್‌ರವರು ಸ್ವಾಗತಿಸಿ,  ಲೆಕ್ಕಪತ್ರ ಮಂಡಿಸಿದರು. ಆರ್ಥಿಕ ಸಮಿತಿಯ ಸಂಚಾಲಕಿ ಯಶೋದ ಕೆ. ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.