Breaking News

ರೈತರಿಗೆ ಕುಮ್ಕಿ ಹಕ್ಕುಪತ್ರ ನೀಡಲು ಒತ್ತಾಯಿಸಿ ಜ.27ರಂದು  ಕರ್ನಾಟಕ ರಾಜ್ಯ ರೈತ ಸಂಘದಿಂದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

20160115_103705

ಹಾಲಿನ ಬೆಲೆ ಏರಿಕೆಯೊಂದಿಗೆ ಪಶು ಆಹಾರದ ದರವನ್ನು ಏರಿಸಿರುವ ಕೆಎಂಎಫ್ ಹಗಲು ದರೋಡೆ ವಿರುದ್ಧವು ಪ್ರತಿಭಟನೆ

ಪುತ್ತೂರು: ತಲೆ ತಲಾತರಗಳಿಂದ ಜಿಲ್ಲೆಯ ರೈತರು ಕೃಷಿ ಸಂಬಂಧಿತ ಕುಮ್ಕಿ, ಕಾನ, ಬಾನೆ ಜಮೀನುಗಳ ಅನುಭೋಗದಾರರಾಗಿದ್ದು ಸದ್ರಿ ಜಮೀನುಗಳ ಹಕ್ಕು ಪತ್ರ ನೀಡುವಂತೆ ಮತ್ತು ಹಾಲಿನ ದರ ಏರಿಸಿ ಜೊತೆಗೆ ಪಶು ಆಹಾರದ ಬೆಲೆ ಏರಿಸಿ ಹಗಲು ದರೋಡೆ ಮಾಡುತ್ತಿರುವ ಕೆಎಂಎಫ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ.ಜಿಲ್ಲಾ ಸಮಿತಿಯಿಂದ ಜ.೨೭ರಂದು ಇಲ್ಲಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 ಕುಮ್ಕಿ ಸವಲತ್ತನ್ನು ರೈತರಿಂದ ಕಸಿಯಲಾಗುತ್ತಿದೆ ಎಂಬ ಗೊಂದಲ ಇತ್ತೀಚಿನ ದಿನಗಳಲ್ಲಿ ಉಂಟಾಗಿದೆ. ಆದರೂ  ಕುಮ್ಕಿ ಸವಲತ್ತಿನ ಮೇಲೆ ಶಾಶ್ವತ ಹಕ್ಕು ರೈತರಿಗೆ ಕೊಡುವುದು ಸರಕಾರದ ಕರ್ತವ್ಯ. ಈ ಹಕ್ಕನ್ನು ತಕ್ಷಣ ಸರಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆಗ್ರಹಿಸಿದೆ.  ಬ್ರಿಟಿಷ್ ಆಡಳಿತ ಕಾಲದಿಂದಲೇ ರೈತರು ಅನುಭವಿಸಿಕೊಂಡು ಬರುತ್ತಿದ್ದ ಕುಮ್ಕಿ ಜಮೀನಿನ  ಹಕ್ಕುಪತ್ರವನ್ನು ರೈತರಿಗೆ ನೀಡುವ ನಿಟ್ಟಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಒಂದಷ್ಟು ಪ್ರಯತ್ನಗಳು ಆಗಿದ್ದರೂ ಅದು ಫಲ ಕೊಟ್ಟಿಲ್ಲ. ಈ ಸರಕಾರಕ್ಕೂ ಈ ಸಂಬಂಧ ಮನವಿ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿರುವ ಕುಮ್ಕಿ, ಸವಲತ್ತಿನ ಮೇಲೆ ಸರಕಾರ ಹಕ್ಕುಪತ್ರ ನೀಡುವ ಕೆಲಸ ಮಾಡದಿದ್ದರೆ ಮುಂದೆ ಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆ ಬಹಿಷ್ಕರಿಸುವಂತೆ ಅವರು ಕರೆ ಎಚ್ಚರಿಸಿದರು.

2008 ರಲ್ಲಿ ಅಕ್ರಮ ಭೂ ಒತ್ತುವರಿ ಕಾರ್ಯ ರಾಜ್ಯದಲ್ಲಿ ಆರಂಭಗೊಂಡಿದ್ದು, ಈ ಸಂಬಂಧ  ಸರಕಾರ ಸುತ್ತೋಲೆ ಹೊರಡಿಸಿತು. ಆದರೆ ಒತ್ತುವರಿ ತೆರವು ಸುತ್ತೋಲೆಯಲ್ಲಿ ಜಮೀನಿನ ಹೆಸರು ವರ್ಗೀಕರಣ ಮಾಡಿಲ್ಲ. ಇದರ ಬೆನಲ್ಲೆ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣ್ಯ ಸಮಿತಿ ರಚಿಸಿ ವರದಿ ಸಲ್ಲಿಸಲಾಯಿತು. ಆದರೆ ಇನ್ನೂ ಈ ಕುರಿತು ಸರಕಾರ ಕ್ರಮ ಕೈಗೊಂಡಿಲ್ಲ ಎಂದರು.

ಕೆಎಂಎಫ್‌ನಿಂದ ಹಗಲು ದರೋಡೆ:

ಹಾಲಿನ ದರ ಏರಿಕೆ ಮಾಡಿರುವ ಕೆಎಂಎಫ್ ಹೈನುಗಾರಿಕೆಗೆ ಕೇವಲ ರೂ.24  ನೀಡಿ. ಸಬ್ಸಿಡಿ ಹಣವನ್ನು ನೀಡದೆ ಹೈನುಗಾರ ರೈತರಿಂದ ಹಗಲು ದರೋಡೆ ಮಾಡುತ್ತಿದೆ. ಲೀಟರ್ ಒಂದಕ್ಕೆ ರೂ.3  ರಂತೆ ಹೆಚ್ಚುವರಿ ಪ್ರೋತ್ಸಾಹಧನವನ್ನು ನೇರ ರೈತರಿಗೆ ನೀಡುತ್ತೇವೆ ಎನ್ನುತ್ತಾ ಇನ್ನೊಂದೆಡೆ ಪಶು ಆಹಾರದರವನ್ನು ಏಕಾಏಕಿ ಏರಿಕೆಗೊಳಿಸಿರುವುದು ಕೇವಲ ಕಣ್ಣೊರೆಸುವ ತಂತ್ರವೇ ಆಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ ಹೇಳಿದರು. ಅದೇ ರೀತಿ ತೆಂಗು ಮತ್ತು ರಬ್ಬರ್ ಬೆಳೆಗಳಿಗೂ ತಕ್ಷಣ ಬೆಂಬಲ ಬೆಲೆ ನೀಡಬೇಕೆಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಯನ್. ಈಶ್ವರ ಭಟ್, ಬಡಿಲ, ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.