Breaking News

ಪುಣ್ಚಪ್ಪಾಡಿ : ಧರ್ಮ ನಡಾವಳಿ ಆಮಂತ್ರಣ ಬಿಡುಗಡೆ, ಚಪ್ಪರ ಮುಹೂರ್ತ

Puttur_Advt_NewsUnder_1
Puttur_Advt_NewsUnder_1

DSC_0055

ಚಿತ್ರ ; ಸಿಂಧೂರ ಸವಣೂರು

ಪಾಲ್ತಾಡಿ : ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಧರ್ಮಅರಸು ಉಳ್ಳಾಕುಲು ದೈವಸ್ಥಾನದಲ್ಲಿ  ಧರ್ಮಅರಸು ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ಧರ್ಮನಡಾವಳಿ ಜಾತ್ರೋತ್ಸವ ಫೆ.15 ಮತ್ತು 16 ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಬಿಡುಗಡೆ, ಚಪ್ಪರ ಮುಹೂರ್ತ ಜ.14 ರಂದು ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ್ ಸುಲಾಯ ಬಿಡುಗಡೆ ಮಾಡಿ ಮಾತನಾಡಿ, ತುಳುನಾಡು ಸಂಸ್ಕೃತಿಯ ನೆಲೆವೀಡು, ತುಳುನಾಡಿನ ದೈವರಾಧನೆ, ನಾಗಾರಾಧನೆ ವೈಶಿಷ್ಟ್ಯತೆಯನ್ನು ಹೊಂದಿದ್ದು ಕುಟುಂಬದೊಳಗಿನ  ಬೆಸುಗೆಯನ್ನು ಗಟ್ಟಿಗೊಳಿಸುತ್ತದೆ ಎಂದರು.

ಚಪ್ಪರ ಮುಹೂರ್ತವನ್ನು ಪತ್ರಕರ್ತ ಪ್ರವೀಣ್ ಚೆನ್ನಾವರ ಮಾಡಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ  ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ,ಸೇವಾ ಸಮಿತಿಯ ಗೌರವಾಧ್ಯಕ್ಷ ಹರೀಶ್ ರೈ ಸಾರಕರೆ, ಅಧ್ಯಕ್ಷ ದಿಲೀಪ್ ಹೆಗ್ಡೆ ನೇರೊಳ್ತಡ್ಕ, ಕಾರ್ಯದರ್ಶಿ ಕರುಣಾಕರ ಗೌಡ ಸಾರಕರೆ, ಸದಸ್ಯರಾದ ಗಣೇಶ್ ನಾಯ್ಕ ಕಾರೆತ್ತೋಡಿ, ಸುಧಾಕರ ಬೊಳ್ಳಾಜೆ, ಕಿಶೋರ್ ಗೌಡ ಸಾರಕರೆ, ಜೀವಿತ್ ಗೌಡ ಸಾರಕರೆ, ಕೃಷ್ಣಪ್ಪ ಸಾರಕರೆ, ಶಿವಪ್ಪ ಗೌಡ ಪೂಜಾರಿಮೂಲೆ, ಶಾಂತಪ್ಪ ಗೌಡ ಸಾರಕರೆ, ಉಮೇಶ್ ಬದಿಯಡ್ಕ, ಸುಂದರ ಗೌಡ ಸಾರಕರೆ, ಸುಬ್ಬಣ್ಣ ಪೂಜಾರಿ ಸಾರಕರೆ ಮೊದಲಾದವರು ಉಪಸ್ಥಿತರಿದ್ದರು.

ದೈವಸ್ಥಾನದ ಆಡಳಿತ ಮೊಕ್ತೇಸರ  ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ ಸ್ವಾಗತಿಸಿ, ಸೇವಾ ಸಮಿತಿಯ ಅಧ್ಯಕ್ಷ ದಿಲೀಪ್ ಹೆಗ್ಡೆ ನೇರೊಳ್ತಡ್ಕ ವಂದಿಸಿದರು.

DSC_0058

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.