ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಸ್ವಾಮೀ ವಿವೇಕಾನಂದರ ಜನ್ಮದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ನಮ್ಮ ದೇಶದ ಸಂಪತ್ತು ಎಂದರೆ ಅದು ಯುವ ಮಾನವ ಸಂಪತ್ತು. ಇಂದು ಯುವ ಜನತೆ ತನ್ನ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ನಮ್ಮ ಯುವ ಜನರು ದಿನದ ಒಂದು ಗಂಟೆಯನ್ನು ದೇಶಕ್ಕಾಗಿ ಅರ್ಪಣೆ ಮಾಡಬೇಕು ಆಗ ಮಾತ್ರ ಸ್ವಾಮೀ ವಿವೇಕಾನಂದರ ಜನ್ಮ ದಿನಾಚರಣೆಗೆ ಅರ್ಥ ಬಂದಿತು. ಸ್ವಾಮೀ ವಿವೇಕಾನಂದರು ವಿಶ್ವ ಮಟ್ಟದಲ್ಲಿ ಹಿಂದುತ್ವವನ್ನು ಪ್ರತಿಪಾದಿಸಿ ಅದಕ್ಕೊಂದು ಆಯಾಮವನ್ನು ತಂದು ಕೊಟ್ಟ ವೀರ ಸನ್ಯಾಸಿಯಾಗಿದ್ದಾರೆ, ಅವರ ಆದರ್ಶ ಗುಣಗಳೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗಬೇಕು ಎಂದು ವೇಣುಗೋಪಾಲ ಮುರುಳ್ಯ ಹೇಳಿದರು. ಅವರು ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಪುತ್ತೂರು ತಾಲೂಕು ಯುವಜನ ಒಕ್ಕೂಟ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಆಶ್ರಯದಲ್ಲಿ ಜ 13ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ ಸ್ವಾಮೀ ವಿವೇಕಾನಂದರ ಜನ್ಮಾದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರು ವಹಿಸಿದ್ದರು. ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ, ಕಾಣಿಯೂರು, ಸವಣೂರು ಕ್ಲಸ್ಟರ್ ಸಿಆರ್‌ಪಿ ಜಯಂತ ವೈ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಕಾಣಿಯೂರು ಕಣ್ವಶ್ರೀ ಯುವತಿ ಮಂಡಲದ ಉಪಾಧ್ಯಕ್ಷೆ ದಿವ್ಯಾ ಮುಗರಂಜರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಯುವಕ ಮಂಡಲದ ಕಾರ್ಯದರ್ಶಿ ಕೀರ್ತಿಕುಮಾರ್ ಎಳುವೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿನೇಶ್ ಮುಗರಂಜ, ಪುನೀತ್ ಕಲ್ಪಡ, ನಿತಿನ್ ಎಂ.ಪಿ, ನಾಗವೇಣಿ ಬೆದ್ರಾಜೆ, ದಿವಾಕರ್ ಮಾದೋಡಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಭವ್ಯ ಅನಿಲ ಪ್ರಾರ್ಥಿಸಿದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಸ್ವಾಗತಿಸಿ, ಯುವಕ ಮಂಡಲದ ಸದಸ್ಯ ಸುರೇಶ್ ಓಡಬಾಯಿ ವಂದಿಸಿದರು. ತಾ.ಪಂ ಸದಸ್ಯ ಬಾಬು ಮಾದೋಡಿ ಕಾರ್ಯಕ್ರಮ ನಿರೂಪಿಸಿದರು.

kaniyoor swamee vivekananda photo

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.