ಬೆಳ್ಳಿಪ್ಪಾಡಿ: ನೀರಿನ ಪೈಪ್ ಒಡೆದ ವಿಚಾರ-ಸಹೋದರರ ತಂಡದೊಳಗೆ ಹೊಡೆದಾಟ : ಇತ್ತಂಡದವರು ಪ್ರತ್ಯೇಕ ಆಸ್ಪತ್ರೆಗೆ ದಾಖಲು-ನಗರ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಪಾಲೆತ್ತಡಿಯಲ್ಲಿ ನೀರಿನ ಪೈಪ್ ಒಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ತಂಡದೊಳಗೆ ಹೊಡೆದಾಟ ನಡೆದು ಇತ್ತಂಡದವರು ಪುತ್ತೂರಿನ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾದ ಘಟನೆ ಜ.15ರಂದು ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಳ್ಳಿಪ್ಪಾಡಿಯ ಪಾಲೆತ್ತಡಿ ರಾಮಣ್ಣ ಗೌಡರವರ ಪುತ್ರ ಧರ್ಣಪ್ಪ ಗೌಡ(44.ವ)ರವರು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ‘ನನ್ನ ಹಾಗೂ ನನ್ನ ಸಹೋದರರ ಮನೆಗಳಿಗೆ ನೀರಿನ ಸಂಪರ್ಕ ಒಂದೇ ಟ್ಯಾಂಕ್‌ನಿಂದ ಇದೆ, ಸಹೋದರ ಸಾಂತಪ್ಪ ಗೌಡರವರ ಪುತ್ರ ಪುನೀತ್ ಪೈಪ್ ತುಂಡು ಮಾಡಿ ನನ್ನ ಮನೆಗೆ ನೀರು ಬರದಂತೆ ತಡೆ ಒಡ್ಡಿದ್ದಾರೆ. ಈ ಬಗ್ಗೆ ನಾನು ಸಹೋದರ ಸಾಂತಪ್ಪ ಗೌಡರವರಲ್ಲಿ ವಿಚಾರಿಸಲು ಹೋದಾಗ ಅವರ ಮಗ ಪುನೀತ್ ಹಿಂದಿನಿಂದ ಬಂದು ಕತ್ತಿಯಿಂದ ತಲೆಗೆ ಕಡಿದಿದ್ದಾನೆ. ಅಲ್ಲದೆ ಸಹೋದರರಾದ ಅಣ್ಣಿ ಗೌಡ ಮತ್ತು ಸಾಂತಪ್ಪ ಗೌಡ ಹಾಗೂ ಅತ್ತಿಗೆ ಲೀಲಾವತಿಯವರು ಸೇರಿಕೊಂಡು ಅಡಿಕೆ ಮರದ ಸಲಾಕೆಯಿಂದ ನನಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ನನಗೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ಹಲ್ಲೆ ನಡೆಸುತ್ತಿರುವ ಅಣ್ಣಿ ಗೌಡರವರ ಪತ್ನಿ ಸುಹಾಸಿನಿ ಹಾಗೂ ಅವರ ಪುತ್ರಿ ರೇಷ್ಮಾರವರು ತಡೆಯಲು ಬಂದಿದ್ದು ಅವರಿಗೆ ಈ ಸಂದರ್ಭದಲ್ಲಿ ಗಾಯವಾಗಿದೆ ಎಂದು ಧರ್ಣಪ್ಪ ಗೌಡರವರು ಆರೋಪಿಸಿದ್ದಾರೆ. ನಾವು 5 ಮಂದಿ ಸಹೋದರರಿದ್ದು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸಮಪಾಲು ಮಾಡದೆ, ನನಗೆ ವಂಚನೆ ಮಾಡಿ ನಾಲ್ವರು ಸಹೋದರರು ಹಂಚಿಕೊಂಡಿದ್ದಾರೆ, ಆ ಆಸ್ತಿಯನ್ನು ಅವರು ನಾಲ್ವರು ಮಾತ್ರ ಸೇರಿಕೊಂಡು ನೋಂದಾವಣೆ ಮಾಡಿಸಿಕೊಳ್ಳಲು ಮುಂದಾಗಿದ್ದರು. ಈ ಬಗ್ಗೆ ನಾನು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ದೂರು ನೀಡಿದ್ದೇನೆ. ನ್ಯಾಯಾಲಯವು ನೋಂದಾವಣೆಗೆ ತಡೆ ನೀಡಿದೆ. ಅಲ್ಲದೆ ಗ್ರಾಮ ಪಂಚಾಯತ್‌ನಲ್ಲೂ ಅವರಿಗೆ ನೋಂದಾವಣೆಗೆ ಅವಕಾಶ ಕೊಡದಂತೆ ಮನವಿ  ಮಾಡಿ ತಡೆ ಹಿಡಿದಿದ್ದೇನೆ. ಇದೇ ವಿಚಾರದಲ್ಲಿ ಅವರಿಗೆ ನನ್ನ ಮೇಲೆ ತೀವ್ರ ದ್ವೇಷವಿದೆ. ಈ ಉದ್ದೇಶದಿಂದ ಅವರು ನನ್ನನ್ನು ಮುಗಿಸಿ ಬಿಡಲು  ಹುನ್ನಾರ ನಡೆಸಿದ್ದು ಹಲ್ಲೆ ನಡೆಸಿದ್ದಾರೆ’ ಎಂದು ಧರ್ಣಪ್ಪ ಗೌಡ ಆರೋಪಿಸಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಧರ್ಣಪ್ಪ ಗೌಡರವರ ಸಹೋದರ ಅಣ್ಣಿ ಗೌಡ ಯಾನೆ ಅನಿಲ್ ಕುಮಾರ್(49.ವ) ಮತ್ತು ಅವರ ಪತ್ನಿ ಸುಹಾಸಿನಿ(35.ವ) ಹಾಗೂ ಪುತ್ರಿ ರೇಷ್ಮಾ(18.ವ)ರವರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ‘ನಮ್ಮ ಮನೆಯ ಶೌಚಾಲಯಕ್ಕೆ ಬರುವ ನೀರಿನ ಪೈಪ್ ಒಡೆದು ಹೋಗಿತ್ತು, ಅದನ್ನು ನನ್ನ ಅಣ್ಣನ ಮಗ ಪುನೀತ್ ದುರಸ್ತಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನನ್ನ ಸಹೋದರ ಧರ್ಣಪ್ಪ ಗೌಡ ಅಲ್ಲಿಗೆ ಬಂದು ನಮ್ಮೊಂದಿಗೆ ಜಗಳಕ್ಕಿಳಿದು ನನ್ನ ಪತ್ನಿ ಸುಹಾಸಿನಿ ಹಾಗೂ ಮಗಳು ರೇಷ್ಮಾ ಹಾಗೂ ನಾದಿನಿ ಲೀಲಾವತಿಯವರಿಗೆ ಹಲ್ಲೆ ನಡೆಸಿದ್ದಾನೆ’ ಇದನ್ನು ತಡೆಯಲು ಬಂದ ನನಗೂ  ಹಲ್ಲೆ ನಡೆಸಿದ್ದಾನೆ ಎಂದು ಅಣ್ಣಿ ಗೌಡ ಯಾನೆ ಅನಿಲ್ ಕುಮಾರ್‌ರವರು ಆರೋಪಿಸಿದ್ದಾರೆ. ಎರಡೂ ಕಡೆಯವರಿಂದ ದೂರು ಪಡೆದುಕೊಳ್ಳಲಾಗಿದ್ದು ಇತ್ತಂಡದ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.