ಕಡಬ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಬಯಲಾಟ

Puttur_Advt_NewsUnder_1
Puttur_Advt_NewsUnder_1

110ಕಡಬ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯವರಿಂದ ಕಡಬ ಮೇಲಿನಮನೆ ಶ್ರೀಮತಿ ಭಾಗೀರಥಿ ಮತ್ತು ಮಕ್ಕಳಿಂದ ಸೇವಾ ರೂಪದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಜ. 14ರಂದು ಕಡಬದ ಭಾಗೀರಥಿ ಟವರ್‍ಸ್ ಎದುರುಗಡೆ ನಡೆಯಿತು.
ಪರಂಪರೆಯ ಪ್ರೋತ್ಸಾಹದೊಂದಿಗೆ ಹೆಸರಾಂತ ಕಲಾವಿದರ ವೇಷಭೂಷಣಗಳೊಂದಿಗೆ ನಡೆದ ಬಯಲಾಟದಲ್ಲಿ ಊರಿನ ಪರವೂರಿನ ಸಾವಿರಾರು ಮಂದಿ ಕಲಾಪ್ರೇಮಿಗಳು ಭಾಗವಹಿಸಿದ್ದರು.
ಸಂಜೆ ಶ್ರೀ ಮಹಾಗಣಪತಿ ಮತ್ತು ಶ್ರೀ ಕಂಠಸ್ವಾಮೀ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಶ್ರೀ ಗಣಪತಿ ದೇವರ ಮೂರ್ತಿಯನ್ನು ಬಯಲಾಟ ನಡೆಯುವ ರಂಗಮಂದಿರಕ್ಕೆ ತಂದು ಅಲ್ಲಿ ಪೂಜೆ ನಡೆಸಲಾಯಿತು. ಬಳಿಕ ಬಯಲಾಟ ಪ್ರಾರಂಭವಾಯಿತು.
ಭಾಗೀರಥಿ, ಮಕ್ಕಳಾದ ಮಹಾಬಲ ನೈಕ್, ಬಾಲಕೃಷ್ಣ ನೈಕ್, ದಯಾನಂದ ನೈಕ್, ಗೋಪಾಲ ನೈಕ್, ಸತೀಶ್ ನೈಕ್, ಶಿಕ್ಷಕಿ ಗೀತಾ ಸೇರಿದಂತೆ ಕುಟುಂಬಸ್ಥರು ಸಾರ್ವಜನಿಕರಿಗೆ ಲಘು ಉಪಹಾರ ನೀಡುವುದರೊಂದಿಗೆ ಸತ್ಕರಿಸಿದರು. ಕಡಬ ವಿಶೇಷ ತಹಶೀಲ್ದಾರ್ ಬಿ.ಲಿಂಗಯ್ಯ, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ.ವರ್ಗೀಸ್, ಕಡಬ ಸಿಎ ಬ್ಯಾಂಕ್ ಅಧ್ಯಕ್ಷ ಸೀತಾರಾಮ ಗೌಡ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮೊಗೇರ, ಕಡಬ ಕಡಂಬಳಿತ್ತಾಯ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಧರಣೇಂದ್ರ ಜೈನ್, ಕಡಬ ರೋಟರಿ ಅಧ್ಯಕ್ಷ ಚಂದ್ರಶೇಖರ ಕೋಡಿಬೈಲ್, ಎ. ಸಂತೋಷ್ ಕುಮಾರ್ ಪುತ್ತೂರು, ಕಡಬ ಗ್ರಾ.ಪಂ.ಸಿಬ್ಬಂದಿ ಗುರುರಾಜ್ ಭಟ್ ಸೇರಿದಂತೆ ಅಧಿಕಾರಿ ವರ್ಗದವರು, ಶಿಕ್ಷಕ ಶಿಕ್ಷಕೇತರರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

111

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.