ಪುಚ್ಚೇರಿ: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

Puttur_Advt_NewsUnder_1
Puttur_Advt_NewsUnder_1

pucheri

ಪುತ್ತೂರು: ನೆಲ್ಯಾಡಿ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ  153 ನೇ ಜನ್ಮ ದಿನವನ್ನು “ರಾಷ್ಟ್ರೀಯ ಯುವ ದಿನ”ವನ್ನಾಗಿ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ದೀಪಾರ್ಚಣೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಚರಿತ್ರೆ ಹಾಗೂ ಅವರ ಸಾಧನೆಗಳ ಬಗ್ಗೆ ಕೊಂಡಾಡಿದರು. ಮೋಕಾರ್ತಿಕ್ ವಿವೇಕಾನಂದರ ವೇಷ ಭೂಷಣದಲ್ಲಿ ಕಾಣಿಸಿಕೊಂಡಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಗುರು ಪದ್ಮನಾಭ ಪಿ.ವಹಿಸಿದ್ದರು. ಅಧ್ಯಾಪಕರಾದ ಪುರಂದರ ಗೌಡ ಡಿ., ಶ್ರೀಮತಿ ಲೀಲಾವತಿ ಕೆ., ಶ್ರೀಮತಿ ಸುಂದರಿ, ಶ್ರೀಮತಿ ಕವಿತಾ ಉಪಸ್ಥಿತರಿದ್ದರು. ನಯನ ಡೊಮಿನಿಕ್ ನಿರೂಪಿಸಿದರು. ಅಂಕಿತಾ ಕೆ.ಎಸ್., ಸ್ವಾಗತಿಸಿ ದೀಕ್ಷಿತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.