ಜ.17 ರಿಂದ 21ರ ತನಕ ಬೆಳಿಯೂರುಕಟ್ಟೆ ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮಠದ ನವೀಕರಣ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1

20160116_103214

ಪುತ್ತೂರು: ಸುಮಾರು 400 ವರ್ಷಗಳ ಇತಿಹಾಸವಿರುವ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಸಮೀಪದ ಅಗರ್ತಬೈಲುವಿನಲ್ಲಿರುವ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಮಠದ ನವೀಕರಣ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.17 ರಿಂದ 21ರ ತನಕ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಸಹಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅಗರ್ತಬೈಲು, ಬೀಡು ಮತ್ತು ಗುಂಡ್ಯಡ್ಕ ಎಂಬ ಮೂರು ಬಂಟ ಮನೆತನದಿಂದ ಸ್ಥಾಪಿತಗೊಂಡ ಈ ಮಠವು ತನ್ನದೇ ಕಾರಣಿಕತೆಯನ್ನು ಹೊಂದಿದ್ದು, ಶಿಥಿಲಗೊಂಡ ಮಠವನ್ನು ಸುಮಾರು ರೂ.1ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದ್ದು ಕಾರ್ಕಳದ ವೇ| ಮೂ| ಶ್ರೀ ಗೋಪಾಲಕೃಷ್ಣ ಆಚಾರ್ಯರವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಜರುಗಲಿದೆ. ಜ.17 ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆಯನ್ನು ಬೆಳಿಯೂರುಗುತ್ತು ಕೆಳಗಿನ ಮನೆ ವಿಶ್ವನಾಥ ರೈ ಉದ್ಘಾಟಿಸಲಿದ್ದಾರೆ. ಕುದ್ರೆಪ್ಪಾಡಿ ಹೊಸಮನೆ ಮುಂಡಪ್ಪ ರೈ ಉಗ್ರಾಣ ಉದ್ಘಾಟಿಸಲಿದ್ದಾರೆ. ಸಂಜೆ ಆಲಯ ಪರಿಗ್ರಹ, ಬಿಂಬ ಪರಿಗ್ರಹ, ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಸಂಕಲ್ಪ, ಆಚಾರ್ಯವರಣ, ತೋರಣ ಮುಹೂರ್ತ, ಉಗ್ರಾಹಣ ಮುಹೂರ್ತ, ಸ್ಥಳಶುದ್ದಿ, ಪ್ರಸಾದ ಶುದ್ಧಿ, ವಾರಿಧಾರ ಕಲಶ, ಅಂಕುರಾರೋಹಣ, ರಾಕ್ಷೋಘ್ನ ಹವನ, ವಾಸ್ತು ಹವನ, ವಾಸ್ತು ಬಲಿ, ದಿಶಾ ಬಲಿ, ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ. ಸಂಜೆ ಭಜನಾ ಕಾರ‍್ಯಕ್ರಮ ನಡೆಯಲಿದೆ ಎಂದ ಅವರು ಜ.18ರಂದು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ವೈದಿಕ ಕಾರ‍್ಯಕ್ರಮ ಬಳಿಕ ಸಂಜೆ ಧಾರ್ಮಿಕ ಸಭಾ ಕಾರ‍್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಆರ್ಶೀವಚನ ನೀಡಲಿದ್ದಾರೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನದ ಮಾಜಿ ಮೊಕ್ತೇಸರ ಚನಿಲ ತಿಮ್ಮಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.  ವಿಷ್ಣು ಪೊಳ್ನಾಯ ಅಗರ್ತಬೈಲು ಮಠ, ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ವಿಟ್ಲ ಸಿಪಿಸಿಆರ್‌ಐ ನಿವೃತ್ತ ಸುಪರಿನ್‌ಟೆಂಡೆಂಟ್ ನಡುಹಿತ್ಲು ಮಂಜುನಾಥ ಶೆಟ್ಟಿ, ಯಮುನಾ ಬೋರ್‌ವೆಲ್ಸ್‌ನ ನುಳಿಯಾಲು ಕೃಷ್ಣ ಶೆಟ್ಟಿ, ಕರ್ನಾಟಕ ನೀರಾವರಿ ನಿಗಮದ ಲೆಕ್ಕ ಸಂಶೋಧನಾ ಅಧಿಕಾರಿ ಕರುವೋಳು ಕಂಬ್ಳದಮನೆ ಶೇಷಪ್ಪ ಶೆಟ್ಟಿ, ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಗುಂಡ್ಯಡ್ಕ ರಾಜ್‌ಕಿರಣ್ ರೈ, ತಾ.ಪಂ ಸದಸ್ಯೆ ಜೊಹರಾ ನಿಸಾರ್ ಅಹಮ್ಮದ್, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ವಿನಯ ವಸಂತ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಕ್ಷ ಕನ್‌ಸ್ಟ್ರಕ್ಷನ್‌ನ ರವೀಂದ್ರ ರೈ ಪಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಹಲವಾರು ಮಂದಿ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ರಾತ್ರಿ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಬಳಿಕ ’ಕುಡ ಒಂಜಾಕ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.  ಜ.19ಕ್ಕೆ ಸಂಜೆ ಧಾರ್ಮಿಕ ಸಭಾಕಾರ‍್ಯಕ್ರಮದಲ್ಲಿ ಸಾಜ ಕೃಷ್ಣ ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಆನಾಜೆ ಗಣೇಶ್ ರೈ, ಮುಗೆರೋಡಿ ಬಾಲಕೃಷ್ಣ ರೈ, ಉದ್ಯಮಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ, ತೀರ್ಥಹಳ್ಳಿಯ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ, ದುರ್ಗಾಂಬಾ ಕನ್‌ಸ್ಟ್ರಕ್ಷನ್‌ನ ನುಳಿಯಾಲು ಸಂತೋಷ್ ಕುಮಾರ್ ರೈ, ಜಿ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ’ಭಕ್ತಿ ಗಾನಸುಧೆ’ ಸಂಗೀತ ಕಾರ‍್ಯಕ್ರಮ ನಡೆಯಲಿದೆ. ಬಳಿಕ ’ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜ.20ರಂದು ಸಂಜೆ ಧಾರ್ಮಿಕ ಸಭಾಕಾರ‍್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆರ್ಶೀವಚನ ನೀಡಲಿದ್ದಾರೆ. ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅರಣ್ಯ , ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಬಂಟರ ಯಾನೆ ನಾಡವರ ಸಂಘ ಮಂಗಳೂರು ಇದರ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಚಲನಚಿತ್ರ ನಿರ್ದೇಶಕ ಸುಧಾಕರ ಭಂಡಾರಿ ಸಾಜ, ಎಸ್.ಕೆ.ಹಾಸ್ಪಿಟಲ್ ಉಳ್ಳಾಲದ ಡಾ. ಸದಾಶಿವ ಪೋಳ್ನಾಯ, ಬಂಟರ ಸಂಘದ ಅಧ್ಯಕ್ಷ ಮನವಳಿಕೆ ಗುತ್ತು ದಯಾನಂದ ರೈ ಮತ್ತಿತರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ’ಬದ್ಕೆರೆ ಕಲ್ಪಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಜ.21ರಂದು ಬೆಳಿಗ್ಗೆ ಪ್ರತಿಷ್ಠಾ ಹವನ, ತತ್ವ ಹವನ, ಕಲಶ ಪ್ರದಾನ, ಶ್ರೀ ದೇವರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ,  ಬ್ರಹ್ಮಕಲಾಶಭಿಷೇಕ ನಡೆಯಲಿದೆ. ಸಂಜೆ ರಂಗ ಪೂಜೆ ದೈವಗಳಿಗೆ ತಂಬಿಲ, ದೈವಗಳ  ಭಂಡಾರ ತೆಗೆಯುವ ಕಾರ‍್ಯಕ್ರಮ ನಡೆಯಲಿದೆ. ಬಳಿಕ  ಬೆಳಿಯೂರುಗುತ್ತು ಚಾವಡಿಯಿಂದ ಶ್ರೀ ಪಿಲಿಭೂತ ದೈವದ ಭಂಡಾರ ತೆಗೆಯುವುದು, ಮೊಡಪ್ಪಾಡಿ ಚಾವಡಿಯಿಂದ ಶ್ರೀ ಜಠಾಧಾರಿ ದೈವದ ಭಂಡಾರ ತೆಗೆಯುವುದು ಮತ್ತು ರಾತ್ರಿ ದೈವಗಳ ನರ್ತನ ಸೇವೆ ನಡೆಯಲಿದೆ ಎಂದು ಅವರು ಹೇಳಿದರು.

 ಜಾತ್ರೋತ್ಸವವಿಲ್ಲ-ವಿಶೇಷ ದಿನಗಳಲ್ಲಿ ವಿಶೇಷ ಪೂಜೆ:

ಅಗರ್ತಬೈಲು ಮಠದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವರು, ಪರಿವಾರ ದೇವಗೆಗಳಾದ ಶ್ರೀ ದೇವಿ, ಭೂದೇವಿ, ಅಂಜನೇಯ, ಗರುಡ ಮತ್ತು ಧರ್ಮ ದೈವಗಳಾದ ಹುಲಿಭೂತ, ಜಠಾಧಾರಿ ದೈವದ ಆರಾಧನೆ ನಡೆದು ಕೊಂಡು ಬರುತ್ತಿದೆ. ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಪೂಜೆ, ಬಲಿಯೇಂದ್ರ ಪೂಜೆ, ವಿಷು ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ಮತ್ತು ನಿತ್ಯ ಪೂಜೆಗಳು ನಡೆಯುತ್ತವೆ. ಜಾತ್ರೋತ್ಸವ ಮಾಡುವಂತಿಲ್ಲ ಎಂದು ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

 ಮುಳಿ ಹುಲ್ಲಿನ ಛಾವಣೆಯಲ್ಲಿದ್ದ ಮಠ:

ಸಾವಿರಾರು ವರ್ಷಗಳ ಹಿಂದೆ ಮುಳಿ ಹುಲ್ಲಿನ ಛಾವಣಿಯಲ್ಲಿದ್ದ ಮಠಕ್ಕೆ 1941ರಲ್ಲಿ ಪಠೇಲ್ ಕಿಟ್ಟಣ್ಣ ರೈ ಗುಂಡ್ಯಡ್ಕರವರ ಮುಂದಾಳತ್ವದಲ್ಲಿ ಮಠಕ್ಕೆ ಕೀರ್ತಿ ಮಾಡು ಮತ್ತು ನಮಸ್ಕಾರ ಮಂಟಪವನ್ನು ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವವೂ ನಡೆದಿತ್ತು. 1960ರ ಬಳಿಕ ಹುಕ್ರಪ್ಪ ರೈ ಬೀಡು ಆಡಳಿತ ಮೊಕ್ತೇಸರರಾಗಿ 1966 ರಿಂದ 1994ರ ತನಕ ಅಗರ್ತಬೈಲು ಕರಿಯಪ್ಪ ರೈಯವರ ಮೊಕ್ತೇಸರರಾಗಿ ಶ್ರೀ ಮಠದ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾ ಬಂದಿದ್ದರು. ಬಳಿಕ ಬೀಡು ನಾರಾಯಣ ರೈ ಮೊಕ್ತೇಸರಾಗಿದ್ದರು ಎಂದು ಸಮಿತಿ ಸದಸ್ಯ ಎಂ.ಬಿ.ವಿಶ್ವನಾಥ ರೈ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.