ಕಾವು : ಹುಂಡೈ ಐ10 ಕಾರು-ಪಿಕಪ್ ನಡುವೆ ಡಿಕ್ಕಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಕಡೆಯಿಂದ ಬರುತ್ತಿದ್ದ ಹುಂಡೈ ಐ10 ಕಾರ್ ಗೆ ಅದೇ ಕಡೆಯಿಂದ ಬರುತ್ತಿದ್ದ ಪಿಕಪ್(ಕೆಎ12 8270) ಹಿಂಬಂದಿಯಿಂದ ಬಂದು ಡಿಕ್ಕಿ ಹೊಡೆದ ಘಟನೆ ಜ.16ರಂದು ಕಾವು ಬಳಿಯಲ್ಲಿ ನಡೆದಿದೆ. ಕಾವು ಜಂಕ್ಷನ್ ಬಳಿಯಲ್ಲಿ ರಸ್ತೆಯಲ್ಲಿ ವೇಗ ನಿಯಂತ್ರಣಕ್ಕಾಗಿ ಇಟ್ಟಿದ್ದ ಬ್ಯಾರಿಕೇಡ್‌ನ ಬಳಿಯಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ನಿಧಾನ ಮಾಡಿದಾಗ ಹಿಂಬಂದಿಯಿಂದ ವೇಗವಾಗಿ ಬಂದ ಪಿಕಪ್ ಬ್ರೇಕ್ ಕಂಟ್ರೋಲ್ ಆಗದೇ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಹಿಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.

20160116_122004

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.