Breaking News

ಇಚ್ಲಂಪಾಡಿ ಸೈಂಟ್ ಜಾರ್ಜ್ ಅರ್ಥೋಡಕ್ಸ್ ಚರ್ಚ್‌ನಲ್ಲಿ ಕಲ್ಲಿಟ್ಟ ಪ್ಪೆರುನ್ನಾಳ, ಶತಾಬ್ಧಿಷಕ್ತರಾಗಿರುವ ಫಾ.ವಿ.ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪ್ಪಾರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ichlampady 1

ಪುತ್ತೂರು: ಇಚ್ಲಂಪಾಡಿ ಸೈಂಟ್ ಜಾರ್ಜ್ ಅರ್ಥೋಡಕ್ಸ್ ಚರ್ಚ್‌ನ ಇಡವಕ ದಿನಂ, ಕಲ್ಲಿಟ್ಟ ಪ್ಪೆರುನ್ನಾಳ ಹಾಗೂ ಶತಾಬ್ಧಿಷಕ್ತರಾಗಿರುವ ವಿಶ್ರಾಂತ ಧರ್ಮಗುರು ಫಾ.ವಿ.ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರಿಗೆ ಸನ್ಮಾನ ಕಾರ‍್ಯಕ್ರಮ ಜ.17ರಂದು ಚರ್ಚ್‌ನ ಸಭಾಂಗಣದಲ್ಲಿ ನಡೆಯಿತು. ಕಾರ‍್ಯಕ್ರಮಗಳು ಸೌತ್ ವೆಸ್ಟ್ ಅಮೆರಿಕಾ ಧರ್ಮಾಧ್ಯಕ್ಷರಾದ ಬಿಷಪ್ ಅಲೆಕ್ಸಿಯೋಸ್ ಮಾರ್ ಯೌಸೇಬಿಯಸ್ ಮೆತ್ರಾಪ್ಪೋಲಿತ್ತಾರವರ ಮುಖ್ಯ ಕಾರ್ಮಿಕತ್ವದಲ್ಲಿ ನಡೆಯಿತು.

ಜ.16ರಂದು ಸಂಜೆ ಬಿಷಪ್ ಅಲೆಕ್ಸಿಯೋಸ್ ಮಾರ್ ಯೌಸೇಬಿಯಸ್ ಮೆತ್ರಾಪ್ಪೋಲಿತ್ತಾರಿಗೆ ಸ್ವಾಗತ ಕಾರ‍್ಯಕ್ರಮ ನಡೆಯಿತು. ಬಳಿಕ ಹಳೆಯ ಶಿಲುಬೆಯ ಗುಡಿಯ ಶುದ್ದೀಕರಣ, ಸಂಧ್ಯಾ ಪ್ರಾರ್ಥನೆ, ಬಿಷಪ್‌ರಿಂದ ಆಶೀರ್ವಚನ, ಸಮಾಪನೆ ಪ್ರಾರ್ಥನೆ ನಡೆಯಿತು. ಜ.17ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಬಿಷಪ್ ಅಲೆಕ್ಸಿಯೋಸ್ ಮಾರ್ ಯೌಸೇಬಿಯಸ್ ಮೆತ್ರಾಪ್ಪೋಲಿತ್ತಾರಿಂದ ದಿವ್ಯ ಬಲಿಪೂಜೆ, ಮೆರವಣಿಗೆ, ಅಗಲಿದವರಿಗೆ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಸಮಾಪನ ಪ್ರಾರ್ಥನೆ, ಬಿಷಪ್‌ರಿಂದ ಆಶೀರ್ವಾದ ನಡೆಯಿತು.

ಸನ್ಮಾನ: ಜ.17ರಂದು ಮಧ್ಯಾಹ್ನ ನಡೆದ ಸಭಾ ಕಾರ‍್ಯಕ್ರಮದಲ್ಲಿ ಇಚ್ಲಂಪಾಡಿ ಸೈಂಟ್ ಜಾರ್ಜ್ ಅರ್ಥೋಡಕ್ಸ್ ಚರ್ಚ್‌ನಲ್ಲಿ 19 ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಹಲವಾರು ಅಭಿವೃದ್ಧಿ ಕಾರ‍್ಯಕ್ರಮ ಕೈಗೊಂಡು ಇದೀಗ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಫಾ.ವಿ.ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪ್ಪಾರವರಿಗೆ ಸನ್ಮಾನ ಕಾರ‍್ಯಕ್ರಮ ನಡೆಯಿತು. ಸೌತ್ ವೆಸ್ಟ್ ಅಮೆರಿಕಾ ಧರ್ಮಾಧ್ಯಕ್ಷರಾದ ಬಿಷಪ್ ಅಲೆಕ್ಸಿಯೋಸ್ ಮಾರ್ ಯೌಸೇಬಿಯಸ್ ಮೆತ್ರಾಪ್ಪೋಲಿತ್ತಾರವರು ಶಾಲು,ಫಲಪುಷ್ಪ,ಸ್ಮರಣಿಕೆ,ಹಾರಾರ್ಪಣೆ ಮಾಡಿ ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರನ್ನು ಸನ್ಮಾನಿಸಿದರು. ಬಳಿಕ ಚರ್ಚ್‌ನ ಆಡಳಿತ ಮಂಡಳಿ ಸದಸ್ಯರು, ಭಕ್ತರು, ಪರಿಸರದ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಆಡಳಿತ ಮಂಡಳಿಯವರು ಗುಲಾಬಿ ಹೂ ನೀಡುವ ಮೂಲಕ ಶತಾಬ್ಧಿಷಕ್ತರಾಗಿರುವ ಫಾ.ವಿ.ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರನ್ನು ಗೌರವಿಸಿದರು. ಮರ್ದಾಳ ಚರ್ಚ್‌ನ ವಿಕಾರ್ ಫಾ.ಜೋಸ್ ಸನ್ಮಾನಿತರನ್ನು ಪರಿಚಯಿಸಿದರು.

ಈ ವೇಳೆ ಆಶೀರ್ವಚನ ನೀಡಿದ ಬಿಷಪ್ ಅಲೆಕ್ಸಿಯೋಸ್ ಮಾರ್ ಯೌಸೇಬಿಯಸ್ ಮೆತ್ರಾಪ್ಪೋಲಿತ್ತಾರವರು ಶತಾಬ್ಧಿಷಕ್ತರಾಗಿರುವ ಫಾ.ವಿ.ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ. ಬಹಳ ವರ್ಷಗಳ ಹಿಂದೆ ಜನರು ಆರ್ಥಿಕ ಸ್ಥಿತಿ ವಂತರಾಗಿರಲಿಲ್ಲ. ಇಂತಹ ಸಮಯದಲ್ಲಿ ಈ ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ನೆರವು ನೀಡುತ್ತಿದ್ದ ವಿ.ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರು ಇಲ್ಲಿನ ಭಕ್ತಾದಿಗಳ ಮನಸ್ಸಿನಲ್ಲಿ ಬೇರುಬಿಟ್ಟಿದ್ದಾರೆ. ಫಾ.ಮ್ಯಾಥ್ಯೂಸ್‌ರವರು ಇಲ್ಲಿ 19 ವರ್ಷ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಇಚಿಲಂಪಾಡಿಯ ಈ ಕ್ಷೇತ್ರ ಜಗತ್ತಿನಾದ್ಯಂತ ಪ್ರಸಿದ್ಧಿ ಹೊಂದುವಂತೆ ಮಾಡಿದ್ದಾರೆ. ಇಲ್ಲಿಗೆ ಬರುವ ಭಕ್ತಾದಿಗಳ ಆಶೋತ್ತರಗಳ ಈಡೇರುವಿಕೆ ಕಾರಣಪುರುಷರಾಗಿದ್ದಾರೆ, ಜಾತಿ, ಮತ ಧರ್ಮಗಳ ಭೇದಭಾವವಿಲ್ಲದೇ ಇಲ್ಲಿ ಜನರು ಬಂದು ಅವರ ಇಷ್ಟಾರ್ಥಗಳನ್ನು ನಿವೇದಿಸಿಕೊಳ್ಳುವುದರ ಹಿಂದೆ ಫಾ| ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರ ದೂರದರ್ಶಿತ್ವ ಹಾಗೂ ಶ್ರಮವಿದೆ. ಅವರು ದೀರ್ಘಾಯುಷ್ಯವನ್ನು ಹೊಂದಿ ಇನ್ನೂ ಜನಸೇವೆಯಲ್ಲಿ ತೊಡಗುವಂತಾಗಲಿ ಎಂದು ಶುಭ ಹಾರೈಸಿದರು.

ಫಾ.ವಿ.ಸಿ.ಮಾಣಿ ಕೋರ್ ಎಪಿಸ್ಕೋಪಾ, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಪಿ.ಪಿ.ವರ್ಗೀಸ್, ಮರ್ದಾಳ ಚರ್ಚ್‌ನ ವಿಕಾರ್ ಫಾ.ಜೋಸ್, ಫಾ.ವರ್ಗೀಸ್ ತೋಮಸ್, ಫಾ.ವರ್ಗೀಸ್ ಪಿಲಿಪ್ಪೋಸ್, ಫಾ.ಕುರಿಯಕೋಸ್ ತೋಮಸ್ ಪಳ್ಳಿಚ್ಚಿರರವರು ಸನ್ಮಾನಿತ ಫಾ.ವಿ..ಐ.ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರನ್ನು ಅಭಿನಂದಿಸಿ ಮಾತನಾಡಿದರು. ಸನ್ಮಾನ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಫಾ. ವಿ.ಐ ಮ್ಯಾಥ್ಯೂಸ್ ಕೋರ್ ಎಪಿಸ್ಕೋಪಾರವರು, ಈ ಭಾಗವು ನನ್ನ ಹಲವು ವರ್ಷದ ಕಾರ್ಯಕ್ಷೇತ್ರವಾಗಿದ್ದು ಇಲ್ಲಿ ಎಲ್ಲಾ ಧರ್ಮದವರ ಒಡನಾಟ ಹೊಂದಿದ್ದೇನೆ. ನಾನು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಇಲ್ಲಿ ನಿರ್ಮಾಣವಾದ ಚರ್ಚ್ ಇಂದು ದೇಶ ವಿದೇಶಗಳ ಜನರನ್ನು ಆಕರ್ಷಿತ್ತಿರುವುದು ಹೆಮ್ಮೆಯ ವಿಷಯ. ವಿಶ್ರಾಂತ ಜೀವನ ನಡೆಸುತ್ತಿರುವ ನನಗೆ ಸನ್ಮಾನ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಧರ್ಮಗುರುಗಳಾದ ಫಾ.ಪಿ.ಎ.ಜೋನ್ಸನ್, ಫಾ.ಬೆನ್ನಿ ಮ್ಯಾಥ್ಯು, ಫಾ.ಸುನಿಲ್ ಪಿ.ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆ: ಕಾರ‍್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಡೇ ಸ್ಕೂಲ್‌ನ ಅಧ್ಯಾಪಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ಉಲಹನ್ನನ್‌ರನ್ನು ಕಾರ‍್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಡೇಸ್ಕೂಲ್‌ನ ಶಿಕ್ಷಕ ಉಲಹನ್ನನ್, ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಜೋನ್ ಜೇಕಬ್ ಹಾಗೂ ಸೂಸಮ್ಮ ತೋಮಸ್‌ರವರು ವರದಿ ಮಂಡಿಸಿದರು. ಸೈಂಟ್ ಜಾರ್ಜ್ ಅರ್ಥೋಡಕ್ಸ್ ಚರ್ಚ್‌ನ ವಿಕಾರ್ ಫಾ.ಕುರಿಯಕೋಸ್ ತೋಮಸ್ ಪಳ್ಳಿಚ್ಚಿರ ಸ್ವಾಗತಿಸಿ ಖಜಾಂಜಿ ಜೋನ್ ಜೇಕಬ್ ವಂದಿಸಿದರು. ಧನ್ಯ ಪಿ.ಯು.ಕಾರ‍್ಯಕ್ರಮ ನಿರೂಪಿಸಿದರು.

ichlampady 2 ichlampady 3

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.