ಮಾಯಿದೆ ದೇವುಸ್ ಚರ್ಚ್: ಪವಿತ್ರ ಪರಮಪ್ರಸಾದದ ದಿವ್ಯ ಬಲಿಪೂಜೆ, ಭಕ್ತಿ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1

m1

ಪ್ರೀತಿಯ ಜೊತೆಗೆ ಕರುಣೆಯ ಜೀವನ ನಮ್ಮದಾಗಬೇಕುರೆ.ಫಾ.ರಿತೇಶ್ ರೊಡ್ರಿಗಸ್

ಪುತ್ತೂರು: ಯೇಸುಕ್ರಿಸ್ತರು ಸಂಸ್ಥಾಪಿಸಿದ ಸಂಸ್ಕಾರವೇ ಪರಮ ಪವಿತ್ರ ಪರಮ ಪ್ರಸಾದವಾಗಿದೆ. ಚರ್ಚ್ ವ್ಯಾಪ್ತಿಯಲ್ಲಿ, ವಾಳೆಯಲ್ಲಿ, ಸಮಾಜದಲ್ಲಿ ಇತರ ಧರ್ಮಬಾಂಧವರ ನಡುವೆ ಜೀವಿಸುವಾಗ ಪ್ರೀತಿಯ ಜೊತೆಗೆ ಪರಸ್ಪರ ಕರುಣೆಯ ಜೀವನ ನಮ್ಮದಾಗಬೇಕು ಎಂದು ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ರೆ.ಫಾ.ರಿತೇಶ್ ರೊಡ್ರಿಗಸ್‌ರವರು ಹೇಳಿದರು.

ಅವರು ಜ.17ರಂದು ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಮಾಯಿದೆ ದೇವುಸ್ ಚರ್ಚ್‌ನ ಪವಿತ್ರ ಪರಮ ಪ್ರಸಾದದ  ಭ್ರಾತೃತ್ವ ಭಾನುವಾರದ ಪ್ರಧಾನ ದಿವ್ಯ ಬಲಿಪೂಜೆಯಲ್ಲಿ ಸಂದೇಶ ನೀಡಿ ವಿಶ್ವಾಸ, ದಯೆ, ಕರುಣೆ, ಕ್ಷಮೆ, ತ್ಯಾಗ, ಬಲಿದಾನ ಇದರ ಸಂಕೇತವಾಗಿರುವ ಪರಮ ಪ್ರಸಾದ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರ ಸಂಸ್ಕಾರವಾಗಿದ್ದು ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಕುಟುಂಬದ ಪಾವಿತ್ರತೆಯನ್ನು ತೋರಿಸಿಕೊಡುತ್ತದೆ ಏಕತೆ, ಭಾವೈಕ್ಯತೆ, ಸಹೋದರತೆ, ಮಾನವೀಯತೆಯ ಯೇಸುಕ್ರಿಸ್ತರ ಸಂದೇಶದ ಮೂಲಕ ಈ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಸನ್ಮಾನಿಸುವುದರ ಮುಖಾಂತರ ಕ್ರೈಸ್ತರು ತಾವೂ ಕೂಡ ಅಂಥವುದೇ ಜೀವನವನ್ನು ನಡೆಸಬೇಕೆಂಬುದಾಗಿ ನೆನಪಿಸಿಕೊಳ್ಳುತ್ತಾರೆ ಎಂದರು.

ಪ್ರಧಾನ ದಿವ್ಯಬಲಿಪೂಜೆಯನ್ನು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ರೆ.ಡಾ.ಆಂಟನಿ ಪ್ರಕಾಶ್ ಮೊಂತೇರೋರವರು ನೆರವೇರಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ.ಆಲ್ಪ್ರೆಡ್ ಜಾನ್ ಪಿಂಟೊ, ಸಹಾಯಕ ಧರ್ಮಗುರು ರೆ.ಫಾ.ಸಂತೋಷ್ ಡಿ’ಸೋಜ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ.ವಿಜಯ್ ಲೋಬೋ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ರೆ.ಫಾ. ಮ್ಯಾಕ್ಸಿಂ ಡಿ’ಸೋಜ, ರೆ.ಫಾ.ವಲೇರಿಯನ್ ಮಿತ್ತೂರು ಮತ್ತು ಸಾವಿರಾರು ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಲಾಯಿತು.

ಭಕ್ತಿ ಮೆರವಣಿಗೆಯ ಬಳಿಕ ರೆ.ಫಾ. ಆಲ್ಫ್ರೆಡ್ ಜಾನ್ ಪಿಂಟೋರವರು ಪರಮ ಪ್ರಸಾದದ ಆರಾಧನೆ ನಡೆಸಿ ಯೇಸುಕ್ರಿಸ್ತರ ಬೋಧನೆ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ದಿವ್ಯ ಬಲಿಪೂಜೆ ಹಾಗೂ ಭಕ್ತಿ ಮೆರವಣಿಗೆಯಲ್ಲಿ ಗಾಯನ ಮಂಡಳಿ ಸದಸ್ಯರು, ವೇದಿ ಸೇವಕರು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜ್ಯೋ ಡಿ’ಸೋಜ, ಕಾರ‍್ಯದರ್ಶಿ ಲೂಸಿ ಮೊರಾಸ್, ಆರ್ಥಿಕ ಸಮಿತಿ ಸದಸ್ಯರು, ವಾಳೆ ಗುರಿಕಾರರು, ವಿವಿಧ ಸಂಘ-ಸಂಸ್ಥೆಯ ಸದಸ್ಯರು ಸಹಕರಿಸಿದರು.

ದಿವ್ಯ ಬಲಿಪೂಜೆ ಬಳಿಕ ಅಲಂಕೃತಗೊಂಡಿರುವ ತೆರೆದ ವಾಹನದಲ್ಲಿ ಪರಮ ಪ್ರಸಾದದ ಧಾರ್ಮಿಕ ಮೆರವಣಿಗೆ ಫಿಲೋಮಿನಾ ಕಾಲೇಜಿನ ವಠಾರದಿಂದ ಹೊರಟು ದರ್ಬೆ- ಕಲ್ಲಾರೆ ಮಾರ್ಗವಾಗಿ ಮುಖ್ಯರಸ್ತೆಯ ಮೂಲಕ ಮಾದೆ ದೇವುಸ್ ಚರ್ಚ್ ವಠಾರದಲ್ಲಿ ಸಮಾಪ್ತಿಗೊಂಡಿತು.

m 2 m 3

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.