ಶ್ರೀ ಕಾಶಿ ಮಠಾಧೀಶರ ಅಸ್ತಂಗತ: ಉಪ್ಪಿನಂಗಡಿ ಜಿಎಸ್‌ಬಿ ಸಮಾಜಬಾಂಧವರಿಂದ ಶೋಕಾಚರಣೆ

Puttur_Advt_NewsUnder_1
Puttur_Advt_NewsUnder_1

 kashi

kashi1

ಉಪ್ಪಿನಂಗಡಿ ಶ್ರೀಕಾಶಿ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ(90ವ.)ಯವರು ಜ.17 ರಂದು ಬೆಳಿಗ್ಗೆ ಅಸ್ತಾಂಗತರಾಗಿದ್ದು ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು(ಜಿ.ಎಸ್.ಬಿ)ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಆತ್ಮಕ್ಕೆ ಶಾಂತಿ ಕೋರಿ ಉಪ್ಪಿನಂಗಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

ಅನಾರೋಗ್ಯದ ಕಾರಣದಿಂದ ಸ್ವಾಮೀಜಿಯವರು ಮುಂಬೈನ ಅಂಧೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರ ಅಂತಿಮ ಆಸೆಯಂತೆ ಅವರ ಶಿಷ್ಯಂದಿರು ಹರಿದ್ವಾರದಲ್ಲಿರುವ ಶ್ರೀ ವ್ಯಾಸ ಆಶ್ರಮಕ್ಕೆ ಜ.15 ರಂದು ಬೆಳಗ್ಗೆ ಕರೆತಂದಿದ್ದರು. ಸ್ವಾಮೀಜಿಯವರನ್ನು ಏರ್ ಆಂಬ್ಯುಲೆನ್ಸ್‌ನಲ್ಲಿ ಹರಿದ್ವಾರಕ್ಕೆ ಕರೆದೊಯ್ಯಲಾಗಿತ್ತು. ಶ್ರೀ ಸಂಸ್ಥಾನ ಕಾಶೀಮಠಾಧೀಶರಾಗಿದ್ದ ಸುಧೀಂದ್ರ ತೀರ್ಥ ಸ್ವಾಮಿ ಕೇರಳದ ಎರ್ನಾಕುಳಂನಲ್ಲಿ ಜನಿಸಿದ್ದರು. ಸುಧೀಂದ್ರ ತೀರ್ಥರು ಕಾಶಿ ಮಠದ 20 ನೇ ಯತಿಗಳಾಗಿದ್ದಾರೆ. ಕಾಶೀ ಮಠದಲ್ಲಿ ದೀರ್ಘಕಾಲದ ಸೇವೆ ನೀಡಿದ ಹೆಗ್ಗಳಿಕೆ ಸ್ವಾಮಿ ಸುಧೀಂದ್ರ ತೀರ್ಥ ಅವರದ್ದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.