ಪಡುಮಲೆ: ಗೆಜ್ಜೆಗಿರಿ ಕ್ಷೇತ್ರದಲ್ಲಿ ಅಷ್ಟಮಂಗಲ ಚಿಂತನೆ ಆರಂಭ

Puttur_Advt_NewsUnder_1
Puttur_Advt_NewsUnder_1

padumale

ಪುತ್ತೂರು: ಕಾರಣಿಕ ಪುರುಷರಾದ ಕೋಟಿ – ಚೆನ್ನಯ ಜನ್ಮಸ್ಥಾನ ಪಡುಮಲೆಯ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಜ.17 ರಂದು ಅಷ್ಟಮಂಗಲ ಪ್ರಶ್ನಾ ಚಿಂತನೆ ಆರಂಭಗೊಂಡಿತು.

ಹಿರಿಯ ಜ್ಯೋತಿರ್ವಿಜ್ಞಾನ ಖ್ಯಾತನಾಮರಾದ ಸದನಂ ನಾರಾಯಣ ಪೊದುವಾಳ್ ಪಯ್ಯನ್ನೂರು ಮತ್ತು ಶಶಿಕುಮಾರ್ ಪಂಡಿತ್ ಅವರ ನೇತೃತ್ವದಲ್ಲಿ, ಮಂಗಳೂರಿನ  ಉಮೇಶ್ ಶರ್ಮಾ ಅವರ ಸಹಕಾರದೊಂದಿಗೆ ಪ್ರಶ್ನಾ ಚಿಂತನೆ ನಡೆಯುತ್ತಿದೆ.

ಬೆಳಿಗ್ಗೆ ದೈವಜ್ಞರಿಂದ ಕ್ಷೇತ್ರದ ಆದಿ ದೈವ ಶ್ರೀ ಧೂಮಾವತಿ ಸ್ಥಾನದ ಎದುರು ಸಾಮೂಹಿಕ ಪ್ರಾರ್ಥನೆ, ಪೂಜೆ ನಡೆಯಿತು. ಕ್ಷೇತ್ರದ ಧಾರ್ಮಿಕ ಮಾರ್ಗದರ್ಶಕರಾದ ಲೋಕೇಶ್ ಶಾಂತಿ ಅವರು ನಡೆಸಿಕೊಟ್ಟರು. ಬಳಿಕ ಪುಟಾಣಿಯಿಂದ ಸ್ವರ್ಣ ಸಮರ್ಪಣೆ ವಿಧಿ ವಿಧಾನ ನಡೆದು ಪ್ರಶ್ನಾ ಚಿಂತನೆ ಆರಂಭಗೊಂಡಿತು.  ಕ್ಷೇತ್ರದ ಆಡಳಿತ ಮೊಕ್ತೇಸರರಾದ ಲೀಲಾವತಿ ಪೂಜಾರಿ ಮತ್ತು ಮಕ್ಕಳು, ಪ್ರಮುಖರಾದ ಚಿತ್ತರಂಜನ್ ಮಂಗಳೂರು, ಪೀತಾಂಬರ ಹೇರಾಜೆ ಬೆಳ್ತಂಗಡಿ, ರಾಜಶೇಖರ ಕೋಟ್ಯಾನ್ ಮುಂಬೈ, ರವಿಪೂಜಾರಿ ಚಿಲಿಂಬಿ, ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ರೋಹಿನಾಥ್ ಮಂಗಳೂರು,  ಸ್ಥಳೀಯರಾದ ಸಂಜೀವ ರೈ, ಅಣಿಲೆ ಜಯರಾಜ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಚಂದ್ರಕಾಂತ ಶಾಂತಿವನ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.