ಬನ್ನೂರು: ತಾಲೂಕು ಸುಗ್ರಾಮ ಒಕ್ಕೂಟದ ಸಭೆ

Puttur_Advt_NewsUnder_1
Puttur_Advt_NewsUnder_1

10ಕೆಮ್ಮಾಯಿ: ಬನ್ನೂರು ಗ್ರಾ.ಪಂ.ನಲ್ಲಿ ಪುತ್ತೂರು ತಾಲೂಕು ಗ್ರಾ.ಪಂ. ಚುನಾಯಿತ ಮಹಿಳಾ ಸದಸ್ಯರ ಒಕ್ಕೂಟ ‘ಸುಗ್ರಾಮ’ದ ಸಭೆ ಸಂಘದ ಅಧ್ಯಕ್ಷೆ ಜಯ ರಮೇಶರವರ ಅಧ್ಯಕ್ಷತೆಯಲ್ಲಿ ಜ.11ರಂದು ನಡೆಯಿತು.
ಬನ್ನೂರು ಗ್ರಾ.ಪಂ. ಉಪಾಧ್ಯಕ್ಷ ಜಿನ್ನಪ್ಪ ಗೌಡರವರು ಸೋಲಾರ್ ದೀಪ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ, ಬನ್ನೂರು ಗ್ರಾ.ಪಂ.ನ್ನು ಸೋಲಾರ್ ಗ್ರಾಮವನ್ನಾಗಿ ಮಾಡಲು ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಸುಗ್ರಾಮ ಮತ್ತು ಜನಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುವ ಸೋಲಾರ್ ಅಭಿಯಾನವನ್ನು ಶ್ಲಾಘಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಂತಾರಾಮ ಉಪಸ್ಥಿತರಿದ್ದರು.
ಸಭೆಯಲ್ಲಿ ಸ್ವಚ್ಛತೆ, ಉದ್ಯೋಗ ಖಾತರಿ, ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಕೇಂದ್ರಗಳನ್ನಾಗಿ ಮಾಡುವ ಬಗ್ಗೆ ಚರ್ಚೆ ಸಂವಾದವನ್ನು ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ನಡೆಸಿಕೊಟ್ಟರು. ಮುಂದಿನ ತಿಂಗಳ ಸಭೆಯನ್ನು ರಾಮಕುಂಜ ಗ್ರಾ.ಪಂ., ಮಾರ್ಚ್ ತಿಂಗಳಲ್ಲಿ ಪೆರಾಬೆ, ಎಪ್ರಿಲ್-ಕೋಡಿಂಬಾಡಿ, ಮೇ-ಕಡಬ, ಜೂನ್-ಕೌಕ್ರಾಡಿ, ಜುಲಾಯಿ-ಬಜತ್ತೂರುನಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಅಲ್ಲದೆ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸುಗ್ರಾಮ ರಾಜ್ಯ ಮಟ್ಟದ ಸಮಾವೇಶಕ್ಕೆ ತಾಲೂಕು ಪ್ರತಿನಿಧಿಗಳು ಭಾಗವಹಿಸುವರು ಎಂದು ತೀರ್ಮಾನಿಸಲಾಯಿತು.
ಉಪಾಧ್ಯಕ್ಷೆಯಾಗಿ ಮಧುರಾ ಪೆರಾಬೆ, ಖಜಾಂಜಿ ಪ್ರೇಮಲತಾ ರಾಮಕುಂಜ, ಸದಸ್ಯೆಯರಾದ ಅನ್ನಮ್ಮ ಕೌಕ್ರಾಡಿ, ಸರೋಜಿನಿ ಕಡಬ, ಪ್ರೆಸಿಲ್ಲಾ ಬಜತ್ತೂರು, ಬನ್ನೂರು ಗ್ರಾ.ಪಂ. ಸದಸ್ಯರುಗಳಾದ ರತ್ನಾಕರ ಪ್ರಭು, ಗಿರಿಜ ಅನಂತಿಮಾರು, ಜನಶಿಕ್ಷಣ ಟ್ರಸ್ಟ್‌ನ ಸಂಯೋಜಕರಾದ ಚಂಚಲ, ದಿವ್ಯಶ್ರೀ, ಪಂಚಾಯತ್ ಸಿಬ್ಬಂದಿಗಳಾದ ಜಯಂತಿ, ಸುನಂದ, ಪವಿತ್ರ, ನಾರಾಯಣ, ರೋಶನ್, ಬೀರಿಗ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಭವ್ಯ ಕೋಡಿಂಬಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.