Breaking News

ಮಠದಬೆಟ್ಟು ರಾಜರಾಜೇಶ್ವರೀ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

raja raja1

ಪುತ್ತೂರು: ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಜ.17 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಎನ್.ಕೆ. ಜಗನ್ನಿವಾಸ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೈದಿಕ ಸಮಿತಿಯ ಸಂಚಾಲಕರಾದ ಮಠಂತಬೆಟ್ಟು ಪ್ರಶಾಂತ ಶರ್ಮರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಮಠಂತಬೆಟ್ಟು ಉದಯ ಶಂಕರ ರಾವ್, ಕಡಬ ಸ್ಥಾನಿಕ ಬ್ರಾಹ್ಮಣ ಸಂಘದ ಸದಸ್ಯರಿಂದ ಹಾಗೂ ಸಂಪಾಜೆಯ ಎ.ಸಿ. ಜಯರಾಮ್ ರಾವ್‌ರವರು ದೇವಳದ ಬ್ರಹ್ಮಕಲಶೋತ್ಸವಕ್ಕೆ ಸಮಿತಿಯ ಅಧ್ಯಕ್ಷ ಎನ್.ಕೆ. ಜಗನ್ನಿವಾಸ ರಾವ್‌ರವರಿಗೆ ದೇಣಿಗೆಯನ್ನು ನೀಡಿದರು. ಸಮಿತಿಯ ಕೋಶಾಧಿಕಾರಿ ಕಡಬ ಪುತ್ರಬೈಲು ಎಂ.ನರೇಂದ್ರ ರಾವ್ ದೇಣಿಗೆಯನ್ನು ಸ್ವೀಕರಿಸಿ ರಶೀದಿ ನೀಡಿದರು. ದೇವಿಯ ಮೂಲಬಿಂಬವನ್ನು ಮತ್ತು ಗಣಪತಿ ದೇವರ ಮೂಲಬಿಂಬವನ್ನು ದೇವಳದ ವಠಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಶುದ್ದಿಗೊಳಿಸಿ ಕೌತುಕ ಬಂಧನ, ಜಲಾಧಿವಾಸ ಮಾಡಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎನ್.ಕೆ. ಜಗನ್ನಿವಾಸ ರಾವ್, ಗೌರವಾಧ್ಯಕ್ಷ ಮಂಗಳೂರು ವಿಮಾನ ನಿಲ್ದಾಣದ ಮಾಜಿ ಆಡಳಿತ ನಿರ್ದೇಶಕ ಎಂ.ಆರ್.ವಾಸುದೇವ, ಬ್ರಹ್ಮಕಶೋತ್ಸವದ ಉಪಾಧ್ಯಕ್ಷ ಮಹಿಷಮರ್ದಿನಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಠಂತಬೆಟ್ಟು ಎಂ. ನಿರಂಜನ್ ರೈ, ಪ್ರಧಾನ ಕಾರ‍್ಯದರ್ಶಿ ಮಂಗಳೂರಿನ ಕರುಣ್ ರಾವ್ ಬೆಳ್ಳೆ, ಕೋಶಾಧಿಕಾರಿ ಎಂ. ನರೇಂದ್ರ ರಾವ್ ಪುತ್ರಬೈಲು ಕಡಬ ಮಹಾಪ್ರಧಾನ ಕಾರ‍್ಯದರ್ಶಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕ ಎಂ.ನಾಗೇಶ್ ಶರ್ಮ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕುಂಜಾರು ಕೃಷ್ಣ ರಾವ್, ಕಾರ‍್ಯಾಧ್ಯಕ್ಷ ಟಿ.ರಮಾನಂದ ರಾವ್, ಉಪಾಧ್ಯಕ್ಷ ಎ.ಸುದರ್ಶನ್ ರಾವ್ ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.