ವಿಶ್ವಕರ್ಮ ಮಹಿಳಾ ಸಂಘದಿಂದ ವ್ಯಕ್ತಿತ್ವ ವಿಕಸನ ಮಾಹಿತಿ

Puttur_Advt_NewsUnder_1
Puttur_Advt_NewsUnder_1

vishva karma

ಪುತ್ತೂರು: ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ವತಿಯಿಂದ ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ವಿಶ್ವಕರ್ಮ ಮಹಿಳೆಯರಿಗಾಗಿ ‘ಮಹಿಳೆ ಮನೆಯ ಒಳಗೆ ಮತ್ತು ಮನೆಯ ಹೊರಗೆ ಹೇಗಿರಬೇಕು’ ಎನ್ನುವ ವಿಚಾರವಾಗಿ ಮಾಹಿತಿ ಕಾರ್ಯಕ್ರಮ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ರೋಹಿಣಿ ರಾಘವ ಆಚಾರ್ಯರವರು ಮಾಹಿತಿ ನೀಡಿದರು. ಸುಜಾತ ಜಗದೀಶ್ ಪ್ರಾರ್ಥನೆ ಹಾಡಿದರು, ಸಂಘದ ಅಧ್ಯಕ್ಷೆ ವಸಂತಿ ಲೋಕೇಶ್ ಸ್ವಾಗತಿಸಿದರು, ಕಾರ್ಯದರ್ಶಿ ವಾಣಿಶ್ರೀ ನವೀನ್ ಸಭೆಯ ವರದಿಯನ್ನು ಓದಿ ತಿಳಿಸಿದರು. ಮಹಿಳಾ ಸಂಘದ ಸಲಹಾ ಸಮಿತಿ ಸದಸ್ಯ ಜಗದೀಶ್ ಎಸ್.ಎನ್, ಬಿ ಉಪೇಂದ್ರ ಆಚಾರ್ಯ, ರಮೇಶ್ ಆಚಾರ್ಯ ಮಾಮೇಶ್ವರ ಮತ್ತು ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಗೋಪಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ವಸಂತಿ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.