Breaking News

ಸಂಪ್ಯದಲ್ಲಿ ಶಂಸುಲ್ ಉಲಮಾ ಅನುಸ್ಮರಣೆ-ಸಮಸ್ತ ಸಮ್ಮೇಳನ ‘ಸಮಸ್ತ’ಸಂಘಟನೆ ಸತ್ಯವನ್ನು ಬೋಧಿಸುವ ಪಾರ್ಟಿಯಾಗಿದೆ-ಅಝೀಝ್ ಅಶ್ರಫಿ

Puttur_Advt_NewsUnder_1
Puttur_Advt_NewsUnder_1

sampya

ಪುತ್ತೂರು: ಮಹಾನ್ ಪಂಡಿತ ಸಮೂಹವನ್ನು ಹೊಂದಿರುವ ‘ಸಮಸ್ತ’ಸಂಘಟನೆಯು ಎಂದಿಗೂ ಸತ್ಯವನ್ನು ಬೋಧಿಸುವ ಪಾರ್ಟಿಯಾಗಿದ್ದು ಕೆಡುಕಿನಿಂದ ಜನರನ್ನು ದೂರ ಸರಿಯುವಂತೆ ಮಾಡಲು ಸಮಸ್ತ ಸದಾ ಮುಂಚೂಣಿಯಲ್ಲಿದೆ ಎಂದು ಪ್ರಭಾಷಣಗಾರ ಅಝೀಝ್ ಅಶ್ರಫಿ ಪಾಣತ್ತೂರು ಹೇಳಿದರು. ಅವರು ಜ.16 ರಂದು ಎಸ್‌ಕೆಎಸ್‌ಎಸ್‌ಎಫ್ ಸಂಪ್ಯ ಶಾಖೆ ಹಾಗೂ ಎಸ್‌ಕೆಎಸ್‌ಬಿವಿ ದಾರುಲ್ ಉಲೂಂ ಮದ್ರಸ ಇದರ ಜಂಟಿ ಆಶ್ರಯದಲ್ಲಿ ‘ಸಂಪ್ಯದ ಮುಹಿಯುದ್ದೀನ್ ಜುಮಾ ಮಸ್ಜಿದ್ ಸಭಾಂಗಣದಲ್ಲಿ ನಡೆದ ಶಂಸುಲ್ ಉಲಮಾ ಅನುಸ್ಮರಣಾ ಸಮಾರಂಭ ಹಾಗೂ ಸಮಸ್ತ 90 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ‘ಸಮಸ್ತ ಸಮ್ಮೇಳನ’ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.

ಸಮಸ್ತದ ನೇತಾರರು ಎಂದಿಗೂ ಜನರನ್ನು ತಪ್ಪು ದಾರಿಗೆ ಕರೆದೊಯ್ಯುವ ಕೆಲಸ ಮಾಡಿಲ್ಲ, ಪರಸ್ಪರ ಕಲಹ ಮಾಡಲು ಪ್ರೇರೇಪಿಸಿಲ್ಲ, ವಿಭಜನೆಯನ್ನು ಮಾಡಿಲ್ಲ, ಸತ್ಯವನ್ನು ಮಾತ್ರ ಜನರ ಮುಂದೆ ಹಾಗೂ ಸಮುದಾಯದ ಮುಂದೆ ಬೋಧನೆ ಮಾಡಿದ್ದಾರೆ, ಹಾಗಾಗಿ ಸಮಸ್ತದಿಂದ ಯಾವುದೇ ತಪ್ಪುಗಳು ಸಂಭವಿಸಿಲ್ಲ, ಸಮಸ್ತವನ್ನು ಅರಿತು ಬರುವವರಿಗೆ ಎಂದಿಗೂ ಸ್ವಾಗತವಿದೆ ಎಂದು ಅವರು ಹೇಳಿದರು.

ಸಂಪ್ಯ ಮಸೀದಿಯ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಆತೂರು ಮುದರ್ರಿಸ್ ಸೈಯದ್ ಜುನೈದ್ ಜಿಫ್ರಿ ತಂಙಳ್ ದುವಾ ನೆರವೇರಿಸಿದರು. ಸ್ಥಳೀಯ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ ಉದ್ಘಾಟಿಸಿದರು.

ವೇದಿಕೆಯಲ್ಲಿ  ವಕ್ಫ್ ಸಲಹಾ ಸಮಿತಿ ಸದಸ್ಯ ಯುನಿಟಿ ಹಸನ್ ಹಾಜಿ, ಉಸ್ಮಾನ್ ಹಾಜಿ ಸಂಪ್ಯ, ಸಹರಾ ಅರ್ಥ್ ಮೂವರ‍್ಸ್ ಮುಕ್ವೆ ಇದರ ಮಾಲಕ ಅಶ್ರಫ್ ಮುಕ್ವೆ, ಆರ‍್ಯಾಪು ಗ್ರಾ.ಪಂ ಸದಸ್ಯ ಜಬ್ಬಾರ್ ಎಸ್, ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಆಸಿಫ್ ಅಝ್‌ಹರಿ ಮಿತ್ತೂರು, ಹಮೀದಾಲೀಸ್ ಸಂಪ್ಯ, ಇಸ್ಮಾಯಿಲ್ ಬೈಲಾಡಿ, ಹಸನ್ ಬಾಖವಿ ಮುಕ್ರಂಪಾಡಿ, ಅಶ್ರಫ್ ದಾರಿಮಿ ಸಂಟ್ಯಾರ್, ಮುಹಮ್ಮದ್ ಮುಸ್ಲಿಯಾರ್ ಅಮ್ಮುಂಜೆ, ಅನೀಸ್ ಕೌಸರಿ ವೀರಮಂಗಲ, ಕೆ.ಎಂ ಇಬ್ರಾಹಿಂ ಮುಕ್ರಂಪಾಡಿ, ಇಬ್ರಾಹಿಂ ಅಮ್ಮುಂಜೆ, ಫಾರೂಕ್ ಸಂಟ್ಯಾರ್, ಇಬ್ರಾಹಿಂ ಸಂಪ್ಯ, ಅಬೂಬಕ್ಕರ್ ಕಲ್ಲರ್ಪೆ, ಶಿಹಾಬುದ್ದೀನ್ ಸಂಪ್ಯ, ಅಬ್ದುಲ್ ಅಝೀಝ್ ಸಂಪ್ಯ, ಶಾಹುಲ್ ಕೆಂಪಿ ಸಂಪ್ಯ, ಮಹಮ್ಮದ್ ಇಕ್ಬಾಲ್ ದರ್ಬೆ, ಅಬ್ದುಲ್ ಖಾದರ್ ಸಂಪ್ಯ, ಜಮಾಲ್ ಅರ್ಶದಿ ಸಂಪ್ಯ, ಮುಸ್ತಫಾ ಮುಸ್ಲಿಯಾರ್ ಸಂಪ್ಯ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಸದರ್ ಮುಅಲ್ಲಿಂ ಅಬ್ದುಲ್ ಶುಕೂರ್ ದಾರಿಮಿ ಸ್ವಾಗತಿಸಿದರು. ಸಂಪ್ಯ ವಿಖಾಯ ಟೀಂ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಧ್ವಜಾರೋಹಣ:

ಕಾರ್ಯಕ್ರಮದ ಪ್ರಯುಕ್ತ ಸಂಜೆ ನಡೆದ ಧ್ವಜಾರೋಹಣವನ್ನು ಸಂಪ್ಯ ಮಸೀದಿಯ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ ಜಲೀಲ್ ನೆರವೇರಿಸಿದರು. ಮುಝಮ್ಮಿಲ್ ತಂಙಳ್ ದುವಾ ಮಾಡಿದರು.

ಮಗ್ರಿಬ್ ನಮಾಜಿನ ಬಳಿಕ ಸ್ಥಳಿಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಅವರ ನೇತೃತ್ವದಲ್ಲಿ ಶಂಸುಲ್ ಉಲಮಾ ಅವರ ಅನುಸ್ಮರಣೆ ಹಾಗೂ ಮೌಲೂದ್ ಪಾರಾಯಣ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.