ಜ.19: ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ, ಉಲ್ಪೆ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ 81ನೇ ವರ್ಷದ ಅರ್ಧ ಏಕಾಹ ಭಜನೆಯು ಜ.19ರ ಸಂಜೆಯಿಂದ ಜ.20ರ ಬೆಳಿಗ್ಗೆ ತನಕ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಲಿದೆ.
ಜ.19ರಂದು ಉಲ್ಪೆ ಮೆರವಣಿಗೆ: ಏಕಾಹ ಭಜನೆಯ ಪ್ರಯುಕ್ತ ಜ.19ರಂದು ಸಂಜೆ ಉಲ್ಪೆ ಮೆರವಣಿಗೆ (ಹಣ್ಣು ಹಂಪಲು) ನಡೆಯಲಿದೆ. ಮೆರವಣಿಗೆಯು ಮಂದಿರದಿಂದ ಹೊರಟು ಮುಖ್ಯರಸ್ತೆಯಾಗಿ ಬಸ್ ನಿಲ್ದಾಣದಿಂದ ಮಹಾಮ್ಮಾಯಿ ರಸ್ತೆ, ಮಾರ್ಕೆಟ್ ರಸ್ತೆಯಾಗಿ ಮಂದಿರಕ್ಕೆ ತಲುಪಲಿರುವುದು. ರಾತ್ರಿ ಗಂಟೆ 12ಕ್ಕೆ ಮಹಾಪೂಜೆ, ಜ.20ರ ಬೆಳಿಗ್ಗೆ 6ಕ್ಕೆ ಮಹಾಪೂಜೆ ನಡೆಯಲಿರುವುದು. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.