ಸವಣೂರು ಜೆಸಿಐ ಪದಾಧಿಕಾರಿಗಳ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1

1ಚಿತ್ರ:ಶ್ರೀ ಸ್ವಸ್ತಿಕ ಸವಣೂರು

ಸವಣೂರು : ಸವಣೂರು ಜೆಸಿಐ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸವಣೂರು ವಿನಾಯಕ ಸಭಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಪದಗ್ರಹಣಾಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದ, ಜೆಸಿಐ ವಲಯ 15ರ ಉಪಾಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ಸಾಮಾನ್ಯ ವ್ಯಕ್ತಿಯನ್ನು ಕೂಡ ಸಮಾಜ ಮುಖ್ಯವಾಹಿನಿಗೆ ಬರುವಂತಾಗಲು ಜೆಸಿಐ ಪ್ರಮುಖ ಪಾತ್ರ ವಹಿಸುತ್ತದೆ.ವ್ಯಕ್ತಿತ್ವವಿಕಸನದೊಂದಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಜೆಸಿಐ ಹೊಂದಿದೆ ಎಂದರು.

ಮುಖ್ಯ ಅತಿಥಿ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಸಮಾಜ ಸೇವೆಯೊಂದಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳೆಸಿಕೊಳ್ಳಲು ಸಂಘಟನೆಗಳು ಪೂರಕ ವಾತಾವರಣ ಕಲ್ಪಿಸುತ್ತದೆ. ಅವಕಾಶದ ಸದ್ಬಳಕೆ ಮಾಡಿಕೊಳ್ಳುವಿಕೆಯಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ನಿಕಟಪೂರ್ವಾಧ್ಯಕ್ಷ ಶಶಿಕುಮಾರ್ ಬಿ.ಎನ್ ತನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನೂತನ ಅಧ್ಯಕ್ಷ ವಸಂತ ಎಸ್.ವೀರಮಂಗಲ ಮಾತನಾಡಿ,ಎಲ್ಲರ ಸಹಕಾರದೊಂದಿಗೆ ಜೆಸಿಐ ಸಂಸ್ಥೆಯಡಿ ತರಬೇತಿ ಶಿಬಿರ,ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗುವುದು.ಅವಕಾಶದ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ನಿಕಟ ಪೂರ್ವ ಕಾರ್ಯದರ್ಶಿ ದಯಾನಂದ ಮೆದು, ಜೆಸಿರೆಟ್ ಅಧ್ಯಕ್ಷೆ  ಮಮತಾ ವಸಂತ್ ಎಸ್, ಕಾರ್ಯಕ್ರಮ ನಿರ್ದೇಶಕ ಮಹೇಶ್ ಕೆ.ಸವಣೂರು ಉಪಸ್ಥಿತರಿದ್ದರು.

ನೂತನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ದಯಾನಂದ ಎಂ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಬಿ.ಎಸ್, ಜತೆಕಾರ್ಯದರ್ಶಿಯಾಗಿ ನವೀನ್ ಕುಮಾರ್, ನಿರ್ದೇಶಕರಾಗಿ ಯತೀಶ್ ಕುಮಾರ್ ಕೆ.ಎಂ, ಕಿರಣ್ ಪ್ರಸಾದ್ ಕುಂಡಡ್ಕ, ಚೈತ್ರಾ ಎಸ್, ರಮೇಶ್, ಅಬ್ದುಲ್ ಆಸೀಪ್,  ಸದಸ್ಯರಾಗಿ ರಫೀಕ್ ಎಂ.ಎ, ಸವಿತಾ ಪ್ರವೀಣ್ ಕುಂಟ್ಯಾನ, ಸಂತೋಷ್ ಆಚಾರ್ಯ ಕಾಯರ್ಗ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಜೆಸಿಐನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪಂಜ ಜೆಸಿಐನ ಅಧ್ಯಕ್ಷ ಚೇತನ್ ತಂಟೆಪ್ಪಾಡಿ, ಬೆಳ್ಳಾರೆ ಜೆಸಿಐನ ಅಧ್ಯಕ್ಷ ಪ್ರದೀಪ್ ನೆಟ್ಟಾರು, ಸರ್ವೆ ಎಸ್, ಜಿ.ಎಂ.ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಎಚ್.ಡಿ ಶುಭಹಾರೈಸಿದರು.

ನಿಕಟಪೂರ್ವಾಧ್ಯಕ್ಷ ಶಶಿಕುಮಾರ್ ಬಿ.ಎನ್ ಸ್ವಾಗತಿಸಿ,ನೂತನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು.

2 (2)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.