Breaking News

ಅರ್ಲಪದವು : ಬಸ್ ಮತ್ತು ಬೈಕ್ ಡಿಕ್ಕಿ- ಸವಾರ ಸ್ವರ್ಗ ಎಡಮಲೆ ನಿವಾಸಿ ಐತ್ತಪ್ಪ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಅರ್ಲಪದವಿನಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಕಾಸರಗೋಡು ಎಡಮಲೆ ನಿವಾಸಿಯೋರ್ವರು ಮೃತಪಟ್ಟ ಘಟನೆ ಜ.18ರಂದು ಸಂಜೆ ನಡೆದಿದೆ.

ಕಾಸರಗೋಡು ಎಡಮಲೆ ಮೈಕಾನ ನಿವಾಸಿ ಕೃಷ್ಣ ನಾಯ್ಕರವರ ಪುತ್ರ ಕೂಲಿ ಕಾರ್ಮಿಕ ಐತ್ತಪ್ಪ ನಾಯ್ಕ(24ವ)ರವರು ಮೃತ ಪಟ್ಟವರು. ಪಾಣಾಜೆ ಯಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ (ಹಾನೆಸ್ಟ್) ಗೆ ಅರ್ಲಪದವಿನಿಂದ ಪಾಣಾಜೆ ಕಡೆಗೆ ಹೋಗುತ್ತಿದ್ದ ಹೀರೋ ಹೊಂಡ ಸ್ಪ್ಲೆಂಡರ್ ಬೈಕ್ (ಕೆ.ಎ.21 ಎಚ್ 1108) ನಡುವೆ ಆರ್ಲಪದವಿನಲ್ಲಿ ಡಿಕ್ಕಿ ಸಂಭವಿಸಿದೆ.  ಡಿಕ್ಕಿಯ ರಭಸಕ್ಕೆ ಮಾರು ದೂರ ಸಂಚರಿಸಿದ ಬೈಕ್ ರಸ್ತೆ ಬದಿಯಲ್ಲಿನ ಬೋರ್‌ವೆಲ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಐತ್ತಪ್ಪರವರ ತಲೆ ಬೋರ್ ವೆಲ್ ಗೆ ತಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಜೀಪೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರು ದಾರಿ ಮಧ್ಯೆ ಮೃತ ಪಟ್ಟಿದ್ದರು. ಮೃತ ಶರೀರವನ್ನು ಸರಕಾರಿ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇಡಲಾಗಿದೆ. ಜ.19ರಂದು ಬೆಳಿಗ್ಗೆ ಶವ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

20160118050629

Arlapadavu 3

arlapadavu arlapadavu 1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.