ಸಿಟಿಗೋಲ್ಡ್‌ನಿಂದ ವಿಶೇಷ ಸ್ವರ್ಣ ನೆಕ್ಲೇಸ್ ವಿನ್ಯಾಸ ಸ್ಪರ್ಧೆ-ವಿಜೇತರಿಗೆ ಬಹುಮಾನ

Puttur_Advt_NewsUnder_1
Puttur_Advt_NewsUnder_1

city

ಪುತ್ತೂರು:  ಪುತ್ತೂರು, ಮಂಗಳೂರು, ಕಾಸರಗೋಡು ಇನ್ನಿತರ ಕಡೆಗಳಲ್ಲಿ ಶಾಖೆಗಳನ್ನು ಹೊ೦ದಿರುವ ಸಿಟಿಗೋಲ್ಡ್ ಸ೦ಸ್ಥೆಯ ವತಿಯಿಂದ ಕಳೆದ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲಾದ ವಿಶೇಷ ಸ್ವರ್ಣ ನೆಕ್ಲೇಸ್ ವಿನ್ಯಾಸ ಸ್ಪರ್ಧೆಯ ಫಲಿತಾಂಶ ಮತ್ತು ಬಹುಮಾನ ವಿತರಣಾ ಸಮಾರಂಭ  ಜ. 16 ರಂದು ಜರುಗಿತು. ಸಿಟಿಗೋಲ್ಡ್ ನಿರ್ದೇಶಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಫಝಲ್ ರಹೀಂರವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕು೦ತಳಾ ಟಿ. ಶೆಟ್ಟಿರವರು ಭಾಗವಹಿಸಿದ್ದರು. ವೇದಿಕೆಯಲ್ಲಿ ನ್ಯಾಯವಾದಿ, ನೋಟರಿ ಶಾಹಿರ ಕೆ. ಝಬೈರ್, ಕ್ರೈಸ್ತ ವಿವಾಹ ನೋಂದಣಾಧಿಕಾರಿ ನ್ಯಾಯವಾದಿ  ಸೆಲ್ವಿಯ ಡಿ’ಸೋಜಾ, ಸಿಟಿ ಗೋಲ್ಡ್ ಗ್ರೂಪ್ ಸಂಸ್ಥೆಯ ಚೇರ್‌ಮೆನ್  ಕೆ. ಅಬ್ದುಲ್ ಕರೀಂ, ನಿರ್ದೇಶಕ ಇರ್ಷಾದ್, ಆದಂ ಹಾಜಿ, ತೀರ್ಪುಗಾರ ಪುರುಷೋತ್ತಮ, ಪ್ರವೀಣ್ ಹಾಗೂ ಪುತ್ತೂರು ಸಿಟಿಗೋಲ್ಡ್ ಶಾಖೆಯ ಮ್ಯಾನೇಜರ್ ಜುನೈದ್, ಶೌಕತ್ ಆಲಿರವರು ಭಾಗವಹಿಸಿದ್ದರು.  ಸಿಟಿ ಗೋಲ್ಡ್ ನಿರ್ದೇಶಕ ಆದಂ ಹಾಜಿ ಸ್ವಾಗತಿಸಿ, ಇರ್ಷಾದ್ ವಂದಿಸಿದರು. ಮಹಮ್ಮದ್ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಸ್ವರ್ಣ ನೆಕ್ಲೇಸ್ ವಿನ್ಯಾಸ ಸ್ಪರ್ಧೆಯ ಪ್ರಥಮ ವಿಜೇತ ನುಶ್ರತ್ ಪುರುಷರಕಟ್ಟೆ, ದ್ವಿತೀಯ ರಮೇಶ್ ಎಂ. ಸುಳ್ಯ, ಪ್ರೋತ್ಸಾಹ ಬಹುಮಾನವನ್ನು ಜೇನ್ ಎಂ. ರೆಬೆಲ್ಲೋ ಪುತ್ತೂರು , ಶ್ರೀ ಲಕ್ಷ್ಮೀ ಶೆಟ್ಟಿ ಪುತ್ತೂರು, ಕಮರುನ್ನಿಸ ಜಿ. ಸುಳ್ಯ, ಆಯಿಷಾ ಸಂಪ್ಯ, ಫಾತಿಮ ಸಹದೀಯ ಮಂಗಳೂರು, ಮರಿಯಮ್ಮತ್ ಇರ್ಷಾನ ಬೆಟ್ಟಂಪಾಡಿ, ದಿನೇಶ್ ಯು.ಪುಂಜಾಲಕಟ್ಟೆ, ಅನೀಸ ಫಾತಿಮ ಪಡೀಲ್‌ರವರು ಪಡೆದುಕೊಂಡರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.