ಹತ್ಯಡ್ಕ, ಅರಸಿನಮಕ್ಕಿ, ಕೌಕ್ರಾಡಿ ಪರಿಸರದಲ್ಲಿ ಕಾಡಾನೆ ಪುಂಡಾಟ, ಹಲವರ ಕೃಷಿ ಹಾನಿ-ಅಪಾರ ನಷ್ಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

hathyadka 1

ಉಪ್ಪಿನಂಗಡಿ: ಅರಸಿನಮಕ್ಕಿ, ಕೌಕ್ರಾಡಿ ಪರಿಸರದಲ್ಲಿ ಕಳೆದ 4 ದಿನಗಳಿಂದ 2 ಕಾಡಾನೆಗಳು ಬೀಡು ಬಿಟ್ಟಿದ್ದು, ಹಲವರ ಅಡಿಕೆ, ಬಾಳೆ ತೋಟದೊಳಗೆ ನುಗ್ಗಿ ಪುಂಡಾಟ ನಡೆಸಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.

 ಭಾನುವಾರ ಮಧ್ಯರಾತ್ರಿ 1 ಗಂಟೆಯ ಬಳಿಕ ಹತ್ಯಡ್ಕ ಗ್ರಾಮದ ಮಾಸ್ಟರ್‌ತೋಟ ಎಂಬಲ್ಲಿ ಪ್ರೇಮಾ ಚಂದ್ರಶೇಖರ್ ಎಂಬವರ ತೋಟಕ್ಕೆ ನುಗ್ಗಿದ 2 ಕಾಡಾನೆ ನಸುಕಿನ 4 ಗಂಟೆ ತನಕ ಪುಂಡಾಟ ನಡೆಸಿ ಅಪಾರ ಕೃಷಿ ಹಾನಿ ಮಾಡಿದೆ. ಮನೆಯಲ್ಲಿ ವೃದ್ದ ದಂಪತಿಗಳು ಮಾತ್ರ ಇದ್ದುದರಿಂದ ಕಾಡಾನೆಯನ್ನು ಓಡಿಸುವ ಪ್ರಯತ್ನವನ್ನು ಮಾಡಲಾಗಲಿಲ್ಲ. ತೋಟದಲ್ಲಿ ಸುಮಾರು 3ಗಂಟೆಗಳ ಕಾಲ ಇದ್ದ ಕಾಡಾನೆ 1 ತೆಂಗಿನ ಮರ ಸೇರಿದಂತೆ 200ಕ್ಕೂ ಅಧಿಕ ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ, ತೋಟಕ್ಕೆ ಅಳವಡಿಸಿದ ಪಿವಿಸಿ ಪೈಪುಗಳು ಹಾಗೂ ಕ್ಯೂಆರ್‌ಸಿ ಆನೆಯ ತುಳಿತದಿಂದ ನಾಶವಾಗಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.

ಶನಿವಾರ ರಾತ್ರಿ ಕೌಕ್ರಾಡಿ ಗ್ರಾಮದ ಪಿಲತ್ತಿಂಜ ಬೈಲಿನ ಹಲವಾರು ಕೃಷಿಕರ ತೋಟಗಳಿಗೆ ಎರಡು ಕಾಡಾನೆ ನುಗ್ಗಿ ಬಾಳೆ, ತೆಂಗು, ಅಡಿಕೆ ಮರಗಳನ್ನು ಕೆಡವಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಉಂಟು ಮಾಡಿದೆ.

 ಕೌಕ್ರಾಡಿ ಪರಿಸರದ ಓಡರಳಿಕೆ ರಫಾಯಲ್ ಸ್ಟ್ರೆಲ್ಲಾ, ಡೆನ್ನಿಸ್ ಸ್ಟ್ರೆಲ್ಲಾ, ಫ್ರಾನ್ಸಿಸ್ ಸ್ಟ್ರೆಲ್ಲಾ, ಜಾನ್ ಸ್ಟ್ರೆಲ್ಲಾ, ಮಂಡೆಗುಂಡಿ ಲಾರೆನ್ಸ್ ಮಾಡ್ತಾ, ಜಾನ್ ಮಾಡ್ತಾ ಮುಂತಾದವರ ಕೃಷಿ ತೋಟಗಳಿಗೆ ಶನಿವಾರ ರಾತ್ರೆ ನುಗ್ಗಿದ ಎರಡು ಕಾಡಾನೆಗಳು ಬೆಳಗಿನ ತನಕ ಹಲವಾರು ತೆಂಗಿನ ಗಿಡಗಳನ್ನು, ಬಾಳೆ ಗಿಡಗಳು ಮತ್ತು ಅಡಕೆ ಗಿಡಗಳನ್ನು ನೆಲಸಮ ಮಾಡಿವೆ.

 ಕೆಲ ವಾರಗಳಿಂದ ಈ ಭಾಗದ ಕೌಕ್ರಾಡಿ, ಅರಸಿನಮಕ್ಕಿ, ರೆಖ್ಯಾ, ಶಿಶಿಲ, ಶಿಬಾಜೆ ಕಡೆಯ ತೋಟಗಳಿಗೆ ಇದೇ ಕಾಡಾನೆಗಳು ರಾತ್ರೆ ವೇಳೆ ದಾಳಿಯಿಡುತ್ತಿದ್ದು ಸ್ಥಳೀಯ ಕೃಷಿಕರು ಭೀತಿ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಪ ವಲಯಾರಣ್ಯಾಧಿಕಾರಿ ಸೋಮನಾಥ್, ಅರಣ್ಯ ರಕ್ಷಕ ಪ್ರವೀಣ್, ಅರಣ್ಯ ವೀಕ್ಷಕ ಕುಶಾಲಪ್ಪ ಗೌಡ ಮೊದಲಾದವರು ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.

 ಆನೆ ಕಂದಕಕ್ಕೆ ಪ್ರಸ್ತಾವಣೆಸಲ್ಲಿಸಲಾಗಿದೆ-ಆರ್.ಎಫ್.ಓ.

 ಆನೆ ನಾಡಿನ ಒಳಗೆ ನುಗ್ಗುವ ಪ್ರದೇಶಗಳಲ್ಲಿ ಆನೆ ಕಂದಕ ನಿರ್ಮಿಸುವ ಬಗ್ಗೆ ಈಗಾಗಲೇ ಇಲಾಖೆಗೆ ಪ್ರಸ್ತಾವಣೆ ಸಲ್ಲಿಕೆಯಾಗಿದೆ. ಇದೀಗ ಆನೆ ಒಮ್ಮೆ ಬಂದ ದಾರಿಯಲ್ಲೆ ಕೆಲವು ದಿನ ಬರುತ್ತದೆ, ಮತ್ತೆ ಅದು ಕಾಡಿನೊಳಗೆ ಹೋಗುತ್ತದೆ, ಇಲಾಖೆಯ ಸಿಬ್ಬಂದಿಗಳೂ ಅದರ ಚಲನ ವಲನಗಳ ಬಗ್ಗೆ ನಿಗಾ ಇರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಅವುಗಳನ್ನು ಕಾಡಿಗೆ ಅಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ ಈ ಬಗ್ಗೆ ಯಾರೂ ಭೀತಿ ಪಡಬೇಕಾಗಿಲ್ಲ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

hathyadka 2

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.