ಅರಳು ಮಲ್ಲಿಗೆ, ಜ್ಞಾನಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಇವರು ಭರತನಾಟ್ಯ, ಜಾನಪದ ನೃತ್ಯ, ಸಂಗೀತ, ಯಕ್ಷಗಾನ ಮತ್ತು ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯ/ಹೊರರಾಜ್ಯದ ವಿದ್ಯಾರ್ಥಿಗಳಿಗೆ ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿಗೆ ಮತ್ತು 2014-15 ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ 85 ಶೇಕಡಾ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ‘ಜ್ಞಾನಶ್ರೀ’ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಇತ್ತೀಚೆಗಿನ ಎರಡು ಭಾವಚಿತ್ರ, ವಿವರಗಳನ್ನೊಳಗೊಂಡ ಅರ್ಜಿಗಳನ್ನು ನಿರ್ದೇಶಕರು, ಜ್ಞಾನ ಮಂದಾರ ಅಕಾಡೆಮಿ, ನಂ. 39, ಗಾಣಿಗರ ಹಳ್ಳಿ, ಚಿಕ್ಕಬಾಣಾವರ ಅಂಚೆ, ಬೆಂಗಳೂರು-90 ಇಲ್ಲಿಗೆ ಜನವರಿ 30 ರೊಳಗೆ ಕಳುಹಿಸಿಕೊಡಲು ಸಂಸ್ಥೆಯ ಪ್ರಕಟಣೆಯಲ್ಲಿ ಕೋರಲಾಗಿದೆ.

ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಸಹಯೋಗದೊಂದಿಗೆ ಫೆ.21 ರಂದು ಪುತ್ತೂರು ಪುರಭವನದಲ್ಲಿ ನಡೆಯಲಿದೆಯೆಂದು ಬೆಂಗಳೂರು ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಇದರ ನಿರ್ದೇಶಕ ಸಿ. ಸೋಮಶೇಖರ್ ತಿಳಿಸಿರುತ್ತಾರೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.