ಎಸ್‌ಕೆಎಸ್‌ಎಸ್‌ಎಫ್ ಕಲ್ಲೇಗ ಕ್ಲಸ್ಟರ್‌ನಿಂದ ಸಮಸ್ತ 90 ಪ್ರಚಾರ ಸಮ್ಮೇಳನ, ಶಂಸುಲ್ ಉಲಮಾ ಅನುಸ್ಮರಣೆ

Puttur_Advt_NewsUnder_1
Puttur_Advt_NewsUnder_1

skssfಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಕಲ್ಲೇಗ ಕ್ಲಸ್ಟರ್ ವತಿಯಿಂದ ಆದರ್ಶ ಪರಿಶುದ್ಧತೆಯ 90 ವರ್ಷ ಸಮಸ್ತ 90 ಪ್ರಚಾರ ಸಮ್ಮೇಳನ ಮತ್ತು ಶಂಸುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಕಲ್ಲೇಗ ಜುಮಾ ಮಸೀದಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಕಲ್ಲೇಗ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ. ಮಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದರು. ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್, ದ.ಕ. ಜಿಲ್ಲಾ ಖಾಝಿ ಶೈಖೂನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿರವರು ಕಾರ್ಯಕ್ರಮ ಉದ್ಘಾಟಿಸಿ, ಸಮಸ್ತ ಆದರ್ಶ ಪರಿಶುದ್ಧತೆಯ 90  ವರ್ಷದ ಚರಿತ್ರೆಯನ್ನು ಮಾತನಾಡಿ, ಪ್ರತಿಯೊಬ್ಬರೂ ಸಮಸ್ತದಲ್ಲಿ ಕೈಜೋಡಿಸಿದರೆ ಪರಲೋಕದಲ್ಲಿ ವಿಜಯಿಯಾಗಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಫೆಬ್ರವರಿಯಲ್ಲಿ ನಡೆಯುವ ಸಮಸ್ತ ಸಮ್ಮೇಳನಕ್ಕೆ ಪ್ರತಿಯೊಬ್ಬರೂ ಭಾಗಿಯಾಗಬೇಕೆಂದು ಕರೆ ನೀಡಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್‌ರವರು ಮಾತನಾಡಿ, ಅಹ್ಲ್‌ಸುನ್ನತ್ ವಲ್ ಜಮಾಅತ್ ಆದರ್ಶವನ್ನು ಎತ್ತಿ ಹಿಡಿಯಲಿಕ್ಕೆ ಸಮಸ್ತವು ಮುಂಚೂಣಿಯಲ್ಲಿ ಬೆಳೆದಿದೆ. ಅದನ್ನು ಯಾವ ಶಕ್ತಿಯಿಂದಲೂ ಕೂಡಾ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಅಲ್‌ಹಾಜ್ ಸಯ್ಯದ್ ಅಲಿ ತಂಙಳ್ ಕರಾವಳಿ ಮತ್ತು ಬದ್ರುದ್ದೀನ್ ತಂಙಳ್ ಪಾವೂರು, ಮೌಲಾನ ಅಬ್ದುಲ್ ರಝಾಕ್ ಹಾಜಿ,  ಕಬಕ ಮಲೇಶಿಯಾ ಕೆಐಸಿ ಪ್ರೊಫೆಸರ್ ಅನೀಸ್ ಕೌಸರಿ, ಚೊಕ್ಕಬೆಟ್ಟು ಮುದರ್ರಿಸ್ ಅಬ್ದುಲ್ ಅಝೀಝ್ ದಾರಿಮಿ, ಕಲ್ಲೇಗ ಮುದರ್ರಿಸ್ ಮೊದು ಫೈಝಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದ.ಕ. ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಸಯ್ಯಿದ್ ಭಾಷಾ ತಂಙಳ್, ದ.ಕ. ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಟಿ.ಎಂ. ಶಹೀದ್ ತೆಕ್ಕಿಲ್, ಎಸ್‌ಕೆಎಸ್‌ಎಸ್‌ಎಫ್ ವಿಟ್ಲ ವಲಯದ ಅಧ್ಯಕ್ಷ ಅಶ್ರಫ್ ಕಬಕ, ಕಲ್ಲೇಗ ಜುಮ್ಮಾ ಮಸೀದಿ ಕೋಶಾಧಿಕಾರಿ ಶಕೂರ್ ಹಾಜಿ, ಕಲ್ಲೇಗ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕೆ., ಕಲ್ಲೇಗ ಜುಮ್ಮಾ ಮಸೀದಿ ಸದಸ್ಯ ಅಬೂಬಕ್ಕರ್ ಹಾಜಿ ಪುತ್ತೂರು ಟಿಂಬರ್, ಪುತ್ತೂರು ಉದ್ಯಮಿ ಹಾರಾಡಿ ಅಬ್ದುಲ್ ರಝಾಕ್, ಪುತ್ತೂರು ಫೈವ್‌ಸ್ಟಾರ್ ಅಟೋ ಲಿಂಕ್ಸ್ ಯೂಸುಫ್ ಹಾಜಿ, ಪುತ್ತೂರು ನ್ಯಾಯವಾದಿ ಕೆ.ಎಂ. ಸಿದ್ದೀಕ್, ಹಸೈನಾರ್ ಬನಾರಿ, ಕಾರ್ಜಾಲ್ ಜುಮ್ಮಾ ಮಸೀದಿ ಖತೀಬ್ ಉಮ್ಮರ್ ಯಮಾನಿ, ಕಾರ್ಜಾಲ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಎಸ್. ಅಬ್ದುಲ್ ಹಮೀದ್ ಸೋಂಪಾಡಿ, ಕಲ್ಲೇಗ ಸದರ್ ಉಸ್ತಾದ್ ಬಶೀರ್ ದಾರಿಮಿ, ಕಲ್ಲೇಗ ಅಲ್ ಅಮೀನ್ ಯಂಗ್‌ಮೆನ್ಸ್ ಅಧ್ಯಕ್ಷ ಶಂಸುದ್ದೀನ್ ಕಲ್ಲೇಗ, ಕಲ್ಲೇಗ ಮುಅಲ್ಲಿಂ ಸಿದ್ದೀಕ್ ಅಲ್‌ಅಝ್‌ಹರಿರವರು ಆಗಮಿಸಿದರು. ಮುಖ್ಯ ಅತಿಥಿಗಳನ್ನು ಎಸ್‌ಕೆ ಎಸ್‌ಎಸ್‌ಎಫ್ ಕಲ್ಲೇಗ ಕ್ಲಸ್ಟರ್ ಅಧ್ಯಕ್ಷ ಇಬ್ರಾಹಿಂ ಬಾತಿಶ ಪಾಟ್ರಕೋಡಿ ಬರಮಾಡಿಕೊಂಡರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿ ಪ್ರೊಫೆಸರ್ ಅನ್ವರ್ ಅಲಿ ಹುದವಿ ಚೆಮ್ಮಾಡ್‌ರವರು ಖಬರಿನ ಭಯಾನಕ ಶಿಕ್ಷೆಯ ಕುರಿತು ಅರ್ಥಗಂಭೀರವಾಗಿ ವಿವರಿಸಿದರು. ಜೀವನದಲ್ಲಿ ಪ್ರತಿಯೊಬ್ಬನು ಈ ಲೋಕದಲ್ಲಿ ಉತ್ತಮ ಕೆಲಸವನ್ನು ಮಾಡಿದರೆ ನಾಳೆ ಪರ ಲೋಕದಲ್ಲಿ ವಿಜಯಿಯಾಗಲು ಸಾಧ್ಯವಿದೆ. ಮಾತ್ರವಲ್ಲದೆ ಶಂಸುಲ್ ಉಲಮಾ ರವರಂತಹ ಪಂಡಿತರುಗಳು ಕಟ್ಟಿ ಬೆಳೆಸಿದಂತಹ ಸಮಸ್ತದೊಂದಿಗೆ ಕೈ ಜೋಡಿಸಿದರೆ ನಾಳೆ ಪರಲೋಕ ದಲ್ಲಿ ವಿಜಯಿಯಾಗಲು ಸಾಧ್ಯವಾಗ ಬಹುದೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಲ್ಲೇಗ ಜಮಾಅತ್ ವತಿಯಿಂದ ದ.ಕ. ಜಿಲ್ಲಾ ಖಾಝಿರವರಿಗೆ ಜಮಾಅತ್ ಅಧ್ಯಕ್ಷ ಕೆ.ಪಿ. ಮೊಹಮ್ಮದ್ ಹಾಜಿರವರು ಶಾಲು ಹೊದಿಸಿ ಸನ್ಮಾನಿಸಿದರು ಮತ್ತು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್‌ರವರಿಗೆ ಎಸ್‌ಕೆಎಸ್‌ಎಸ್‌ಎಫ್ ಕಲ್ಲೇಗ ಕ್ಲಸ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಕಾರ್ಯ ಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕಲ್ಲೇಗ ಶಾಖೆ ವತಿಯಿಂದ ಶಂಸುಲ್ ಉಲಮಾ ಸ್ಮರಣ ಸಂಚಿಕೆಯನ್ನು ಅಲ್‌ಹಾಜ್ ಸಯ್ಯಿದ್ ಅಲಿ ತಂಙಳ್ ಕರಾವಳಿ ಬಿಡುಗಡೆಗೊಳಿಸಿ ಅದನ್ನು ಉದ್ಯಮಿ ಹಾರಾಡಿ ಅಬ್ದುಲ್ ರಝಾಕ್‌ರವರು ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಕಿರಾಅತ್, ಸೆಯ್ಯದ್ ಹಾಫಿಳ್ ಸ್ವಾದಿಕ್ ಮೈಸೂರು ಪಠಿಸಿದರು. ಕಾರ್ಯಕ್ರಮಕ್ಕೆ ಕೆ.ಪಿ. ಝಕೀರ್ ಹನೀಫ್ (ಉದಯ) ಸ್ವಾಗತಿಸಿ, ಇಬ್ರಾಹಿಂ ಕಡವ ವಂದಿಸಿ, ಸಿದ್ದೀಕ್ ಬೀಟಿಗೆ ಮತ್ತು ಅದ್‌ನಾನ್ ಪೈವಳಿಕೆ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.