ರೋಟರಿ ಪುತ್ತೂರು ಕ್ಲಬ್‌ನ ಕುಟುಂಬ ಸಮ್ಮಿಲನ-ನೃತ್ಯಾ ಸಂಧ್ಯಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

rotary

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮತ್ತು ಕ್ಲಬ್‌ನ ಸಮುದಾಯ ಸೇವಾ ವಿಭಾಗದ ನಿರ್ದೇಶಕ ದಂತವೈದ್ಯ ಡಾ.ಶ್ರೀಪ್ರಕಾಶ್‌ರವರ ಪುತ್ರಿ ಕುಮಾರಿ ಪ್ರಾರ್ಥನಾರವರಿಂದ ಕರ್ನಾಟಕ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಜ.15 ರಂದು ರೋಟರಿ ಜಿ.ಎಲ್.ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ರಫೀಕ್ ಎಂ.ಜಿ.ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜ.17 ರಂದು ಕ್ಲಬ್‌ನ ಎಂ.ಜಿ.ರೈರವರ ನೇತೃತ್ವದಲ್ಲಿ 15 ಗ್ರೂಪ್‌ನೊಂದಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ, ಜ.23 ರಂದು ಸವಣೂರು ಸೀತಾರಾಮ ರೈರವರ ಮನೆಯಲ್ಲಿ ನಾಲ್ಕು ಕ್ಲಬ್‌ಗಳ ಮೀಟಿಂಗ್, ಜ.24 ರಂದು 2016 -17 ರ ಅಧ್ಯಕ್ಷ ಡಾ.ಅಶೋಕ್ ಪಡಿವಾಳ್‌ರವರ ನೇತೃತ್ವದಲ್ಲಿ ಮುಂದಿನ ವರುಷದ ಕಾರ್ಯಕ್ರಮಗಳ  ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಜನವರಿ ತಿಂಗಳಿನಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಸದಸ್ಯರಿಗೆ ಮತ್ತು ಭೋಜನವನ್ನು ಪ್ರಾಯೋಜಕತ್ವ ಮಾಡಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸನ್ಮಾನ: 65 ಶಾಲೆಯಲ್ಲಿ  ಸುಮಾರು 9500 ಸಾವಿರ ವಿದ್ಯಾರ್ಥಿಗಳಿಗೆ ಡೆಂಟಲ್ ಕ್ಯಾಂಪ್ ನಡೆಸಿದ ಕ್ಲಬ್‌ನ ಸಮುದಾಯ ಸೇವಾ ವಿಭಾಗದ ನಿರ್ದೇಶಕ ದಂತವೈದ್ಯ ಡಾ.ಶ್ರೀಪ್ರಕಾಶ್ ಮತ್ತು ಅವರ ಪತ್ನಿ ಅರ್ಚನಾರವರನ್ನು ಕ್ಲಬ್ ವತಿಯಿಂದ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ಯಾಮ್‌ರವರು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೆ ಡಾ| ಶ್ರೀಪ್ರಕಾಶ್‌ರವರ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಪವಿತ್ರ, ಅರ್ಚನಾ ಮತ್ತು ಚರಿತರವರನ್ನು ಅಭಿನಂದಿಸಲಾಯಿತು. ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ವೇದಿಕೆಯಲ್ಲಿ ಕ್ಲಬ್ ಸರ್ವಿಸ್ ನಿರ್ದೇಶಕ ಶ್ರೀಕಾಂತ್ ಕೊಳತ್ತಾಯ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪರಮೇಶ್ವರ ಗೌಡ ವರದಿ ವಾಚಿಸಿ, ಇನ್ನರ್‌ವೀಲ್ ಕ್ಲಬ್‌ನ ಶಂಕರಿ ಎಸ್ ಭಟ್‌ರವರು ವಂದಿಸಿದರು. ಕುಮಾರಿ ಪ್ರಾರ್ಥನಾರವರ ಮುಖ್ಯಶಿಕ್ಷಕಿ ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಸಿಸ್ಟರ್ ಲಿಲ್ಲಿ ಡಿ’ಸೋಜ ಸೇರಿದಂತೆ ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯರು ಉಪಸ್ಥಿತರಿದ್ದರು.

rotary1

 ನೃತ್ಯಾ ಸಂಧ್ಯಾ ಕಾರ್ಯಕ್ರಮ: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್‌ರವರ ನಿರ್ದೇಶನದಲ್ಲಿ ವಿದ್ವಾನ್ ಪ್ರೀತಿಕಲಾ ದೀಪಕ್‌ರವರ ಹಾಡುಗಾರಿಕೆಯಲ್ಲಿ ಕುಮಾರಿ ಪ್ರಾರ್ಥನಾರವರಿಂದ ಕರ್ನಾಟಕ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು. ವಯಲಿನ್‌ನಲ್ಲಿ ಕುಮಾರಿ ಧನ್ಯಶ್ರೀ ಮತ್ತು ಮೃದಂಗದಲ್ಲಿ ನಿಕ್ಷಿತ್ ಟಿ ಪುತ್ತೂರುರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.