Breaking News

ಶಿರಾಡಿ ಗ್ರಾ.ಪಂ: ಮಕ್ಕಳ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

shiradi

ಪುತ್ತೂರು: ಶಿರಾಡಿ ಗ್ರಾಮ ಪಂಚಾಯತ್‌ನ 2015-16ನೇ ಸಾಲಿನ ಮಕ್ಕಳ ಗ್ರಾಮ ಸಭೆ ಜ.13ರಂದು ಸಂತ ಅಂತೋನಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಲ್ಲಿಕ ಸಭಾಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಶಿಕ್ಷಕರ ಕೊರತೆ, ಶಾಲೆಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದು, ಶಾಲಾ ಆಟದ ಮೈದಾನ ವಿಸ್ತರಣೆ, ಹೊಸ ಸಾರ್ವಜನಿಕ ಶೌಚಾಲಯ, ಕಸ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ, ಕಂಪ್ಯೂಟರ್ ವ್ಯವಸ್ಥೆ, ರಸ್ತೆಯ ದುರಸ್ತಿ, ಶಾಲೆಗಳಿಗೆ ಗ್ರಂಥಾಲಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಕ್ಕಳು ಮುಂದಿಟ್ಟರು. ಅಧ್ಯಕ್ಷ ತಿಮ್ಮಯ್ಯ ಗೌಡ ಮಾತನಾಡಿ ಮಕ್ಕಳ ಪ್ರಶ್ನೆಗಳಿಗೆ ಮುಕ್ತವಾದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ನೆಲ್ಯಾಡಿ ಸಿ.ಆರ್.ಪಿ ಅಶೋಕ್ ಕುಮಾರ್ ಇವರು ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಬಿಂದು ಕೆ.ಎಸ್. ಸದಸ್ಯರಾದ ರಮಣಿ, ಪ್ರಕಾಶ್ , ರಾಜೇಶ್ ಉಪಸ್ಥಿತರಿದ್ದರು. ಉದನೆ, ಕಳಪ್ಪಾರು, ಅಡ್ಡಹೊಳೆ ಶಾಲೆಯ ಶಿಕ್ಷಕರು ಪದಂಬಳ ಮತ್ತು ಶಿರಾಡಿ ಅಂಗನವಾಡಿಯ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿಯರು ಭಾಗವಹಿಸಿದರು. ಪಿಡಿಒ ದೇವರಾಜ ಡಿ.ಎಸ್, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ ಪಂ ಸಿಬ್ಬಂದಿ ತನಿಯಪ್ಪ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.