ನೆಟ್ಟಣ: ರೈಲು ಇಂಜಿನ್ ಚಾಲಕನ ಲಗೇಜ್, ವಾಕಿಟಾಕಿ ಕಳವು : ತನಿಖೆ ವೇಳೆ ಲಗೇಜ್ ಪತ್ತೆ, ವಾಕಿಟಾಕಿ ನಾಪತ್ತೆ

Puttur_Advt_NewsUnder_1
Puttur_Advt_NewsUnder_1

nettana

ಕಡಬ: ರೈಲು ಇಂಜಿನ್ ಚಾಲಕರೋರ್ವರ ಲಗೇಜ್ ಹಾಗೂ ವಾಕಿಟಾಕಿ ಕಳವುಗೊಂಡಿದ್ದು ತನಿಖೆ ವೇಳೆ ಲಗೇಜ್ ಪತ್ತೆಯಾಗಿ ಅದರೊಳಗಿದ್ದ ವಾಕಿಟಾಕಿ ನಾಪತ್ತೆಗೊಂಡ ಪ್ರಕರಣವೊಂದು ನೆಟ್ಟಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಜ.15ರಂದು ರಾತ್ರಿ ಬೆಂಗಳೂರಿನಿಂದ ಕಾರವಾರ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೈಸೂರಿನಿಂದ ಚಾಲಕರಾಗಿ ಬಂದ ಲೋಕೋ ಪೈಲೆಟ್(ಅತೀ ವೇಗದ ಚಾಲಕ)ಪ್ರಭಾಕರರವರು ಸುಬ್ರಹ್ಮಣ್ಯ ರೋಡ್‌ನ ನೆಟ್ಟಣ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ನೆಟ್ಟಣದಿಂದ ಈ ರೈಲನ್ನು ಇನ್ನೊಬ್ಬ ಚಾಲಕ ಚಲಾಯಿಸುತ್ತಾರೆ. ನೆಟ್ಟಣದಲ್ಲಿ ಇಳಿದ ಚಾಲಕ ತನ್ನ ಲಗೇಜ್ ಬಾಕ್ಸ್ ಅಲ್ಲೆ ಬಿಡುವುದು ಸಾಮಾನ್ಯ. ನಂತರ ಗುತ್ತಿಗೆದಾರರು ಅದನ್ನು ರಕ್ಷಿಸಿ ಮರುದಿನ ರೈಲು ಹಿಂತಿರುಗಿ ಬರುವ ವೇಳೆ ನೆಟ್ಟಣದಿಂದ ಮತ್ತೆ ಇಂಜಿನ್ ಚಾಲನೆ ಮಾಡುತ್ತಾರೆ. ಅದೇ ಸಮಯಕ್ಕೆ ಅವರ ಲಗೇಜ್ ಬಾಕ್ಸನ್ನು ಗುತ್ತಿಗೆದಾರರು ತಂದೊಪ್ಪಿಸಬೇಕು. ಜ.16ರ ಬೆಳಗಿನ ಜಾವ ಚಾಲಕ ಪ್ರಭಾಕರ್‌ರವರು ನೆಟ್ಟಣ ಗೆಸ್ಟ್ ರೂಂಗೆ ಹೋದ ವೇಳೆ ವಾಕಿಟಾಕಿ ಲಗೇಜ್‌ನಲ್ಲೇ ಮರೆತು ಬಿಟ್ಟಿದ್ದರು. ಮರುದಿನ ಬಂದು ನೋಡುವ ವೇಳೆಗೆ ಲಗೇಜ್ ಬಾಕ್ಸ್ ಇರಲಿಲ್ಲ. ಈ ಬಗ್ಗೆ ಅವರು ಸಕಲೇಶಪುರ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ರೈಲ್ವೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಿ.ಕೆ ಪ್ರಕಾಶ್‌ರವರು ಜ.18ರಂದು ಬೆಳಿಗ್ಗೆ ತನ್ನ ಪೊಲೀಸ್ ಸಿಬ್ಬಂದಿಗಳೊಂದಿಗೆ ನೆಟ್ಟಣ ರೈಲ್ವೆ ಸ್ಟೇಷನ್‌ನಲ್ಲಿ ತನಿಖೆ ಕೈಗೊಂಡಿದ್ದು ರೈಲ್ವೆ ಇಂಜಿನ್ ನಿಲ್ಲುವ ಸ್ಥಳದ ಬಳಿಗೆ ಹೋಗಿ ಅಲ್ಲಿಂದ ಪರಿಸರದಲ್ಲಿ ಹುಡುಕಾಡಿದಾಗ ಅಯ್ಯಪ್ಪ ಮಂದಿರದ ಬಳಿ ಮೋರಿ ಅಡಿಯಲ್ಲಿ ಲಗೇಜ್ ಬಾಕ್ಸ್ ಪತ್ತೆಯಾಗಿದೆ. ಆದರೆ ಅದರಲ್ಲಿದ್ದ ವಾಕಿಟಾಕಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ನೆಟ್ಟಣ ರೈಲು ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ರೈಲ್ವೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.