ಬೆಳ್ಳಾರೆ: ವಲಿಯುಲ್ಲಾಹಿ ಮಖಾಂ ಉರೂಸ್ ಸಮಾರೋಪ

Puttur_Advt_NewsUnder_1
Puttur_Advt_NewsUnder_1

bellare 1

bellate 1ಸತ್ಕರ್ಮಗಳ ಮೂಲಕ ಬದುಕು ಸಾರ್ಥಕಗೊಳಿಸಿಶಿಹಾಬ್ ತಂಙಳ್

ಪುತ್ತೂರು: ಜೀವನದಲ್ಲಿ ಸತ್ಕರ್ಮಗಳನ್ನೇ ಮಾಡುವ ಮೂಲಕ ಸಾರ್ಥಕ ಬದುಕು ಸಾಗಿಸಿದರೆ ಮಾತ್ರ ಇಹಪರ ಮೋಕ್ಷ ಸಾಧ್ಯವಿದೆ ಎಂದು ಶೈಖುನಾ ಅಸ್ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಹೇಳಿದರು. ಅವರು ಜ.17ರಂದು ಬೆಳ್ಳಾರೆ ವಲಿಯುಲ್ಲಾಹಿ (ಖ.ಸಿ)ರವರ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದುವಾಶೀರ್ವಚನ ನೀಡಿ ಮಾತನಾಡಿದರು.

ಇಸ್ಲಾಂ ಧರ್ಮ ಆಜ್ಞಾಪಿಸಿದ ಕಾರ್ಯವನ್ನು ಮೈಗೂಡಿಸಿಕೊಳ್ಳಬೇಕು, ಇಸ್ಲಾಂ ವಿರೋಧಿಸಿದ್ದನ್ನು ನಾವು ತ್ಯಜಿಸಬೇಕು, ಅನಾಚಾರ, ಅಧರ್ಮಗಳಿಂದ ದೂರವಿರಬೇಕು ಎಂದ ಅವರು ಅಹ್ಲುಸ್ಸುನ್ನತ್ ವಲ್ ಜಮಾಅತಿನ ನೈಜ ಪ್ರಜೆಗಳಾಗಿ ಜೀವನ ಸಾಗಿಸಬೇಕೆಂದು ಹೇಳಿದರು.

ಇಸ್ಲಾಂ ಕಲಿಸಿದ ರೀತಿಯ ಜೀವನ ಸಾಗಿಸಿ: ಸಿದ್ದಿಕ್ ಅಝ್‌ಹರಿ

ಪ್ರಭಾಷಣಗಾರ ಅಬೂಬಕ್ಕರ್ ಸಿದ್ದಿಕ್ ಅಝ್‌ಹರಿ ಪಯ್ಯನ್ನೂರು ಮಾತನಾಡಿ, ನಮಗೆ ಇಸ್ಲಾಂ ಧರ್ಮ ಏನನ್ನು ಕಲಿಸುತ್ತದೆಯೋ ಅದೇ ರೀತಿಯ ಜೀವನವನ್ನು ಸಾಗಿಸಿದರೆ ಯಶಸ್ಸು ಲಭಿಸಲು ಸಾಧ್ಯ ಎಂದು ಹೇಳಿದರು. ಹುಟ್ಟು ಸಾವುಗಳ ಮಧ್ಯೆ ಇರುವ ಸಣ್ಣ ಅವಧಿಯ ಜೀವನವನ್ನು ಸತ್ಕರ್ಮಗಳಲ್ಲಿ ತೊಡಗಿಕೊಳ್ಳುತ್ತಾ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗುವುದು ಅವಶ್ಯವಾಗಿದೆ ಎಂದು ಅವರು ಹೇಳಿದರು.

ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ಪಾರತ್ರಿಕ ಲೋಕದ ವಿಜಯ ಗಳಿಸಬೇಕಾದರೆ ಇಹಲೋಕದಲ್ಲಿ ತ್ಯಾಗಮಯ ಜೀವನ ಸಾಗಿಸಬೇಕಾಗಿದೆ ಎಂದರು. ಅಲ್ಲಾಹು ಹಾಗೂ ಪ್ರವಾದಿ ಪೈಗಂಬರ್(ಸ.ಅ) ತೋರಿಸಿಕೊಟ್ಟ ಹಾದಿಯಲ್ಲಿ ಜೀವನ ಸಾಗಿಸಿದರೆ ಸ್ವರ್ಗ ಪ್ರಾಪ್ತಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಸ್ಥಳೀಯ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ.ಎ ಖಾಸಿಂ ಮುಸ್ಲಿಯಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಎಂ ಮುಹಮ್ಮದ್ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ  ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ, ಬೆಳ್ಳಾರೆ ಮಸೀದಿಯ ಕಾರ್ಯದರ್ಶಿ ಯು.ಎಚ್ ಅಬೂಬಕ್ಕರ್, ಸ್ಥಳಿಯ ಸದರ್ ಮುಅಲ್ಲಿಂ ಫಝಲುರ್ರಹ್ಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಫೈಝಿ ಪೈವಳಿಕೆ, ಶಾಫಿ ಇರ್ಫಾನಿ ಫೈಝಿ ಸೂರಿಂಜೆ, ಕಳೆಂಜ ಖತೀಬ್ ಯಾಕೂಬ್ ದಾರಿಮಿ, ಅತ್ತಿಕರೆಮಜಲು ಖತೀಬ್ ಮಹಮ್ಮದ್ ಮದನಿ, ಸುಳ್ಯ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್, ಕೆ.ಎಂ ಹಮೀದ್ ಆಲ್ಫಾ, ಝಡ್‌ಜೆಎಂ ಬೆಳ್ಳಾರೆ ಇದರ ಆಡಳಿತಾಧಿಕಾರಿ ಕೆ.ಎಂ ರಶೀದ್ ಹಾಜಿ, ಇಬ್ರಾಹಿಂ, ಮಹಮ್ಮದ್ ಮುಸ್ಲಿಯಾರ್ ಬೆಳ್ಳಾರೆ, ಅಬ್ದುಲ್ ಖಾದಿರ್ ಫೈಝಿ ಐವರ್ನಾಡು, ಮುಹಿಯುದ್ದೀನ್ ಹಸನ್ ಅರ್ಶದಿ ಬೆಳ್ಳಾರೆ, ಸ್ಥಳಿಯ ಮಸೀದಿ ಸಹಕಾರ್ಯದರ್ಶಿ ಅಬ್ದುಲ್ಲ ಬಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಗೆ ಅನ್ನದಾನ ನಡೆಯಿತು.

ಆಕರ್ಷಕ ದಫ್ ಸ್ಪರ್ಧೆ: ಉರೂಸ್ ಪ್ರಯುಕ್ತ ದ.ಕ ಜಿಲ್ಲೆಯ ಖ್ಯಾತ ತಂಡಗಳಿಂದ ದಫ್ ಸ್ಪರ್ಧೆ ನಡೆಯಿತು. ಸ್ಥಳೀಯ ಖತೀಬ್ ತಾಜುದ್ದೀನ್ ರಹ್ಮಾನಿ ದುವಾ ಮಾಡುವ ಮೂಲಕ ದಫ್ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾ.ಪಂ ಸದಸ್ಯ ಆರಿಫ್ ಬೆಳ್ಳಾರೆ, ಅನ್ಸಾರಿಯಾ ದಫ್ ಕಮಿಟಿಯ ಕಾರ್ಯದರ್ಶಿ ಯು.ಪಿ ಬಶೀರ್, ಉರೂಸ್ ಸಮಿತಿ ಉಪಾಧ್ಯಕ್ಷ ಬಿ.ಎ ಬಶೀರ್ ಉಪಸ್ಥಿತರಿದ್ದರು. ಸಂಜೆ ಖತ್‌ಮುಲ್ ಖುರ್‌ಆನ್ ಮತ್ತು ತಹ್‌ಲೀಲ್ ಸಮರ್ಪಣೆ ನಡೆಯಿತು.

ಉಮರಾ ಸಮಾವೇಶ:

ಸಂಜೆ ನಡೆದ ಉಮರಾ ಸಮಾವೇಶದ ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಎಂ ಮಹಮ್ಮದ್ ಹಾಜಿ ವಹಿಸಿದ್ದರು. ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಎಂಪವರ್ ಪ್ರಾಪರ್ಟೀಸ್ ಇದರ ಎಲ್.ಕೆ ಲತೀಫ್ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಂ ಮುಸ್ತಫಾ ಮಾತನಾಡಿದರು. ವೇದಿಕೆಯಲ್ಲಿ ಸ್ಥಳಿಯ ಖತೀಬ್ ತಾಜುದ್ದೀನ್ ರಹ್ಮಾನಿ, ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಅಬ್ದುಲ್ ಕಲಾಮ ಸುಳ್ಯ, ಅಬ್ಬಾಸ್ ಹಾಜಿ ಕಟ್ಟೆಕಾರ‍್ಸ್, ರಶೀದ್ ಹಾಜಿ ಪರ್ಲಡ್ಕ, ಎಂ.ಆರ್ ರಹಿಮಾನ್, ಯು.ಎಂ ಅಬೂಬಕ್ಕರ್ ಹಮೀದ್ ಆಲ್ಫಾ, ಹಾಜಿ ಕೆ ಮಮ್ಮಾಲಿ, ಆಶಿರ್, ಕೆ.ಎಸ್ ಜಮಾಲ್, ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ, ಫವಾಝ್ ಕನಕಮಜಲು, ಎಂ.ಎ ರಫೀಕ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.