ನಗರಸಭೆ ಮುಖ್ಯ ರಸ್ತೆಯಲ್ಲಿ ಡಾಮರೀಕರಣ ಆರಂಭ

Puttur_Advt_NewsUnder_1
Puttur_Advt_NewsUnder_1

6ಪುತ್ತೂರು: ನಗರೋತ್ಥಾನದ ಅನುದಾನದಲ್ಲಿ ಪುತ್ತೂರು ನಗರಸಭೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಅರುಣಾ ಚಿತ್ರಮಂದಿರದ ತನಕದ ಪ್ರಥಮ ಹಂತದ ಡಾಮರೀಕರಣ ಜ.18ರಂದು ರಾತ್ರಿ ನಡೆಯಿತು. ಜ.17ರ ರಾತ್ರಿ ಡಾಮರೀಕರಣ ನಡೆಸುವುದೆಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದರು. ಆದರೆ ಡಾಮರು ಮಿಕ್ಸರ್ ಯಂತ್ರದ ತಂತ್ರಜ್ಞಾನ ದೋಷದಿಂದಾಗಿ ಡಾಮರೀಕರಣ ನಡೆಸಲಾಗಿಲ್ಲವಾಗಿತ್ತು.
ಡಾಮರೀಕರಣದಲ್ಲಿ ಕಳಪೆ-ಶಕ್ತಿ ಸಿನ್ಹ ಆರೋಪ
ಡಾಮರೀಕರಣ ಮಾಡುವಾಗ 2 ಇಂಚು ಎತ್ತರ ಬರಬೇಕು ಆದರೆ ಇಲ್ಲಿ 2 ಇಂಚಿಗಿಂತ ಕಡಿಮೆ ಡಾಮರೀಕರಣ ಮಾಡಿ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಶಕ್ತಿ ಸಿನ್ಹರವರು ಆರೋಪಿಸಿದ್ದಾರೆ. ಅವರು ಡಾಮರೀಕರಣ ಸ್ಥಳಕ್ಕೆ ಬಂದು ಕಾಮಗಾರಿ ನಡೆಸುವವರನ್ನು ತರಾಟೆಗೆತ್ತಿಕೊಂಡರು. ಈ ಸಂದರ್ಭದಲ್ಲಿ ಇಂಜಿನಿಯರ್ ತುಳಸಿಪ್ರಸಾದ್ ಮತ್ತು ಅದೇ ದಾರಿಯಲ್ಲಿ ಐಡಿಯಲ್ ಲ್ಯಾಬ್‌ಗೆ ತೆರಳುತ್ತಿದ್ದ ನಗರಸಭಾ ಸದಸ್ಯ ಸುಜೀಂದ್ರ ಪ್ರಭು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.