ಪುತ್ತೂರು ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಧೀಶರುಗಳಿಗೆ ಅಭಿನಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

puttur1putturಪುತ್ತೂರು: ಜಿಲ್ಲಾ ನ್ಯಾಯಾಧೀಶರುಗಳಾಗಿ ನೇಮಕಗೊಂಡ ಪರಮೇಶ್ವರ ಪ್ರಸನ್ನ ಹಾಗೂ ಚಾರ್ವಕ ನಿವಾಸಿ ಹರೀಶ್.ಎ ರವರಿಗೆ ಪುತ್ತೂರು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪುತ್ತೂರು ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ನ್ಯಾಯಾಧೀಶರುಗಳಿಗೆ ಶಾಲು ಹೊದಿಸಿ ಮೈಸೂರು ಪೇಟ ಧರಿಸಿ, ಮಾಲಾರ್ಪಣೆ ಮಾಡಿ ಅಭಿನಂದಿಸಲಾಯಿತು.

ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುತ್ತೂರಿನಿಂದ ಇಬ್ಬರು ಜಿಲ್ಲಾ ನ್ಯಾಯಾಧೀಶರಾಗಿ ಮೂಡಿಬಂದಿದ್ದು ಸಂತೋಷದ ವಿಚಾರವಾಗಿದ್ದು, ನ್ಯಾಯಾಧೀಶರಾಗಿ ನೇಮಕಗೊಂಡ ನೀವು ಭಯ ಬಿಟ್ಟು, ಮುಕ್ತ ಮನಸ್ಸಿನಿಂದ ಕೆಲಸ ನಿರ್ವಹಿಸುವಂತಾಗಬೇಕು. ಇದು  ಮುಂದಿನ ಯಶಸ್ಸಿಗೆ ಸಹಕಾರಿಯಾಗಲಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾದೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ, ಇನ್ನೋರ್ವ ನ್ಯಾಯಧೀಶ ಸಿ.ಕೆ ಬಸವರಾಜು ಮಾತನಾಡಿ ನ್ಯಾಯಧೀಶರಾಗಿ ನೇಮಕಗೊಂಡ ಪರಮೇಶ್ವರ ಹಾಗೂ ಹರೀಶ್‌ರವರಿಗೆ ಶುಭಕೋರಿ ಕರ್ತವ್ಯ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದಲ್ಲಿ ಯಶಸ್ಸು ಸಾಧ್ಯ ಎಂದರು.

ಇನ್ನೋರ್ವ ನ್ಯಾಯಧೀಶ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗರಾಜುರವರು ಮಾತನಾಡಿ ಶುಭಕೋರಿದರು. ಪ್ರಧಾನ  ಸಿವಿಲ್ ನ್ಯಾಯಾಧೀಶರಾದ ಇಬ್ರಾಹಿಂ ಮುಜಾವರ ಮಾತನಾಡಿ ಪ್ರಜಾಪ್ರಭುತ್ವದ ಮುಖ್ಯ ಅಂಗವಾಗಿರುವ ನ್ಯಾಯಾಂಗ ವ್ಯವಸ್ಥೆ ಅಲುಗಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಮುಂದೆ ಬರಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ರೈ ವಹಿಸಿದ್ದರು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಪುತ್ತೂರು ವಕೀಲರ ಸಂಘದ ಸದಸ್ಯರೂ ಆಗಿರುವ ನ್ಯಾಯಾಧೀಶರಾಗಿ ನೇಮಕಗೊಂಡ ಪರಮೇಶ್ವರ ಪ್ರಸನ್ನರವರು, ನಿರಂತರ ಸಾಧನೆ, ಎಲ್ಲರ ಸಹಕಾರ, ಪುತ್ತೂರಿನ ಎಲ್ಲಾ ನ್ಯಾಯಾಧೀಶರ, ವಕೀಲ ಮಿತ್ರರ ಧೈರ್ಯ ಮತ್ತು ಪ್ರೋತ್ಸಾಹ, ಸಹಕಾರ, ದೇವರ ಅನುಗ್ರಹ ಇವುಗಳೆಲ್ಲವೂ ನನ್ನನ್ನು ಈ ಹಂತಕ್ಕೆ ಬಂದು ನಿಲ್ಲುವಂತೆ ಮಾಡಿದೆ ಎಂದರು.

ಇನ್ನೋರ್ವ ನ್ಯಾಯಾಧೀಶರಾಗಿ ನೇಮಕಗೊಂಡ ಹರೀಶ್ ಎ.ರವರು ಮಾತನಾಡಿ ನನ್ನ ನೇಮಕ ಪುತ್ತೂರಿನ ಜನತೆಗೆ ಹೆಮ್ಮೆಯ ವಿಚಾರವಾಗಿದ್ದು, ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ ಎಂದರು.

ಅಭಿನಂದನಾ ಭಾಷಣ ಮಾಡಿದ ಹಿರಿಯ ನ್ಯಾಯವಾದಿ ಎನ್.ಸುಬ್ರಹ್ಮಣ್ಯಂ ಮಾತನಾಡಿ ಒಳ್ಳೆಯ ಮನಸ್ಸು ಸೇರಿದಲ್ಲಿ ಉತ್ತಮ ನ್ಯಾಯಾಂಗ ವ್ಯವಸ್ಥೆ ಉಂಟಾಗುತ್ತದೆ. ದೇಶದ ಹಿತವನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಹೃದಯವಂತರಾಗಿ ಇನ್ನೊಬ್ಬರ ಹೃದಯವನ್ನು ಅರಿತುಕೊಳ್ಳಲು ಸಾಧ್ಯವಿದೆ ಎಂದರು.  ಸತ್ಯ ಶೋಧನೆ ಬಹಳಷ್ಟು ಕಷ್ಟಕರವಾಗಿದ್ದು ಸತ್ಯ ಶೋಧನೆಗಾಗಿ  ತಪಸ್ವಿಗಳಾಗಬೇಕೆಂದರು. ಇದಕ್ಕೆ ತರಬೇತಿ ಕೂಡ ಅಗತ್ಯ ಎಂದರು.

ನ್ಯಾಯವಾದಿಗಳಾದ ರಾಮ್‌ಮೋಹನ್ ರಾವ್, ಎಂ.ಗೋಪಾಲ ಕೃಷ್ಣ ಭಟ್, ದಿವಾಕರ ನಿಡ್ವಣ್ಣಾಯ, ಬೆಟ್ಟ ಈಶ್ವರ ಭಟ್, ಶೀನಪ್ಪ ಗೌಡ ಬೈತಡ್ಕ, ಭಾಸ್ಕರ ಗೌಡ ಕೋಡಿಂಬಾಳ,ನಾಗೇಶ್ ಶರ್ಮಾ, ಮಹೇಶ್ ಕಜೆ, ಗೌರಿಶಂಕರ್ ಶಾನ್‌ಭೋಗ್, ಜಿ.ಜಗನ್ನಾಥ ರೈ, ಉದಯ ಕುಮಾರ್ ಶೆಟ್ಟಿ, ಸೂರ್ಯನಾರಾಯಣ, ಗಿರೀಶ್ ಮಲಿರವರು ನೂತನ ನ್ಯಾಯಾಧೀಶರಾಗಿ ನೇಮಕಗೊಂಡ ಹರೀಶ್ ಹಾಗೂ ಪರಮೇಶ್ವರ ಪ್ರಸನ್ನರವರಿಗೆ ಅಭಿನಂದನೆ ಸಲ್ಲಿಸಿದರು. ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಮಹೇಶ್ ಸವಣೂರು ಮತ್ತು ಕುಮಾರ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಜಯಾನಂದ.ಕೆ ರವರು ನೂತನ ನ್ಯಾಯಾಧೀಶರಾಗಿ ನೇಮಕಗೊಂಡ ಪರಮೇಶ್ವರ ಪ್ರಸನ್ನ ಹಾಗೂ ಹರೀಶ್‌ರವರನ್ನು ಸಭೆಗೆ ಪರಿಚಿಸಿದರು. ಖಜಾಂಜಿ ರಮಾನಂದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸುಧೀರ್ ತೋಳ್ಪಾಡಿ ಪ್ರಾರ್ಥನೆ ಹಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.