ಪಾಣಾಜೆ: ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1

panaje

ನಿಡ್ಪಳ್ಳಿ: ಪಾಣಾಜೆ ಗ್ರಾಮ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2015-16ನೇ ಸಾಲಿನ ದ್ವಿತೀಯ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜ.18 ರಂದು ನಡೆಯಿತು.

ಸಾಮಾಜಿಕ ಲೆಕ್ಕ ಪರಿಶೋಧಕ ದಿನೇಶ ಸಾಲಿಯಾನ್‌ರವರು ಲೆಕ್ಕ ಪರಿಶೋಧನೆಯ ವಿವರ ನೀಡಿ ಈ ಸಾಲಿನಲ್ಲಿ ಒಟ್ಟು 3 ಕಾಮಗಾರಿ ನಡೆದಿದ್ದು 19788 ರೂ ಖರ್ಚಾಗಿದೆ. ಒಟ್ಟು 146 ನೊಂದಾಯಿತ ಕುಟುಂಬಗಳಿದೆ ಎಂದು ತಿಳಿಸಿದರು.

ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದ ಎನ್‌ಆರ್‌ಇಜಿಯ ಸಹಾಯಕ ನಿರ್ದೇಶಕ ರಾಜಣ್ಣ ಮಾತನಾಡಿ, ಇಲ್ಲಿಯ ಕಾಮಗಾರಿಯನ್ನು ನೋಡಿದರೆ ಇಡೀ ರಾಜ್ಯದಲ್ಲಿಯೇ ಅತೀ ಕಡಿಮೆ ಕಾಮಗಾರಿ ನಡೆದ ಪಂಚಾಯತ್ ಆಗಿದೆ. ಇಲ್ಲಿಯ ಸಾರ್ವಜನಿಕರು ಹಾಗೂ ಪಂಚಾಯತ್ ಸದಸ್ಯರು ಮುತುವರ್ಜಿ ವಹಿಸಿ ಇದರ ಪ್ರಯೋಜನ ಪಡೆಯಲು ಪ್ರಯತ್ನಿಸಬೇಕು. ಸರಕಾರದ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕಿ ಧನಲಕ್ಷ್ಮೀ, ಸಹಾಯಕಿ ಜ್ಯೋತಿ, ಪಂಚಾಯತ್ ಸದಸ್ಯ ಕೇಶವ ಮುರಳಿ ಗಿಳಿಯಾಲು, ದ.ಕ.ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಸ್ವಾಗತಿಸಿ ವಂದಿಸಿದರು. ಲೆಕ್ಕ ಸಹಾಯಕ ಧನುಷ್, ಸಿಬ್ಬಂದಿಗಳಾದ ವಿಶ್ವನಾಥ, ರೂಪಶ್ರೀ, ಅರುಣ ಕುಮಾರ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.