ಸವಣೂರು ಅನ್ಸಾರುಲ್ ಯೂತ್ ಫೆಡರೇಶನ್ ಅಧ್ಯಕ್ಷರಾಗಿ ಮುಹಮ್ಮದ್, ಕಾರ್ಯದರ್ಶಿ ಅಶ್ರಫ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1

9

ಪುತ್ತೂರು: ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ಶಾಂತಿನಗರ ಸವಣೂರು ಇದರ ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಡುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಉರ್ಸಾಗ್, ಖಜಾಂಜಿಯಾಗಿ ಅಬ್ದುಲ್ ಕರೀಂ ಸವಣೂರು(ಮೌಲ)ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಶ್ರಫ್ ಶಾಂತಿನಗರ, ಜೊತೆ ಕಾರ್‍ಯದರ್ಶಿಯಾಗಿ ಎಂ.ಬಿ.ಮೊದಿನ್ ಶಾಂತಿನಗರ, ಸಂಘಟನಾ ಕಾರ್‍ಯದರ್ಶಿಯಾಗಿ ಸಿ.ಎ.ನಝೀರ್‌ರವರನ್ನು ಆಯ್ಕೆ ಮಾಡಲಾಯಿತು. ಕಾರ್‍ಯಕಾರಿ ಸಮಿತಿಗೆ ೧೨ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಗೌರವ ಸದಸ್ಯರಾಗಿ ಅಬ್ದುಲ್ ರಫೀಕ್ ಕೆನರಾ ಮತ್ತು ಬಿ.ಎಂ.ಮುಹಮ್ಮದ್‌ರವರನ್ನು ನೇಮಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ, ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ಗೌರವಾಧ್ಯಕ್ಷ ಅಬ್ದುಲ್ ಸಮಾದ್ ಸೋಂಪಾಡಿರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆ ಹಾಗೂ ಮೌಲೂದ್ ಪಾರಾಯಣ ಕಾರ್‍ಯಕ್ರಮದಲ್ಲಿ ಈ ಆಯ್ಕೆ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಪಣೆಮಜಲು ಜುಮ್ಮಾಮಸೀದಿಯ ಖತೀಬರಾದ ಅಬ್ಬಾಸ್ ಮದನಿ ಕಾರ್‍ಯಕ್ರಮವನ್ನು ಉದ್ಘಾಟಿಸಿದರು. ಚಾಪಳ್ಳ ಹಿದಾಯತುಲ್ ಇಸ್ಲಾಂ ಮದ್ರಸದ ಮುವಲ್ಲಿಂ ಜಮಾಲುದ್ದೀನ್ ದಾರಿಮಿ ದುವಾ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಚಾಪಳ್ಳ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಹಾಜಿ ಕಣಿಮಜಲು, ಅಲ್ನೂರು ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರಾ ಚಾಪಳ್ಳ, ಜಮಾತ್ ಕಮಿಟಿಯ ಸದಸ್ಯರಾದ ಉಮ್ಮರ್ ಹಾಜಿ ಕೆನರಾ, ಖಾಸಿಂ ಹಾಜಿ, ಗಫೂರ್ ಹಾಜಿ ಸೋಂಪಾಡಿ, ಸವಣೂರು ವರ್ತಕರ ಸಂಘದ ಅಧ್ಯಕ್ಷರಾದ ರಫೀಕ್ ಅರ್ತಿಕೆರೆ, ಸವಣೂರು ಗ್ರಾ.ಪಂ. ಸದಸ್ಯರಾದ ಎಂ.ಎಂ. ರಫೀಕ್ ಹಾಗೂ ಅಧ್ಯಕ್ಷರಾದ ಎಂ.ಎಂ.ಮಹಮ್ಮದ್ ಆಗಮಿಸಿದ್ದರು. ಸಿ.ಎ.ನಜೀರ್ ಸ್ವಾಗತಿಸಿ, ಕಾರ್ಯದರ್ಶಿ ಅಬ್ದುಲ್ ಕರೀಂ ಮೌಲ ಲೆಕ್ಕ ಪತ್ರ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.