ಮರೀಲು-ಕರಿಯಾಲ್ ಡಾಮರೀಕರಣ ರಸ್ತೆ ಉದ್ಘಾಟನೆ

10ಪುತ್ತೂರು: ಕೆಮ್ಮಿಂಜೆ ಗ್ರಾಮದ 23ನೇ ವಾರ್ಡಿನ ಮರೀಲ್-ಕರಿಯಾಲ ಎಂಬಲ್ಲಿ ನಗರಸಭೆಯ ಹತ್ತು ಲಕ್ಷ ರೂ, ಅನುದಾನದಿಂದ 160 ಮೀಟರ್ ಉದ್ದ ಡಾಮರೀಕರಣಗೊಂಡ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ಜ.17ರಂದು ನಡೆಯಿತು.
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ.ಫಾ. ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡರವರು ಡಾಮಾರೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ಜಾತಿ-ಮತ ಬೇಧವಿಲ್ಲದೆ ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ನೂತನ ರಸ್ತೆ ಡಾಮಾರೀಕರಣಗೊಂಡಿದ್ದು ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು ಇವುಗಳು ಸಾಕಾರಗೊಂಡಲ್ಲಿ ಸ್ಥಳೀಯ ನಾಗರಿಕರು ಶಾಂತಿ, ಸೌಹಾರ್ದತೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದ ಅವರು ಕಂಪೌಂಡಿನ ಹೊರಗಡೆ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡಿದಾಗ ಸ್ವರ್ಗಕಾರ್ಯ ಇಲ್ಲಿಯೇ ಲಭಿಸುತ್ತದೆ ಎಂದರು.
ನಗರಸಭೆ ಸದಸ್ಯ ಎಚ್.ಮಹಮ್ಮದ್ ಆಲಿರವರು ಮಾತನಾಡಿ, ಸ್ಥಳೀಯ ನಾಗರಿಕರು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡದೆ, ಒತ್ತಡ ತರದೆ ಇದ್ದಾಗ ಯಾವ ಅಭಿವೃದ್ಧಿ ಸಾಧ್ಯವಾಗುತ್ತದೆ. ಯಾವುದೇ ಒಂದು ಕಾಮಗಾರಿ ನಡೆದಾಗ ಸ್ಥಳೀಯರು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಕಳೆದ ಹತ್ತು ವರುಷಗಳ ಸ್ಥಳೀಯ ಜನರ ಬೇಡಿಕೆಯಾದ ಈ ರಸ್ತೆ ಇದೀಗ ಡಾಮಾರೀಕರಣದ ಮೂಲಕ ಅಭಿವೃದ್ಧಿಯನ್ನು ಕಂಡಿದೆ ಎಂದರು. ಮುಂದಿನ ದಿನಗಳಲ್ಲಿ ಕೆಮ್ಮಿಂಜೆ ಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಸಮನಾಗಿ ಹಂಚಿಕೆ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ ಸ್ಥಳೀಯ ನಗರಸಭಾ ಸದಸ್ಯ ಮುಖೇಶ್ ಕೆಮ್ಮಿಂಜೆರವರು ಮಾತನಾಡಿ, ಮರೀಲ್-ಕರಿಯಾಲ್ ರಸ್ತೆಯ ಡಾಮಾರೀಕರಣವು ಜನಸೇವಾ ಸಮಿತಿಯ ಮುಖಾಂತರ ನಡೆಯುತ್ತಿದೆ ಎಂದ ಅವರು ಪ್ರತಿಯೊಬ್ಬರೂ ವಾರ್ಡು ಅಭಿವೃದ್ಧಿಗೆ ಸ್ವಲ್ಪವಾದರೂ ಕೆಲಸ ಮಾಡಿದಾಗ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದರು.
ನಗರಸಭಾ ಸದಸ್ಯ ಬಾಲಚಂದ್ರರವರು ಮಾತನಾಡಿ, ಪ್ರತಿಯೊಂದು ವಾರ್ಡು ಅಭಿವೃದ್ಧಿಗೋಸ್ಕರ ಜನರ ಬೇಡಿಕೆಯಾಗಲಿ, ಸ್ಪಂದನೆಯಾಗಲಿ ಇರುವುದಿಲ್ಲ. ವಾರ್ಡು ಅಭಿವೃದ್ಧಿಗೆ ಸ್ಥಳೀಯ ಜನರು ಒತ್ತಡ ಹಾಕಬೇಕು ಎಂದರು.
ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ|ದೀಪಕ್ ರೈರವರು ಮಾತನಾಡಿ, ಇನ್ನುಳಿದ ರಸ್ತೆಗೂ ಆದಷ್ಟು ಬೇಗ ಡಾಮಾರೀಕರಣ ನಡೆಯಲಿ ಎಂದು ನಗರಸಭಾ ಸದಸ್ಯರಲ್ಲಿ ಮನವಿ ಮಾಡಿದರು.
ಕೃಪಾಲಯ ಚರ್ಚ್‌ನ ಧರ್ಮಗುರು ರಾಜೇಶ್, ದಿ ಪುತ್ತೂರು ಕ್ಲಬ್ ಕಾರ್ಯದರ್ಶಿ ಓಸ್ಕರ್ ಆನಂದ್, ಸಹಕಾರ್ಯದರ್ಶಿ ದೀಪಕ್ ಕೆ.ಪಿ, ಮರೀಲು ಚರ್ಚ್‌ನ ಪಾಲನಾ ಸಮಿತಿ ಉಪಾಧ್ಯಕ್ಷ ಫ್ರೊ.ಎಡ್ವಿನ್ ಡಿ’ಸೋಜಾ, ಕಾರ್ಯದರ್ಶಿ ಮೌರಿಸ್ ಕುಟಿನ್ಹಾ, ಡಿ’ಅಲ್ಮೇಡ ಫರ್ನಿಚರ್‍ಸ್‌ನ ಮ್ಯಾಕ್ಸಿಂ ಡಿ’ಅಲ್ಮೇಡ, ಡಿಸಿಆರ್ ಉದ್ಯೋಗಿ ಅರುಲ್‌ಮಣಿ, ಪ್ರಭಾಕರ್ ಎ.ಎಮ್ , ಮರೀಲು ಐಸಿವೈಎಂ ಅಧ್ಯಕ್ಷ ವಿಜಯ್ ಮೊಂತೆರೊ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು. ಜೀವನ್ ಡಿ’ಅಲ್ಮೇಡ ಸ್ವಾಗತಿಸಿ, ರೆನಿಟಾ ವಂದಿಸಿದರು. ಜಾನೆಟ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.