ನೆಲ್ಯಾಡಿ ಗ್ರಾ.ಪಂ.: ಎನ್‌ಆರ್‌ಇಜಿ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

 nelyadi

ಪುತ್ತೂರು: ನೆಲ್ಯಾಡಿ ಗ್ರಾ.ಪಂ.ನ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ 2015-16 ನೇ ಸಾಲಿನ ದ್ವಿತೀಯ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಜ.12 ರಂದು ನೆಲ್ಯಾಡಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ನಹೀಮ ಹುಸೇನ್ ನೋಡೆಲ್ ಅಧಿಕಾರಿಯಾಗಿದ್ದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಉದ್ದೇಶ, ಮಹತ್ವ ಹಾಗೂ ಸಾಮಾಜಿಕ ಪರಿಶೋಧನೆಯ ಬಗ್ಗೆ ತಾಲೂಕು ಸಂಯೋಜಕಿ ಧನಲಕ್ಷ್ಮಿ ಮಾಹಿತಿ ನೀಡಿದರು.  ಯೋಜನೆಯಡಿ ಕಾರ್ಮಿಕರ ಹಕ್ಕುಗಳು, ಯೋಜನೆಯ ಬದಲಾದ ಮಾರ್ಗಸೂಚಿಗಳು ಹಾಗೂ ಯೋಜನೆಯಡಿ ನಿರ್ವಹಿಸಬಹುದಾದ ಸಮುದಾಯ ಹಾಗೂ ವ್ಯಯಕ್ತಿಕ ಕಾಮಗಾರಿಯ ಬಗ್ಗೆಯೂ ಅವರು ಮಾಹಿತಿ ನೀಡಿದರು. 2ನೇ ಹಂತದಲ್ಲಿ ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ 17  ಕಾಮಗಾರಿಗಳು ನಡೆದಿವೆ. ಇದಕ್ಕೆ 131376ರೂ. ಕೂಲಿ ಪಾವತಿಯಾಗಿದೆ. 2014-15ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಅನುಷ್ಠಾನಗೊಂಡ 7 ಕಾಮಗಾರಿಕೆ ಈ ವರದಿ ಸಾಲಿನಲ್ಲಿ 30178 ರೂ. ಪಾವತಿ ಮಾಡಲಾಗಿದೆ ಎಂದು ಧನಲಕ್ಷ್ಮಿ ತಿಳಿಸಿದರು.

ಹಿಂದಿನ ಗ್ರಾಮ ಸಭೆಯ ಯೋಜನೆಯಲ್ಲಿ ಭತ್ತ, ಕೃಷಿ, ರಬ್ಬರ್ ಕೃಷಿ, ಕೌಂಪಾಡ್ ರಚನೆಗೆ ಅವಕಾಶ ನೀಡಬೇಕೆಂದು ಗ್ರಾಮಸ್ಥರು ಬೇಡಿಕೆ ನೀಡಿದರು. . ಬ್ಯಾಂಕ್ ಖಾತೆ ಸಮಸ್ಯೆಯಿಂದ ಕೆಲವು ಕೂಲಿಕಾರರಿಗೆ ಪಾವತಿಯಾಗಬೇಕಿದ್ದ 2 ಕೂಲಿಕಾರರಿಗೆ ಕೂಲಿ ಪಾವತಿಯಾಗಿರುವುದಿಲ್ಲ ಈ ಬಗ್ಗೆ ತಾಂತ್ರಿಕ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರಕೊಳ್ಳಲು ನಿರ್ಣಯಿಸಲಾಯಿತು. ನೋಡೆಲ್ ಅಧಿಕಾರಿ ನಹೀಮ್ ಹುಸೇನ್ ಮಾತನಾಡಿ “ಮಾರ್ಗಸೂಚಿಗಳನ್ನು ಪಾಲಿಸಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮಸ್ಥರು ಯೋಜನೆಯಡಿ ಹೆಚ್ಚಿನ ಪ್ರಯೋಜನ ಪಡೆಯುವಂತೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮಾತನಾಡಿ, ಯೋಜನೆಯ ಹೆಚ್ಚಿನ ಪ್ರಗತಿ ಸಾಧಿಸಲು ಗ್ರಾಮಸ್ಥರಲ್ಲಿ ಸಹಕಾರ ಕೋರಿದರು. ಗ್ರಾಮ ಪಂಚಾಯತ್ ಪಿ.ಡಿ.ಒ ದೇವರಾಜ್ ಸ್ವಾಗತಿಸಿ, ಸದಸ್ಯ ಗಂಗಾಧರ ಶೆಟ್ಟಿ ವಂದಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಾನಕಿ, ಸುಪ್ರಿಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.