ಜ.21 ರಿಂದ 25ರ ತನಕ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಧರ್ಮನೇಮೋತ್ಸವ

20160119_105922

ಪುತ್ತೂರು: ಮಂಗಳೂರು ಸುಳ್ಯದ ತೆಂಕಿಲ ಬೈಪಾಸ್ ರಸ್ತೆಯ ಬಳಿಯ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಜ.21 ರಿಂದ 25ರ ತನಕ ಧರ್ಮನೇಮೋತ್ಸವ ಜರುಗಲಿದೆ ಎಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್‌ನ ಸದಸ್ಯ ಕಂಪ ಸುದರ್ಶನ್ ನೈಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಕೊಟ್ಟಿಬೆಟ್ಟು ಎಂಬಲ್ಲಿನ ಏಳ್ನಾಡುಗುತ್ತು ತರವಾಡು ಮನೆ ಪೂರ್ವಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಕುಟುಂಬಕ್ಕೂ ನಿಕಟ ಸಂಬಂಧವಿದೆ. ದೇವಳದ ಆಗು ಹೋಗಗಳಲ್ಲಿ ಈ ಮನೆತನದವರು ಪ್ರಧಾನ ಪಾತ್ರ ವಹಿಸಿಕೊಂಡು ಬಂದಿದ್ದರು. ಈ ನಿಟ್ಟಿನಲ್ಲಿ ಈ ಮನೆಯಲ್ಲಿ ಹಲವಾರು ವರ್ಷಗಳಿಂದ ನೇಮನಡಾವಳಿಗಳು ನಡೆಯುತ್ತಿದ್ದು ಕಾಲ ಕ್ರಮೇಣ ಉತ್ಸವ ನಿಂತು ಹೋಗಿರುವುದನ್ನು ಮತ್ತೆ ಪುನರಾಂಭಿಸಲು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡಂತೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್‌ನ ಕೆ.ನರಸಿಂಗ ನೈಕ್‌ರವರು ದಾನ ರೂಪದಲ್ಲಿ ನೀಡಿದ 26 ಸೆಂಟ್ಸ್ ಜಾಗದಲ್ಲಿ ನೂತನ ಸುತ್ತುಪೌಳಿಯ ಸತ್ಯಚಾವಡಿಯನ್ನು ಒಳಗೊಂಡ ತರವಾಡು ಮನೆಯನ್ನು ನಿರ್ಮಾಣ ಮಾಡಿ 2015ರ ಎಪ್ರಿಲ್ 1ರಂದು ಪ್ರತಿಷ್ಠಾಪನೆ ಕಾರ‍್ಯಕ್ರಮ ನಡೆಸಲಾಗಿದೆ. ಇದೀಗ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಧರ್ಮನೇಮೋತ್ಸವ ಕಾರ‍್ಯಕ್ರಮವು ಜ.21 ರಿಂದ 25ರ ತನಕ ನಡೆಯಲಿದೆ ಎಂದು ಅವರು ಹೇಳಿದರು. ಜ.21 ರಂದು ರಾತ್ರಿ ಕಲ್ಲುರ್ಟಿ, ಕುಪ್ಪೆಪಂಜುರ್ಲಿ ಮತ್ತು ಗುಳಿಗ ನೇಮ, ಜ.22 ರಂದು ಪಿಲಿಚಾಮುಂಡಿ ಮತ್ತು ವರ್ಣರ ಪಂಜುರ್ಲಿ ನೇಮ, ಜ.23ರಂದು ಧರ್ಮದೈವ ಜೂಮಾದಿ -ಬಂಟ ದೈವದ ನೇಮ, ಜ.24ರಂದು ಸುದರ್ಶನ ಹೋಮ, ಬಾಧೋಚ್ಛಾಟನೆ ನಡೆಯಲಿದೆ. ಜ.25ರಂದು ತಿಲಹೋಮ, ಹವಮಾನ ಹೋಮ ಕಾರ‍್ಯಕ್ರಮ ಜರುಗಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೊಟ್ಟಿಬೆಟ್ಟು ಫ್ಯಾಮಿಲಿ ಟ್ರಸ್ಟ್‌ನ ಸದಸ್ಯರಾದ ಉದಯ ಕುಮಾರ್, ಸುದೇಶ್, ಪಿ.ಜಯರಾಮ ನೈಕ್, ರಾಜೀವ ನೈಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.