ಅಗರ್ತಬೈಲು ಲಕ್ಷ್ಮೀ ವೆಂಕಟರಮಣ ದೇವರ ಮಠದ ಬ್ರಹ್ಮಕಲಶ, ಧಾರ್ಮಿಕ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳಿಯೂರುಕಟ್ಟೆ ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಜ.19ರಂದು ಬೆಳಿಗ್ಗೆ ಅಷ್ಟ ಮಹಾಮಂತ್ರ ಹವನ, ಶಾಂತಿ ಹವನ, ಪ್ರಾಯಶ್ಚಿತ ಹವನ ಹಾಗೂ ನಾಗ ಸನ್ನಿಧಿಯಲ್ಲಿ ತಂಬಿಲ ಸೇವೆ, ಅಭಿಷೇಕ, ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ಜರಗಿತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ಧಾರ್ಮಿಕ ಸಭೆಯ ಬಳಿಕ ಅಜಲಾಡಿ ಬೀಡು ಪ್ರವೀಣಚಂದ್ರ ಆಳ್ವರವರ ಪ್ರಾಯೋಜಕತ್ವದಲ್ಲಿ ಅಕ್ಷರಾ ಶಿವಶಕ್ತಿ ಮ್ಯೂಸಿಕಲ್ ಪ್ಲೇಯರ್‍ಸ್ ಪುತ್ತೂರು ಇದರ ಕೃಷ್ಣಾ ಶ್ರೀನಿವಾಸ್ ಪುತ್ತೂರು ಮತ್ತು ಬಳಗದವರಿಂದ ‘ಭಕ್ತಿ ಗಾನಸುಧೆ’ ಹಾಗೂ ಸ್ನೇಹ ಕಲಾವಿದೆರ್ ಪುಣಚ ಅಭಿನಯಿಸಿದ ಯಕ್ಷಾ ಕಲಾ ತಂಡವರಿಂದ ಪೌರಾಣಿಕ ಯಕ್ಷಗಾನ ‘ಸುದರ್ಶನ ವಿಜಯ’ ನಡೆಯಿತು.

ಸಾಲಿಗ್ರಾಮ ಸರ ಸಮರ್ಪಣೆ: ಮುಂಬೈ ಬಂಟರ ಸಂಘದ ಅಧ್ಯಕ್ಷ ಹಾಗೂ ಮುಂಬೈ ವಿಷ್ಣು ದೇವಸ್ಥಾನದ ಮೊಕ್ತೇಶ್ವರ, ಉದ್ಯಮಿ ಬೆಳಿಯೂರು ಬೀಡು ಜಗನ್ನಾಥ ರೈಯವರು ಪ್ರಧಾನ ದೇವರಿಗೆ ರೂಪಾಯಿ ಒಂದು ಲಕ್ಷ ಅಧಿಕ ಮೌಲ್ಯದ ಸಾಲಿಗ್ರಾಮ ಸರಮಾಲೆ ಹಾಗೂ ರೂ. 1 ಲಕ್ಷ ದೇಣಿಗೆಯನ್ನು ಜ.19ರಂದು ಸಮರ್ಪಿಸಿದರು.

 

 

20160118225523

20160118225532

20160118234604

20160118234602

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.