ಫಿಲೋಮಿನಾದಲ್ಲಿ ‘ಆನ್‌ಲೈನ್ ಮಾರ್ಕೆಟಿಂಗ್’ ಕುರಿತು ಜಾಗೃತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

DSC_6408 copyಪುತ್ತೂರು: ಇತ್ತೀಚೆಗೆ ಆನ್‌ಲೈನ್ ಮಾರುಕಟ್ಟೆ ವ್ಯವಹಾರದಿಂದಾಗಿ ಜನರ ಜೀವನಶೈಲಿಯೇ ಬದಲಾಗಿದೆ. ಆನ್‌ಲೈನ್ ಮೂಲಕ ವಿಶ್ವದಾದ್ಯಂತ ಉತ್ಪಾದನೆಗೊಳ್ಳುವ ವಸ್ತುಗಳ ಮಾಹಿತಿಯನ್ನು ಪಡೆಯುವುದರೊಂದಿಗೆ ಹೊಸ ಹೊಸ ಮಾದರಿಯ ವಸ್ತುಗಳನ್ನು ಸಮಂಜಸವಾದ ಬೆಲೆಯಲ್ಲಿ ಖರೀದಿ, ಸಮಯದ ಉಳಿತಾಯ ಮತ್ತು ಗ್ರಾಹಕ ಹಿತರಕ್ಷಣೆಗೂ ಅನುಕೂಲವಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ. ಪ್ರಿಯಾಂಕ ಆಡ್ಲಿನ್ ಡಿ’ಸೋಜ ಹೇಳಿದರು.
ಕಾಲೇಜಿನ ಸುರಕ್ಷಾ ಗ್ರಾಹಕ ವೇದಿಕೆಯ ಆಶ್ರಯದಲ್ಲಿ ದಿನಾಂಕ ಜ.16ರಂದು ಜರಗಿದ ‘ಆನ್‌ಲೈನ್ ಮಾರ್ಕೆಟಿಂಗ್’ ಕುರಿತು ಜರಗಿದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ, ಆನ್ ಲೈನ್ ವ್ಯವಹಾರದಲ್ಲಿ ಸಮಗ್ರತೆಯ ಕೊರತೆ, ಭದ್ರತೆ ಮತ್ತು ಗೌಪ್ಯತೆಯ ಕೊರತೆ, ನಂಬಿಕೆಯ ಕೊರತೆ, ಕೆಳದರ್ಜೆಯ ವಸ್ತುಗಳ ಮತ್ತು ಸೇವೆಗಳ ಪೂರೈಕೆ, ದೋಶಪೂರಿತ ವಸ್ತುಗಳನ್ನು ಹಿಂತಿರುಗಿಸುವ ಸಮಸ್ಯೆ, ವಾರಂಟಿ ಸಮಸ್ಯೆ, ಇತ್ಯಾದಿಗಳು ಸಾಮಾನ್ಯವಾಗಿದ್ದು ಗ್ರಾಹಕರು ಎಚ್ಚರವಹಿಸುವ ಅಗತ್ಯವಿದೆ ಎಂದು ಹೇಳಿದರು.
ಆಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ  ಪ್ರೊ. ಲಿಯೊ ನೊರೊನ್ಹ ಮಾತನಾಡಿ, ಇಂದಿನ ಇಂಟರ್‌ನೆಟ್ ಪ್ರಪಂಚದಲ್ಲಿ ಯಾವುದೇ ಬೌಗೋಳಿಕ ಅಡೆತಡೆಯಿಲ್ಲದೆ ಬೇಕಾದ ವಸ್ತುಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಗ್ರಾಹಕ ತನ್ನ ಅಜ್ಞಾನ ಮತ್ತು ಅಜಾಗರುಕತೆಯಿಂದಾಗಿ, ವ್ಯವಹಾರದಲ್ಲಿ ಮೋಸ ಮತ್ತು ವಂಚನೆಗೊಳಪಟ್ಟು, ಕಷ್ಟ ನಷ್ಟಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಶ್ರೀರಕ್ಷಾ ಮತ್ತು ತಂಡದವರು ಪ್ರಾರ್ಥಿಸಿ, ವೇದಿಕೆಯ ಸಂಚಾಲಕ ಪ್ರೊ. ದಿನಕರ ರಾವ್ ಸ್ವಾಗತಿಸಿದರು. ಸದಸ್ಯ  ಚಿನ್ಮಯಿ ಎನ್ ಆರ್ ವಂದಿಸಿ,  ಮುಕುಂದಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.