ರಸ್ತೆ ಅಪಘಾತದಲ್ಲಿ ತಪ್ಪು ಮಾಡದಿದ್ದರೂ ದೊಡ್ಡ ವಾಹನಗಳ ಮೇಲೆ ಕೇಸು ದಾಖಲು-ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪದಲ್ಲಿ ರಾಜವರ್ಮ ಬಳ್ಳಾಲ್ ಖೇದ

Puttur_Advt_NewsUnder_1
Puttur_Advt_NewsUnder_1

RTO 1

ಚಿತ್ರ:ಶಿವ ಬನ್ನೂರು

ಪುತ್ತೂರು:ವಾಹನ ಅಪಘಾತದ ಸಂದರ್ಭದಲ್ಲಿ ಸಾಮಾನ್ಯವಾಗಿ ದೊಡ್ಡ ವಾಹನದ ಮೇಲೆ ಕೇಸು ದಾಖಲಾಗುವುದು ಅಧಿಕ. ಅಪಘಾತಕ್ಕೆ ಕಾರಣವಾದ ವಾಹನಗಳ ಬಗ್ಗೆ ಪರಿಗಣಿಸುವುದೇ ಇಲ್ಲ. ಅವುಗಳ ಮೇಲೆ ಕೇಸು ದಾಖಲಾಗುವುದಿಲ್ಲ ಎಂದು ಕೆನರಾ ಬಸ್ ಮ್ಹಾಲಿಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಬೇಸರ ವ್ಯಕ್ತಪಡಿಸಿದರು.  ಇದರಿಂದಾಗಿ ಅಪಘಾತದ ಪ್ರಮಾಣ ಜಾಸ್ತಿಯಾಗುತ್ತಿದೆಯೇ ಹೊರತು ಅಪಘಾತ ಪ್ರಮಾಣ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದರು.

ಬನ್ನೂರು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಜ.19ರಂದು ನಡೆದ 27ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ  ವರ್ಷಕ್ಕೆ ಸುಮಾರು 4.5ಲಕ್ಷ ಜನರು ವಾಹನ ಅಪಘಾತದಿಂಲೇ ಸಾವನ್ನಪ್ಪುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಅತೀ ವೇಗದ ಚಾಲನೆ, ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಬಳಕೆ, ಮದ್ಯಪಾನ ಮಾಡಿ ವಾಹನ ಚಲಾವಣೆ ಇವೆಲ್ಲಾ ಕಾರಣದಿಂದ ವಾಹನ ಅಪಘಾತಗಳು ಸಂಭವಿಸುತ್ತದೆ ಎಂದರು. ವಾಹನಗಳ ಸಂಖ್ಯೆ ಅಧಿಕವಾಗುತ್ತಾ ಹೋಗುತ್ತಿದೆ. ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಪೂರೈಸುವಲ್ಲಿ ಸರಕಾರ ವಿಫಲವಾಗಿದೆ. ವಾಹನಗಳ ಸಂಖ್ಯೆಗಳಿಗೆ ಅನುಗುಣವಾಗಿ ರಸ್ತೆಗಳ ಅಗಲೀಕರಣವಾಗುತ್ತಿಲ್ಲ ಎಂದು ಹೇಳಿದ ಅವರು ನಮ್ಮ ಜೀವಕ್ಕೆ ನಾವೇ ರಕ್ಷಣೆ ನೀಡಬೇಕು. ಈ ನಿಟ್ಟಿನಲ್ಲಿ ರಸ್ತೆ ಸಂಚಾರದ ನಿಯಮಗಳನ್ನು ಪಾಲನೆ ಮಾಡಬೇಕಾದ ಅಗತ್ಯತೆ  ಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಸಂಯೋಜಕ ಉದಯ ಶಂಕರ್ ಡಿ ಮಾತನಾಡಿ, ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ದ್ವಿಚಕ್ರ ಸವಾರರೇ ಅಧಿಕ. ಇದರಲ್ಲಿ ದೇಶದ ಆಸ್ತಿಯಂತಿರುವ ಯುವಕರೇ ಹೆಚ್ಚು. ಕೆಲವು ಸಂದರ್ಭಗಳಲ್ಲಿ ಅಮಾಯಕ ಪಾದಚಾರಿಗಳೂ ಜೀವ ಕಳೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅಪಘಾತ ಪ್ರಮಾಣ ಕಡಿಮೆ ಮಾಡಲು ಸರಕಾರ ಕೆಲವೊಂದು ರಸ್ತೆ ನಿಯಮಗಳನ್ನು ಜಾರಿ ಮಾಡುತ್ತಿದೆ. ದ್ವಿಚಕ್ರ ಸವಾರರು ಜೀವಕ್ಕೆ ರಕ್ಷಣೆ ನೀಡುವ ಹೆಲ್ಮೆಟ್ ಹಾಗೂ ಕಾರಿನಲ್ಲಿರುವವ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಧರಿಸಲೇಬೇಕು ಎಂದರು. ಅತೀ ವೇಗದ ವಾಹನ ಚಾಲನೆ, ಚಾಲನೆಯ ವೇಳೆ ಮೊಬೈಲ್ ಬಳಕೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ನಿಷೇಧಿಸಲಾಗಿರುತ್ತದೆ. ಈ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿದಾಗ ಅಪಘಾತದ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು. ಹಿರಿಯ ಮೋಟಾರು ನಿರೀಕ್ಷಕ ಶ್ರೀಧರ ರಾವ್ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ

ಅಪಘಾತ ರಹಿತ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿ ಚಾಲಕ ಗೋಪಾಲ ಗೌಡ ಎಂ, ರಿಕ್ಷಾ ಚಾಲಕರಾದ ರಮೇಶ್ ಶೆಟ್ಟಿ, ಶ್ರೀಧರ ಗೌಡ, ಅಬ್ದುಲ್ ಜಲೀಲ್, ಗಿರೀಶ್ ಹಾಗೂ ಶ್ರೀಧರ್‌ರವರನ್ನು ಸನ್ಮಾನಿಸಲಾಯಿತು. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸರ್ವೆ ಎಸ್‌ಜಿಎಂ ಪ್ರೌಢಶಾಲಾ ವಿದ್ಯಾರ್ಥಿ ರಮ್ಯಶ್ರೀ(ಪ್ರ), ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ದೀಕ್ಷಿತ್ ಕುಮಾರ್(ದ್ವಿ) ಆಲಂಕಾರು ದುರ್ಗಾಂಬ ಪ್ರೌಢಶಾಲಾ ಶರಣ್ಯ ಎಸ್ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪುತ್ತೂರು ಸೈಂಟ್ ವಿಕ್ಟರ‍್ಸ್ ಪ್ರೌಢಶಾಲಾ ಮೇಘನಾ ಪೈ(ಪ್ರ), ಕೆಯ್ಯೂರು ಸರಕಾರಿ ಪ್ರೌಢಶಾಲಾ ರೋಷನ್(ದ್ವಿ) ಹಾಗೂ ಫಿಲೋಮಿನಾ ಪ್ರೌಢಶಾಲಾ ಮಂಜುನಾಥ ಕರಡಿ(ತೃ)ಯವರಿಗೆ ಬಹುಮಾನ ವಿತರಿಸಲಾಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿ ಸೋಜ ಸ್ವಾಗತಿಸಿದರು. ಡಾಟಾ ಎಂಟ್ರಿ ಆಪರೇಟರ್ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ಸಿಬಂದಿ ಪುರುಷೋತ್ತಮ ವಂದಿಸಿದರು. ಗಾಯತ್ರಿ ಪ್ರಾರ್ಥಿಸಿದರು. ನಾಗರಾಜ್ ಹಾಗೂ ವಿವೇಕ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

RTO 2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.