ತಿಂಗಳಾಡಿ ದರ್ಬೆ-ತೆಗ್ಗು ರಸ್ತೆ ಡಾಮರೀಕರಣ ಕಳಪೆ-ಗ್ರಾಮಸ್ಥರಿಂದ ಡಾಮರೀಕರಣಕ್ಕೆ ವಿರೋಧ

ಪುತ್ತೂರು: ನಬಾರ್ಡ್ ಯೋಜನೆಯಡಿಯಲ್ಲಿ ಸುಮಾರು 45ಲಕ್ಷ ರುಪಾಯಿ ವೆಚ್ಚದಲ್ಲಿ ಡಾಮರೀಕರಣಗೊಳ್ಳುತ್ತಿರುವ ತಿಂಗಳಾಡಿ ದರ್ಬೆಯಿಂದ ತೆಗ್ಗು ಅಂಙತ್ತಡ್ಕ ರಸ್ತೆಯ ಡಾಮರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಡಾಮರೀಕರಣಕ್ಕೆ ತಡೆ ಒಡ್ಡಿದ ಘಟನೆ ಜ.19 ರಂದು ನಡೆದಿದೆ. ಕೆಯ್ಯೂರು ಗ್ರಾ.ಪಂ ಸದಸ್ಯ, ತೆಗ್ಗು ಶಾಲಾ ರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಮೇರ್ಲರವರು ಸ್ಥಳಕ್ಕೆ ಆಗಮಿಸಿ ಕಂಟ್ರಾಕ್ಟರ್‌ದಾರ ಶಿವಮೂರ್ತಿಯವರಲ್ಲಿ ಡಾಮರೀಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು. ಡಾಮರೀಕರಣ ಕಾಮಗಾರಿಯು ಸಂಪೂರ್ಣವಾಗಿ ಜನರ ಕೈಯಿಂದಲೇ ಆಗುತ್ತಿದ್ದು, ಯಂತ್ರಗಳನ್ನು ಬಳಸಿಕೊಳ್ಳದಿರುವ ಬಗ್ಗೆ ಅಲ್ಲದೆ 1.ಕಿ.ಮೀ ರಸ್ತೆ ಡಾಮರೀಕಣ ಆಗುತ್ತಿದ್ದು, ಡಾಮರೀಕರಣಕ್ಕೆ ತೊಡಗಿ 15ದಿನ ಕಳೆದರೂ ಇನ್ನೂ ಕೂಡ ಡಾಮರೀಕರಣ ಆಗದೇ ಇರುವ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಕಂಟ್ರಾಕ್ಟ್‌ದಾರ ಶಿವಮೂರ್ತಿಯವರು, ನಬಾರ್ಡ್ ಯೋಜನೆಯಲ್ಲಿ ನಾವು ಕೈಯಿಂದಲೇ ಡಾಮರೀಕರಣ ಮಾಡುತ್ತೇವೆ ಎಂದು ಬರೆದುಕೊಟ್ಟಿದ್ದೇವೆ. ಡಾಮರೀಕರಣದಲ್ಲಿ ಯಾವುದೇ ಕಳಪೆಯಾಗಿಲ್ಲ. ಡಾಂಬರ್ ಮಿಕ್ಸಿಂಗ್‌ಗೆ ಮೊದಲು ತಾಂತ್ರಿಕವಾಗಿ ಪರೀಕ್ಷಿಸಿಯೆ ಡಾಮರೀಕರಣ ಮಾಡುತ್ತಿದ್ದೇವೆ. ಮುಕ್ಕಾಲು ಇಂಚು ದಪ್ಪದಲ್ಲಿ ಜಿಲ್ಲಾ ಪಂಚಾಯತ್‌ನವರ ಗೇಜ್‌ನಂತಯೇ ಡಾಮರೀಕರಣ ಮಾಡಲಾಗುತ್ತದೆ. 2 ವರ್ಷಗಳ ವಾರಂಟಿ ಕೂಡ ಇದೆ. ಒಮ್ಮೆ ಹಾಕಿದ ಡಾಂಬರ್ ಗಟ್ಟಿಯಾಗಲು 20ದಿನಗಳು ಬೇಕಾಗುತ್ತದೆ. ಇನ್ನು 5ದಿನದಲ್ಲಿ ಡಾಮರೀಕರಣ ಮುಗಿಸಿಕೊಡುತ್ತೇವೆ ಎಂದು ಉತ್ತರಿಸಿದರು.ಇಂಜಿನಿಯರ್ ಜನಾರ್ದನ್‌ರವರು ಸ್ಥಳಕ್ಕೆ ಆಗಮಿಸಿ ಡಾಮರೀಕರಣವನ್ನು ಪರೀಕ್ಷಿಸಿ, ಯಾವುದೇ ರೀತಿಯ ಕಳಪೆಯಾಗದಂತೆ ಶೀಘ್ರದಲ್ಲಿ ಮುಗಿಸಿಕೊಡುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಓಲೆಮುಂಡೋವು ಮಸೀದಿಯ ಸದರ್ ಹಮೀದ್ ಮುಸ್ಲಿಯಾರ್, ಮೂಸೆಕುಂಞ ಅಂಙತ್ತಡ್ಕ, ಕಿಂಞಣ್ಣ ರೈ ಎರಕ್ಕಳ, ಶಾಹೀದ್ ಬಲ್ಕಾಡ್, ಜಯಂತ ಕುಮಾರ್ ಕೋಡಂಬು, ಕುಶಾಲಪ್ಪ ಗೌಡ, ತೆಗ್ಗು ಸ್ನೇಹ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಮೋಹನ್ ಗೌಡ ಎರಕ್ಕಳ, ತೆಗ್ಗು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಗೌಡ ನೆಲ್ಲಿಗುರಿ ಮತ್ತಿತರರು ಉಪಸ್ಥಿತರಿದ್ದರು.

IMG_20160119_104145

IMG_20160119_104042

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.