ಮಿಷನ್ 95+ಆಂದೋಲನವಾಗಲಿ ನೆಲ್ಯಾಡಿ ಮತ್ತು ಕೌಕ್ರಾಡಿ ಪಂಚಾಯತ್ ಅಧ್ಯಕ್ಷರುಗಳ ಕರೆ

Puttur_Advt_NewsUnder_1
Puttur_Advt_NewsUnder_1

IMG-20160119-WA0013

ಪುತ್ತೂರು: ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಮಿಷನ್ 95+ ಮುಂದುವರಿದ ಮನೆ-ಮನ ಭೇಟಿ ಕಾರ್ಯಕ್ರಮದಲ್ಲಿ ನೆಲ್ಯಾಡಿ ಪಂಚಾಯತ್ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕೌಕ್ರಾಡಿ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಸದಸ್ಯರಾದ ರವಿಪ್ರಸಾದ್ ಗುತ್ತಿನಮನೆ, ಲೋಕೇಶ್ ಬಾಣಜಾಲು, ಶಾಲಾ ಮುಖ್ಯಗುರು ರವೀಂದ್ರ.ಟಿ, ಶಿಕ್ಷಕ ಶಿಕ್ಷಕಿಯರಾದ ಸರೋಜಕುಮಾರಿ.ಎಂ, ತೋಮಸ್ ಎಂ.ಐ, ಹರ್ಷಿತ, ಪ್ರಫುಲ್ಲ, ಭವ್ಯ, ಗೋಳಿತೊಟ್ಟು ಪ್ರಾಥಮಿಕ ಶಾಲಾ ಮುಖ್ಯಗುರು ಶೀನಪ್ಪ, ನಿವೃತ್ತ ಶಿಕ್ಷಕ ವಿ.ಆರ್.ಹೆಗ್ದೆ ಇವರ ಜತೆ ಸೇರಿ ಗ್ರಾಮದ 15 ಎಸ್.ಎಸ್.ಎಲ್.ಸಿ ಓದುವ ಮಕ್ಕಳ ಮನೆಗಳಿಗೆ ಭೇಟಿ ನೀಡಿದರು. ನಮ್ಮ ಗ್ರಾಮಗಳ ಎಲ್ಲಾ ಮಕ್ಕಳು ಭವಿಷ್ಯಕ್ಕೆ ದಿಕ್ಸೂಚಿ ಆಗಬಲ್ಲ ಈ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿ ಊರಿಗೆ ಕೀರ್ತಿ ತರಬೇಕೆಂದು ಹಾರೈಸಿ ಮನೆ-ಮನ ಭೇಟಿ ಒಂದು ಆಂದೋಲನವಾಗಿ ಮೂಡಿಬರಲಿ ಎಂದು ಹಾರೈಸಿದರು.
ಭೇಟಿ ಸಂದರ್ಭದಲ್ಲಿ ಮಕ್ಕಳ ಪಾಲಕರಿಂದ ಬಂದ ಮನದಾಳದ ಮಾತು ಗಮನಾರ್ಹವಾಗಿತ್ತು. ನನ್ನ ಮಗ ಬೆಳಿಗ್ಗೆ ಏಳು ಗಂಟೆ ಆದರೂ ಓದಿಗೆ ತೊಡಗುವುದಿಲ್ಲ, ಓದುತ್ತಾನೆ ಆದರೆ ಅಂಕ ಬರುವುದಿಲ್ಲ, ರಜೆಸಿಕ್ಕಿದ್ರೆ ಆಟದ ಗ್ರೌಂಡಲ್ಲಿಯೇ ದಿನಕಳೆಯುತ್ತಾನೆ ಇತ್ಯಾದಿ ಸಮಸ್ಯೆಗಳನ್ನು ಮುಂದಿಟ್ಟರು.
ಉತ್ತರಿಸಿದ ಸ್ಥಳೀಯ ಜನಪ್ರತಿನಿಧಿಗಳು ಮಕ್ಕಳು ಮನೆ ವೇಳಾಪಟ್ಟಿಯಂತೆ ಮುಂಜಾನೆ 5 ಗಂಟೆಯಿಂದ ರಾತ್ರಿ 10.30ಗಂಟೆ ತನಕ ಓದಬೇಕು, ಶುಭ್ರ ಉಡುಪು ಧರಿಸಿಯೇ ಓದಲು ಪ್ರಯತ್ನಿಸಬೇಕು, ಪಾಲಕರು ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಬೇಕು. ಶಿಕ್ಷಕರು ಹೇಳುವಂತೆ ಪಾಸಾಗುವ ಮಾರ್ಗೋಪಾಯ ಪಾಲಿಸಬೇಕು, ನಿರ್ಲಕ್ಷಭಾವನೆಯಿಂದ ಕಲಿಕಾ ವರ್ಷ ಹಾಳು ಮಾಡಿಕೊಳ್ಳಬಾರದು, ನಾವೂ ಮಕ್ಕಳ ಪ್ರಾಯದಲ್ಲಿ ಪ್ರಾಮಾಣಿಕವಾಗಿ ಓದಿಯೇ ಈ ಸ್ಥಾನಕ್ಕೆ ಏರಿದ್ದು, ನೀವೂ ಪ್ರಯತ್ನಿಸಿ ಆಗ ಪ್ರಕಾಶಿಸುತ್ತೀರಿ ಎಂಬ ಆತ್ಮಸ್ಥೈರ್ಯದ ಮಾತುಗಳಿಂದ ಮಕ್ಕಳನ್ನು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಒಟ್ಟು 16 ಪಾಲಕರ ಮನೆಗಳನ್ನು ಸಂದರ್ಶಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.