Breaking News

ಹಿರೇಬಂಡಾಡಿ: ಸಾವಯವ ಭಾಗ್ಯ ಯೋಜನೆ

Puttur_Advt_NewsUnder_1
Puttur_Advt_NewsUnder_1

20160118235507ಹಿರೇಬಂಡಾಡಿ: ಕೃಷಿ ಇಲಾಖೆ ಪುತ್ತೂರು ತಾಲೂಕು ರೂರಲ್ ಡೆವಲಪ್‌ಮೆಂಟ್ ಆರ್ಗನೈಝೇಷನ್ ಟ್ರಸ್ಟ್ ದೊಡ್ಡಬಳ್ಳಾಪುರ ಇದರ ಆಶ್ರಯದಲ್ಲಿ ಸಾವಯವ ಭಾಗ್ಯ ಯೋಜನೆ ಉತ್ಪಾದನಾ ಮಾರುಕಟ್ಟೆ ಆಧಾರಿತ ತರಬೇತಿ, ನೇತ್ರಾವತಿ ಸಾವಯವ ನೌಕರರ ಸಂಘ ಹಿರೇಬಂಡಾಡಿ ಗ್ರಾಮ ಉಪ್ಪಿನಂಗಡಿ ಇದರ ಸಭೆಯು  ಜ .19ರಂದು ಗ್ರಾ.ಪಂ.ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ದೇವಿದಾಸ ರೈ ವಹಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕೃಷಿ ಅಧಿಕಾರಿ ವಿಠಲ ರೈ ಸಭೆಗೆ ಸಾವಯವ ಭಾಗ್ಯ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಹೋಬಳಿ ಕೃಷಿ ಅಧಿಕಾರಿ  ಬರ್ಮಣ್ಣ, ಸಾವಯವ ಭಾಗ್ಯ ಯೋಜನೆಯ ಕ್ಷೇತ್ರಾಧಿಕಾರಿ ನೋಣಯ್ಯ ಉಪಸ್ಥಿತರಿದ್ದರು. ಬರ್ಮಣ್ಣ ಇವರು ಪ್ರಾಸ್ತಾವಿಕ ಮಾತನಾಡಿದರು.  ಸಾವಯವ ಭಾಗ್ಯ ಯೋಜನೆ ಕ್ಷೇತ್ರಾಧಿಕಾರಿ ನೋಣಯ್ಯ ಸ್ವಾಗತಿಸಿ,. ಹಿರೇಬಂಡಾಡಿ ಕ್ಷೇತ್ರ ಸಹಾಯಕ ಸಾವಯವ ಭಾಗ್ಯ ಯೋಜನೆಯ ಅಧಿಕಾರಿ ಝಕಾರಿಯ ವಂದಿಸಿದರು. ಈ ಸಂದರ್ಭದಲ್ಲಿ ಸಾವಯವ ಭಾಗ್ಯ ಯೋಜನೆಯ ಫಲಾನುಭವಿಗಳಾದ ಚಂದ್ರಶೇಖರ ಮಾಳ, ಚಿದಾನಂದ ಗುಂಡ್ಯ, ವಿಠಲ ಪರಕೇಡಂಗೆ ಸುಲೈಮಾನ್, ಚಂದ್ರಶೇಖರ ನಂದಿನಿ ನಗರ, ಸಿ.ಎ.ಬ್ಯಾಂಕ್ ನಿರ್ದೇಶಕ ಧರ್ಣಪ್ಪ ಪೂಜಾರಿ, ಹಿರೇಬಂಡಾಡಿ ಗ್ರಾ.ಪಂ.ಸದಸ್ಯ ನಳಿನಾಕ್ಷಿ, ಮಾಜಿ ಸದಸ್ಯ ಸೇಸಪ್ಪ ನೆಕ್ಕಿಲು, ದಿವ್ಯಾ ನಿಡ್ಡೆಂಕಿ, ಚಂದ್ರಶೇಖರ ಹೆಣ್ಣಾಳ ಮತ್ತಿತರರು ಉಪಸ್ಥಿತರಿದ್ದರು.

20160118235510

20160118235509

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.