ಬಲಾತ್ಕಾರದ ಬಂದ್, ಕೋಮು ಯಾ ಇತರ ಗಲಭೆ ವಿರುದ್ಧದ ಸುದ್ದಿ ಆಂದೋಲನಕ್ಕೆ ಬಲ್ನಾಡು ಪ್ರಾ.ಕೃ.ಪ. ಸಹಕಾರಿ ಸಂಘ ಬೆಂಬಲ ಸೂಚಿಸಿ ನಿರ್ಣಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಯಾವುದೇ ರೀತಿಯ ಗಲಭೆ ವಿರುದ್ಧ ಸುದ್ದಿ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿದೆ. ಸಭೆಯು ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ್ಚಂದ್ರ ಆಳ್ವರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುದ್ದಿ ವೇದಿಕೆಯ ಮನವಿಯನ್ನು ಸಭೆಯಲ್ಲಿ ಮಂಡಿಸಿದ ಅಧ್ಯಕ್ಷರು, ಬಲಾತ್ಕಾರದ ಬಂದ್ ನಡೆಸುತ್ತಿರುವುದರಿಂದ ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುವುದರಿಂದ ಬಲಾತ್ಕಾರದ ಬಂದ್ ನಡೆಸುವುದಕ್ಕೆ ನಮ್ಮ ಸಂಘದ ಆಡಳಿತ ಮಂಡಳಿಯವರ ವಿರೋಧವಿದೆ ಎಂದು ಹೇಳಿದರು. ಇದಕ್ಕೆ ಇತರ ನಿರ್ದೇಶಕರು ಬೆಂಬಲ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ರಮೇಶ್ ನಾಯ್ಕ, ನಿರ್ದೇಶಕರಾದ ಕೆ. ಚಂದಪ್ಪ ಪೂಜಾರಿ ಕಾಡ್ಲ, ಸತೀಶ್ ಗೌಡ, ಕಿರಣ್ ಕುಮಾರ್ ರೈ ಮತ್ತು ಅಬ್ದುಲ್ ಹಕೀಂ ಉಪಸ್ಥಿತರಿದ್ದರು. ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.