ಕಲ್ಕಂಪಾಡಿ ಗುತ್ತುನಲ್ಲಿ ಪ್ರತಿಷ್ಠಾ ಕಲಶಾಭಿಶೇಕ

Puttur_Advt_NewsUnder_1
Puttur_Advt_NewsUnder_1

3ಆಲಂಕಾರು: ದುಗಲಾಯಿ, ಪಂಜುರ್ಲಿ, ಕಲ್ಲುರ್ಟಿ ಮತ್ತು ಪರಿವಾರ ದೈವಗಳು ಕಲ್ಕಂಪಾಡಿ ಗುತ್ತುನಲ್ಲಿ ಪುನರ್ ಪ್ರತಿಷ್ಠೆ ಕಲಶಾಭಿಶೇಕ ತರವಾಡು ಮನೆಯ ಗೃಹಪ್ರವೇಶ ದೈವಗಳ ನೇಮನಡಾವಳಿ ಜ.14ರಂದು ನಡೆಯಿತು.
ಬ್ರಹ್ಮಶ್ರೀ ರಾಧಾಕೃಷ್ಣ ಕುದ್ರೆತ್ತಾಯ ಅವರ ನೇತೃತ್ವದಲ್ಲಿ ದೈವಾಲಯ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶಿದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಬಿಂಬಾದಿವಸ, ರಕ್ಷೆ, ಹಾಗೂ ಶುಕ್ರವಾರ ಬೆಳಿಗ್ಗೆ ಗಣಹೋಮ, ಕಲಶಾರಾಧನೆ, ದೈವ ಪ್ರತಿಷ್ಠೆ, ಗ್ರಹಪ್ರವೇಶ, ವೆಂಕಟರಮಣ ದೇವರ ಪೂಜೆ, ತಂಬಿಲ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ತರವಾಡು ಮನೆಯಲ್ಲಿ ದೈವಸ್ಥಾನದಲ್ಲಿ ಸಕ್ರಿಯವಾಗಿ ಪಾತ್ರವಹಿಸಿದ ಟಿ.ನಾಗರಾಜ್ ಭಟ್ ರವರನ್ನು, ಆರ್‍ವಾರ ಬಾಳಿಕೆ ಯಜಮಾನ ಭಂಡಾರಿ ಶೆಟ್ಟಿಯವರು ಸನ್ಮಾನಿಸಿದರು. ಆರ್‍ವಾರ ಬಾಳಿಕೆ ಸಂತೋಷ್ ರೈಯವರು ಒಟ್ಟು ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸನ್ಮಾನಿತರ ಪರಿಚಯವನ್ನು ಮಾಡಿ ದೈವಸ್ಥಾನ ಮತ್ತು ತರವಾಡು ಮನೆ ನಡೆದುಬಂದ ರೀತಿಯನ್ನು ತಿಳಿಸಿದರು. ಜಗದೀಶ್ ಶೆಟ್ಟಿ, ಮಹಾಬಲ ಶೆಟ್ಟಿ, ಸುರೇಶ್ ರೈ ತಂಡದವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ರಾತ್ರಿ ದುಗಲಾಯಿ, ಪಂಜುರ್ಲಿ, ಕಲ್ಲುರ್ಟಿ ದೈವಗಳ ಭಂಡಾರ ತೆಗೆದು ನೇಮನಡಾವಳಿ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ, ಸೇಸಪ್ಪ ರೈ.ಕೆ ರಾಮಕುಂಜ, ರಾಮಮೋಹನ್ ರೈ ಸುರುಳಿ, ಪ್ರಶಾಂತ್ ರೈ ಎಂ., ಮನವಳಿಕೆ, ಕೆ.ಬಿ.ಬಾಲರಾಜ್ ರೈ, ಕೋಡಿಯಾಲಗುತ್ತು, ವಕೀಲರಾದ ಸೀತಾರಾಮ ಶೆಟ್ಟಿ ಮಂಗಳೂರು, ವಕೀಲರಾದ ಆರ್‍ವಾರ ಬಾಳಿಕೆ ದಿನಕರ ರೈ, ಸುಭಾಶ್ ಶೆಟ್ಟಿ ಆರ್‍ವಾರ, ಅಶೋಕ ರೈ ಬುಡಲೂರು, ಪ್ರತಾಪ್‌ಚಂದ್ರ ಶೆಟ್ಟಿ ಮಂಗಳೂರು, ಹಾಗೂ ಕಲ್ಕಂಪಾಡಿ ಗುತ್ತುನ ಶ್ರೀಮತಿ ಭಾಮಾ ವಿ.ರೈ ಮತ್ತು ಸಹೋದರಿಯರು, ಕೆ.ದೇವದಾಸ ಶೆಟ್ಟಿ, ಸಹೋದರ ಸಹೋದರಿಯರು ಮತ್ತು ಕುಟುಂಬಸ್ಥರು, ಊರ ಪರವೂರ ಬಂದು ಮಿತ್ರರು ಉಪಸ್ಥಿತರಿದ್ದರು.

2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.