ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಬೃಹತ್ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ

Puttur_Advt_NewsUnder_1
Puttur_Advt_NewsUnder_1

matada bettu

ಪುತ್ತೂರು: ನೂರು ವರ್ಷಗಳಷ್ಟು ಇತಿಹಾಸವಿರುವ ಕೋಡಿಂಬಾಡಿ ಗ್ರಾಮದ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜ.17 ರಿಂದ 24ರ ತನಕ ನಡೆಯಲಿರುವ ಪುನ:ಪ್ರತಿಷ್ಠಾ-ಬ್ರಹ್ಮಕಲಶಾಭಿಷೇಕದ ಅಂಗವಾಗಿ ಜ.19ರಂದು ಹೊರೆಕಾಣಿಕೆ ಸಮರ್ಪಣೆ ಸಂಜೆ ದೇವಳದ ತಂತ್ರಿ ಹಾಗೂ ಹೆಬ್ಬೂರು ಮಠದ ಶ್ರೀ ಮಾಧಶವಾಶ್ರಮ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ ಕಾರ‍್ಯಕ್ರಮ ನಡೆಯಿತು.

ಬೆಳಿಗ್ಗೆ ಮಾಣಿ, ಪೆರ್ನೆ, ಬಿಳಿಯೂರು ಮತ್ತು ಪರಿಸರದ ಭಕ್ತರಿಂದ ಬೃಹತ್ ಹೊರೆಕಾಣಿಕೆಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಸಮರ್ಪಣೆ ನಡೆಯಿತು. ಬಳಿಕ ಉಗ್ರಾಣ ಮುಹೂರ್ತವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ನೆರವೇರಿಸಿದರು. ಬಳಿಕ ಪೆರ್ನೆ ಶ್ರೀರಾಮ ಭಜನಾ ಮಂದಿರದ ತಂಡದಿಂದ ಭಜನಾ ಕಾರ‍್ಯಕ್ರಮ ನಡೆಯಿತು. ಸಾಂಸ್ಕೃತಿಕ ಸಮಿತಿ ಸಂಚಾಲಕ, ನಿವೃತ್ತ ಪ್ರಾಂಶುಪಾಲ ಬಿ.ರಾಧಾಕೃಷ್ಣ ಭಟ್ ಬಟ್ರಪ್ಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಜಯಾನಂದ ಕೋಡಿಂಬಾಡಿ, ಬ್ರಹ್ಮಶ್ರೀ ವೇ| ಮೂ| ಸೂರ್ಯನಾರಾಯಣ ಭಟ್, ಸಮಿತಿ ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಮುರಳೀಧರ ರೈ ಮಠಂತಬೆಟ್ಟು, ಸಮಿತಿ ಮಹಾಪ್ರಧಾನ ಕಾರ‍್ಯದರ್ಶಿ ದೇವಳದ ಅರ್ಚಕ ಎಂ.ನಾಗೇಶ ಶರ್ಮ, ಸಮಿತಿ ಕಾರ‍್ಯದರ್ಶಿ ಜಯಪ್ರಕಾಶ್ ಬದಿನಾರು, ಜೊತೆ ಕಾರ‍್ಯದರ್ಶಿಗಳಾದ ರಮೇಶ್ ನಾಯಕ್ ನಿಡ್ಯ, ಯೋಗೀಶ್ ಸಾಮಾನಿ, ಕರುಣಾಕರ ಸಾಮಾನಿ, ಉಗ್ರಾಣ ಸಮಿತಿ ಸಂಚಾಲಕ ಬಿ.ವಿಷ್ಣು ರಾವ್ ಬೆಟ್ಟಂಪಾಡಿ, ನವೀನ ಭಂಡಾರಿ, ವಂಕಪ್ಪ ನಾಕ್ ಅಗರ್ತಬೈಲು, ಹೊರೆಕಾಣಿಕೆ ಸಮಿತಿ ಸಂಚಾಲಕ ಮೋಹನ್ ಪಕ್ಕಳ ಕುಂಡಾಪು, ಸಾಂಸ್ಕೃತಿಕ ಕಾರ‍್ಯಕ್ರಮ ಸಮಿತಿ ಸದಸ್ಯ ಶಿವಪ್ರಸಾದ್ ರೈ ಮಠಂತಬೆಟ್ಟು ಮತ್ತಿತರ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಜೆ ನಡೆದ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ಸಮಿತಿ ಉಪಾಧ್ಯಕ್ಷ ಕಡಬ ಪುತ್ರಬೈಲು ಎಂ.ಸೀತಾರಾಮ ರಾವ್‌ರವರು ಉದ್ಘಾಟಿಸಿದರು. ಕರಾಯ ಶ್ರೀಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ‍್ಯಕ್ರಮ ನಡೆಯಿತು. ರಾತ್ರಿ ಮೀನಾಕ್ಷಿ ಶಾಂತಾರಾಮ ತಾಳೆಪ್ಪಾಡಿ ಮತ್ತು ಪಡುಮಲೆ ಮಧುಮಿತ ಪ್ರವೀಣ್ ಕುಮಾರ್‌ರವರಿಂದ ಸಂಗೀತ ಕಚೇರಿ ನಡೆಯಿತು. ಬಳಿಕ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ‘ಶಾಂಭವೀವಿಲಾಸ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ಇಂದು ಶ್ರೀಕೃಷ್ಣ ಪಾರಿಜಾತ ಯಕ್ಷಗಾನ: ಜ.೨೦ರಂದು ಸಂಜೆ ಸಭಾಕಾರ‍್ಯಕ್ರಮದ ಬಳಿಕ ರಾತ್ರಿ ಶ್ರೀ ಸುಬ್ರಹ್ಮಣ್ಯ ಸಭಾ ಯಕ್ಷಗಾನ ಕಲಾಮಂಡಳಿ  ಮಂಗಳೂರು ಇವರಿಂದ ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಕ್ಷೇತ್ರ ತಂತ್ರಿ, ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ

ಹೆಬ್ಬೂರು ಮಠದ ಶ್ರೀ ಮಾಧವಾಶ್ರಮ ಸ್ವಾಮೀಜಿ ಮತ್ತು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿಯವರವನ್ನು ಸಂಜೆ  ವಾದ್ಯಘೋಷ, ಪೂರ್ಣ ಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ದೇವತಾ ಪ್ರಾರ್ಥನೆ, ಸಪ್ತಶುದ್ಧಿ,ಪ್ರಾಸಾದ ಶುದ್ಧಿ, ಅಸ್ತ್ರಕಲಶ ಪ್ರತಿಷ್ಠಾ ರಾಕ್ಷೋಘ್ನಹೋಮ,ವಾಸ್ತುಪೂಜಾ,ವಾಸ್ತುಹೋಮ,ವಾಸ್ತುಬಲಿ,ದಿಗ್ಬಲಿ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.