Breaking News

ಗ್ರಾ.ಪಂ.ಗಳಲ್ಲಿ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ

Puttur_Advt_NewsUnder_1
Puttur_Advt_NewsUnder_1

ನರಿಮೊಗರು: ದ.ಕ., ಉ.ಕ., ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕ ಮಗಳೂರು ಜಿಲ್ಲೆಗಳ ಗ್ರಾ.ಪಂ.ಗಳಲ್ಲಿನ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಪಂ.ರಾಜ್ (ಗ್ರಾ.ಪಂ.ಗಳ ಆಯವ್ಯಯ, ಲೆಕ್ಕಪತ್ರಗಳು) ನಿಯ ಮಗಳು ೨೦೦೬ಕ್ಕೆ ತಿದ್ದುಪಡಿಯನ್ನು ಕರ್ನಾಟಕ ಪಂ.ರಾಜ್ ನಿಯಮಗಳು 2013ನ್ನು2014ರ ಜ.21ರಂದು ಹೊರಡಿಸಲಾಗಿದ್ದು, ಈ ತಿದ್ದುಪಡಿ ನಿಯಮ ಗಳನ್ವಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಕ್ರಮಬದ್ಧವಲ್ಲದ ಆಸ್ತಿಗಳ (ನಿವೇಶನ, ಕಟ್ಟಡಗಳಿಗೆ) ಸಂಬಂಧಿಸಿದ ತೆರಿಗೆ ನಿರ್ಧರಣಾ ಪಟ್ಟಿಯನ್ನು ನಮೂನೆ 11ಬಿ ಮೂಲಕ ನಿರ್ವಹಿಸಲು ನಿಗದಿಪಡಿಸಲಾಗಿತ್ತು. ಸದ್ರಿ ನಿರ್ಧರಣೆ ಪಟ್ಟಿಯನ್ನು ನಮೂನೆ-11ಬಿ ಮೂಲಕ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯ ಮೂಲಕ ವಿತರಿಸುವ ಬಗ್ಗೆ ಸುತ್ತೋಲೆಯಲ್ಲಿ ಸವಿವರವಾಗಿ ತಿಳಿಸಲಾಗಿತ್ತು.
ಆದರೆ ತಿದ್ದುಪಡಿ ನಿಯಮಗಳು ಜಾರಿಗೆ ಬಂದ ನಂತರ ದ.ಕ., ಉ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕೆಲವು ತೊಂದರೆ ಗಳು, ಸಮಸ್ಯೆಗಳು, ಗೊಂದಲಗಳಿರುವ ಬಗ್ಗೆ ಸರ್ಕಾರಕ್ಕೆ ಮನವಿಗಳು ಬಂದಿ ರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸದ್ರಿ ಜಿಲ್ಲೆಗಳ ಗ್ರಾ.ಪಂ.ಗಳಲ್ಲಿನ ಇ-ಸ್ವತ್ತು ತಂತ್ರಾಂಶದಿಂದ ತಾತ್ಕಾಲಿಕ ಮತ್ತು ಮುಂದಿನ ಆದೇಶದವರೆಗೆ ವಿನಾಯಿತಿ ನೀಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.